ಮೊಬೈಲ್ ಚಾರ್ಜ್ ಹಾಕುವ ವಿಚಾರದಲ್ಲಿ ಗಲಾಟೆ, ಕೊಲೆ,ಆರೋಪಿಗೆ ಶಿಕ್ಷೆ- Riot, murder, accused sentenced over mobile phone charging issue

SUDDILIVE || SHIVAMOGGA

ಮೊಬೈಲ್ ಚಾರ್ಜ್ ಹಾಕುವ ವಿಚಾರದಲ್ಲಿ ಗಲಾಟೆ, ಕೊಲೆ,ಆರೋಪಿಗೆ ಶಿಕ್ಷೆ-  Riot, murder, accused sentenced over mobile phone charging issue  

Riot, murder

ಮೊಬೈಲ್ ಚಾರ್ಜ್ ಹಾಕುವ ವಿಚಾರದಲ್ಲಿ ಗಲಾಟೆ ನಡೆಸಿ ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಸಾಗರದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ 4 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 13,000/-   ದಂಡ ವಿಧಿಸಿ ತೀರ್ಪು ನೀಡಿದೆ.

ದಿನಾಂಕ: 07-11-2022 ರಂದು ರಾತ್ರಿ ಸಿದ್ದಪ್ಪ, 38 ವರ್ಷ, ವಾಸ ಮೂರಳ್ಳಿ ಮಾರತಿ ಗ್ರಾಮ ಸಾಗರ ಈತನು ತಿಮ್ಮಪ್ಪ, 52 ವರ್ಷ, ಮೂರಳ್ಳಿ ಮಾರತಿ ಗ್ರಾಮ ಸಾಗರ ರವರ ಮನೆಗೆ ಅಕ್ರಮ ಪ್ರವೇಶ ಮಾಡಿ, ಮೊಬೈಲ್ ಚಾರ್ಜ್ ಹಾಕುವ ವಿಚಾರದಲ್ಲಿ ತಿಮ್ಮಪ್ಪ ಮತ್ತು ಆತನ ಪತ್ನಿ ಶ್ರೀಮತಿ ಲಕ್ಷ್ಮಿ 37 ವರ್ಷ ರವರೊಂದಗೆ ಗಲಾಟೆ ಮಾಡಿ, ಮನೆಯ ಡಿಶ್ ಬುಟ್ಟಿಯನ್ನು ದೊಣ್ಣೆಯಿಂದ ಹೊಡೆದು, ಮುರಿದು ಹಾಕಿದ್ದು, ಕೊಲೆ ಮಾಡುವ  ಉದ್ದೇಶದಿಂದಲೇ ತಿಮ್ಮಪ್ಪನ ಎಡಗಣ್ಣಿನ ಹುಬ್ಬಿನ ಮೇಲೆ ಬಲವಾಗಿ ದೊಣ್ಣೆಯಿಂದ ಹೊಡೆದು, ಹಲ್ಲೆ ಮಾಡಿದ್ದರಿಂದ,ತೀವ್ರವಾಗಿ ಗಾಯಗೊಂಡು, ನೆಲದ ಮೇಲೆ ಕುಸಿದು ಬಿದ್ದಿದ್ದು ಅವರನ್ನು ಚಿಕಿತ್ಸೆಗೆ ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:09-11-2022 ರಂದು ತಿಮ್ಮಪ್ಪ ಮೃತಪಟ್ಟಿದ್ದು, ತಿಮ್ಮಪ್ಪ ನನ್ನು ಕೊಲೆ ಮಾಡಿದ ಆರೋಪಿ ಸಿದ್ದಪ್ಪ ಈತನ ವಿರುದ್ಧ ಸೂಕ್ತ ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಕಾರ್ಗಲ್ ಪೊಲೀಸ್ ಠಾಣೆ ಗುನ್ನೆ ನಂ 63/2022 ಕಲಂ 302, 427, 448, 506 ಐಪಿಸಿ ಕಾಯಿದೆ* ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ  ಕೃಷ್ಣಪ್ಪ ಕೆ.ವಿ ಪೊಲೀಸ್ ವೃತ್ತ ನಿರೀಕ್ಷಕರು ಸಾಗರ ಗ್ರಾಮಾಂತರ ವೃತ್ತ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ, ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀ ಅಣ್ಣಪ್ಪ ನಾಯ್ಕ್ ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಾಗರದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತನ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀ ರವೀಂದ್ರ ಆರ್ ರವರು ದಿನಾಂಕ: 26-12-2025 ರಂದು ಆರೋಪಿ ಸಿದ್ದಪ್ಪನಿಗೆ ಕಲಂ 304 (Part II), 323, 427, 506 ಐಪಿಸಿ ಕಾಯ್ದೆಗೆ  4 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 13,000/-   ದಂಡ, ತಪ್ಪಿದ್ದಲ್ಲಿ 6 ತಿಂಗಳ ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.

Riot, murder, accused sentenced over mobile phone charging issue 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close