ಮೇಲು ಸೇತುವೆಯ ಸರ್ವಿಸ್ ರಸ್ತೆ ದುರಸ್ತಿಗೆ ಆಗ್ರಹ-Demand for repair of the service road of the flyover

SUDDILIVE || SHIVAMOGGA

ಮೇಲು ಸೇತುವೆಯ ಸರ್ವಿಸ್ ರಸ್ತೆ ದುರಸ್ತಿಗೆ ಆಗ್ರಹ-Demand for repair of the service road of the flyover    

Demand, repair


ಮುಂದಾಲೋಚನೆಯ ಕೊರತೆ ಹಾಗೂ ರಾಜಕೀಯ ಮೇಲಾಟಕ್ಕೆ ಬಲಿಯಾಗಿ ವಾಹನ ಸಂಚಾರಕ್ಕೆ ಕುಂದು ಉಂಟಾಗಿರುವ ಸವಳಂಗ ರಸ್ತೆಯ ರೈಲ್ವೆ ಓವರ್ ಬ್ರಿಡ್ಜ್   ವಿರುದ್ಧ ರಾಜಕೀಯ ಪಕ್ಷವೊಂದು ದುರಸ್ಥಿಗೊಳಿಸಿ ಎಂದು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಸಂಸದರು ನಗರದಲ್ಲಿ ಅಭಿವೃದ್ಧಿಯ ಹರಿಕಾರರೆಂಬ ಬಿರುದು ಪಡೆದುಕೊಂಡಿರುವುದೇನೋ ನಿಜ, ಆದರೆ  ಸವಳಂಗ ರಸ್ತೆಯ ರೈಲ್ವೆ ಓವರ್ ಬ್ರಿಡ್ಜ್ ನ್ನ ರಾಜಕೀಯ ಹಿತಾಸಕ್ತಿಗಾಗಿ ಮಣಿದು ನಿರ್ಮಿಸಿರುವುದು ಮಾತ್ರ ಎದ್ದು ಕಾಣುತ್ತಿದೆ. ಯಾವತ್ತೂ ಯೋಜನೆಗಳು 20 ವರ್ಷದ ಮುಂದಾಲೋಚನೆಯಿಂದ ನಿರ್ಮಿಸಬೇಕು ಎಂಬ ಕಾಮನ್ ಸೆನ್ಸ್ಇಲ್ಲಿ ಮಾಯವಾದ ಪರಿಣಾಮ ವಾಹನಗಳಲ್ಲಿ ಈ ರೈಲ್ವೆ ಓವರ್ ಬ್ರಿಡ್ಜ್ ನಲ್ಲಿ ಓಡಾಡುವುದೇ ದುಸ್ಥಿರವಾದಂತಿದೆ. 

ನಗರದ ಮುಖ್ಯ ರಸ್ತೆ ಉಷಾ ನರ್ಸಿಂಗ್ ಹೋಂ ವೃತ್ತದಿಂದ ಎಲ್‌ಬಿಎಸ್ ನಗರದವರೆಗೂ ಮೇಲು ಸೇತುವೆಯ ಸರ್ವಿಸ್ ರಸ್ತೆಗಳು ಸಂಪೂರ್ಣವಾಗಿ ಸಂಚಾರಕ್ಕೆ ಉಪಯೋಗಕ್ಕೆ ಬಾರದ ರೀತಿಯಲ್ಲಿ ದುಸ್ತಿಸ್ಥಿತಿಯಾಗಿದ್ದು, ದುರಸ್ಥಿಗೊಳಿಸುವಂತೆ ಆಗ್ರಹಿಸಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ ಅವರ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

Demand, repair

ಹಲವಾರು ಬಾರಿ ರಸ್ತೆಯ ದುರಸ್ತಿಗೆ ಮನವಿ ಮಾಡಿದ್ದರೂ ಯಾವುದೇ ರೀತಿ ದುರಸ್ತಿ ಕಾರ್ಯ ಆಗಿರುವುದಿಲ್ಲ. ಇದು ಸಾಲದೆಂಬಂತೆ ಅಲ್ಲಿನ ಸ್ಥಳೀಯರೊಬ್ಬರು ತಮ್ಮ ಖಾಸಗಿ ಜಾಗವನ್ನು ಅಭಿವೃದ್ಧಿಪಡಿಸಲು ಅತಿ ಭಾರವಾದ ವಾಹನಗಳನ್ನು ಬಳಸಿದ್ದು ಈಗಂತು ಸಾರ್ವಜನಿಕರು ನಡೆದಾಡಲು ಕೂಡ ಅಸಾಧ್ಯವಾಗಿದೆ ಹಾಗೂ ಸೇತುವೆಯ ಕೆಳಭಾಗದಲ್ಲಿ ಯಾವುದೇ ರೀತಿಯಾ ಅಭಿವೃದ್ಧಿಪಡಿಸದ ಕಾರಣ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ ಹಾಗೂ ಮಳೆಯ ನೀರು ಅಲ್ಲೇ ನಿಲ್ಲುವುದರಿಂದ ಅತಿಯಾದ ಸೊಳ್ಳೆಗಳ ಉತ್ಪತ್ತಿಯಿಂದ ಮಾರಣಾಂತಿಕವಾದ ಡೆಂಗ್ಯೂ ರೋಗಕ್ಕೂ ಕಾರಣವಾಗಿದೆ ಎಧು ಮನವಿಯಲ್ಲಿ ಆರೋಪಿಸಲಾಗಿದೆ.

ಜನರ ಸುರಕ್ಷತೆ ಹಾಗೂ ರಕ್ಷಣೆಯ ಜವಬ್ದಾರಿ ಹೊಂದಿರುವ ಮಹಾನಗರಪಾಲಿಕೆ ಇಂದು ಕೈಚೆಲ್ಲಿ ಕೂತಿರುವುದು ದುರಾದೃಷ್ಟಕರ ಎಷ್ಟೇ ಬಾರಿ ಸ್ಥಳೀಯ ಮಹಾನಗರಪಾಲಿಕೆ ಅಭಿಯಂತರರಿಗೂ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ದಯಮಾಡಿ ಅದಷ್ಟು ಬೇಗ ಈ ರಸ್ತೆ ಹಾಗೂ ಮೆಲುಸೇತುವೆಯ ಕೆಳಭಾಗದ ದುರಸ್ತಿ ಹಾಗೂ ಅಭಿವೃದ್ಧಿ ಕಾರ್ಯವನ್ನು ಮಾಡಬೇಕೆಂದು ಮತ್ತು ಅಕ್ಕಮಹಾದೇವಿ ವೃತ್ತವು ಸಂಪೂರ್ಣವಾಗಿ ಹಾಳಾಗಿದ್ದು ಅದರ ದುರಸ್ತಿಗೆಂದು ಕೇವಲ ಜಲ್ಲಿ ಕಲ್ಲುಗಳನ್ನ ಹಾಕಿದ್ದು ಅದರಿಂದ ಸಾರ್ವಜನಿಕರಿಗೆ ಸಾಕಷ್ಟು ಅಪಘಾತಗಳಿಗೆ ಕಾರಣವಾಗಿದೆ. ಆದ್ದರಿಂದ ಆ ವೃತ್ತವನ್ನು ಶಿಘ್ರವೇ ತಮ್ಮ ಅನುದಾನದ ಅಡಿಯಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೋಳ್ಳಬೇಕೆಂದು ಒತ್ತಾಯಿಸಲಾಗಿದೆ. 

ಈ ಸರ್ವಿಸ್ ರಸ್ತೆ ದುರಸ್ತಿಗೆ ಕಾರಣರಾದ ಖಾಸಗಿ ವ್ಯಕ್ತಿಗೆ ಹಿಂಬರವನ್ನು ನೀಡಿ ಮುಂದಿನ ದಿನಗಳಲ್ಲಿ ಅತಿಭಾರವಾದ ವಾಹನಗಳನ್ನು ಆ ರಸ್ತೆಯಲ್ಲಿ ಉಪಯೋಗಿಸದಂತೆ ಹಾಗೂ ಹಾಳು ಮಾಡಿರುವ ರಸ್ತೆಯನ್ನು ದುರಸ್ತಿ ಮಾಡುವಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮನವಿ ನೀಡುವ ಸಂದರ್ಭದಲ್ಲಿ ರಾಷ್ಟ್ರ ಭಕ್ತರ ಬಳಗದ  ಪ್ರಮುಖವಾದ ಕೆ.ಈ.ಕಾಂತೇಶ್ ಇದ್ದರು.

Demand for repair of the service road of the flyover

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close