ನುಡಿದಂತೆ ಮುಗ್ಗರಿಸಿದ ಕಾಂಗ್ರೆಸ್ ಸರ್ಕಾರ, ವಿಜೇಂದ್ರ ಲೇವಡಿ- Congress government has stumbled as promised, says Vijendra Levadi

 SUDDILIVE || SHIVAMOGGA

ನುಡಿದಂತೆ ಮುಗ್ಗರಿಸಿದ ಕಾಂಗ್ರೆಸ್ ಸರ್ಕಾರ, ವಿಜೇಂದ್ರ ಲೇವಡಿ- Congress government has stumbled as promised, says Vijendra Levadi   

Congress, levadi


ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸೋಮವಾರದಿಂದ ಪ್ರಾರಂಭವಾಗಿದೆ. ಚಳಿಗಾಲದ ದಿನಾಂಕ ಘೋಷಣೆಯಾದಾಗ ಬೆಂಗಳೂರು ಮಾಧ್ಯಮಗಳ ಮೂಲಕ ಸಿಎಂಗೆ ರಾಜ್ಯದ ದುರಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು ರೈತರ ಮತ್ತು ನೇಕಾರರಸಮಸ್ಯೆ ಚರ್ಚಿಸಬೇಕು ಇದಕ್ಕೂ ಮೊದಲು ಒಂದು ಎಂದು ಕಿವಿ ಮಾತು ಹೇಳದ್ದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

ಯಾವ ಪುರುಷಾರ್ಥಕಕ್ಕೆ ಅಧಿವೇಶನ ಮಾಡ್ತೀರಿ ಎಂದಿದ್ದೆ ಮೊದಲು ಸಿಎಂ ಕುರ್ಚಿ ತೀರ್ಮಾನಿಸಿಕೊಂಡು ನಂತರ ರೈತರ ಸಮಸ್ಯೆ ಬಗೆಹರಿಸಿ ಎಂದಿದ್ದೆ. ಆದರೆ ಹಾಗೆ ಮುಂದುವರೆಯದ ಪರಿಣಾಮ ಯಾವ ಸಮಸ್ಯೆಯೂ ಬಗೆಹರಿಯಲಿಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವಿನ ಕುರ್ಚಿ ಹೋರಾಟ ತಾರಕ್ಕೇರಿದೆ ಇದನ್ನ ಕೇಳಿದರೆ ಇದು ಕಾಂಗ್ರೆಸ್ ನ ಆಂತರೀಕ ಸಮಸ್ಯೆಯಾಗಿದೆ ಅದನ್ನ ನಾವೇ ಬಗೆಹರಿಸಿಕೊಳ್ಳುತ್ತೇವೆ ಎನ್ನುತ್ತಾರೆ ಸಿಎಂ ಸ್ಥಾನ ಆಂತರಿಕ ಸಮಸ್ಯೆ ಅಲ್ಲ, ಇದೊಂದು ಸಾರ್ವಜನಿಕ ಚರ್ಚೆಗೆ ಒಳಪಡುವ ವಿಷಯ ಎಂದರು. 

ಮೆಕ್ಕೆಜೋಳ, ಭತ್ತದ ಖರೀದಿ ಕೇಂದ್ರ ಆರಂಭವಾಗಿಲ್ಲ. ಕೃಷಿ ಸಚಿವರು ಯಾರು ಎಂಬುದೇ ತಿಳಿಯುತ್ತಿಲ್ಲ. ಇಲಾಖೆಯ ಕಾರ್ಯದರ್ಶಿಗಳು ರೈತರ ಸನಸ್ಯೆ ಬಗೆಹರಿಸಲಿಲ್ಲ. ಬೆಳೆ ಪರಿಹಾರ ಇದುವರೆಗೂ ನೀಡಲಾಗಿಲ್ಲ. ಗ್ರಾಮೀಣ ಭಾಗದಲ್ಲೂ  ರಸ್ತೆಗಳು ಮಳೆಗೆ ಹಾಳಾಗಿವೆ. ಅಭಿವೃದ್ಧಿಯಿಲ್ಲವಾಗಿದೆ. ಭ್ರಷ್ಠಾಚಾರ, ಕುರ್ಚಿ ಪೈಪೋಟಿ ನಡೆಯುತ್ತಿದೆ. ಸಿದ್ದರಾಮಯ್ಯ ಹೈಕಮಾಂಡ್ ಹೇಳಿದಂತೆ ಕುರ್ಚಿ ಬಿಡುವುದಾಗಿ ಹೇಳುತ್ತಾರೆ,  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶಾಸಕರ ಅಭಿಪ್ರಾಯ ಪಡೆದು ತಲೆಕೆಡೆಸಿಕೊಂಡು ದೆಹಲಿಗೆ ಹೋದರು. ಯತೀಂದ್ರ ಸಿದ್ದರಾಮಯ್ಯ ನುಡಿದಂತೆ ಕಾಂಗ್ರೆಸ್ ನಡೆಯಬೇಕಾಗಿದೆ. ಒಂದು ತಿಂಗಳ ಹಿಂದೆ ಹೈಕಮಾಂಡ್ ಹೇಳಿದಂತೆ ಕುರ್ಚಿ ಬಿಡುವ ಇಂಗಿತ ವ್ಯಕ್ತಪಡಿಸಿದ ಯತೀಂದ್ರ ಈಗ ಐದು ವರ್ಷದ ವರೆಗೆ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಯತೀಂದ್ರ ಸಿದ್ದರಾಮಯ್ಯನವರಾ ಎಂದು ಚರ್ಚ ಆರಂಭವಾಗಿದೆ ಎಂದರು. 

ಕಾಂಗ್ರೆಸ್ ಪಕ್ಷ ಚುನಾವಣೆಗೂ ಆರಂಭದಲ್ಲಿ 30 ಸಾವಿರ ಕೋಟಿ ಹಣವನ್ನ ವರ್ಷಕ್ಕೆ ನೀರಾವರಿಗೆ ಕೊಡುತ್ತೇವೆ ಎಂದಿತ್ತು. ಭದ್ರ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಗಿತ್ತು.  ಆದರೆ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ವರ್ಷಕ್ಕೆ ಬಿಡುಗಡೆಯಾಗಬೇಕಿದ್ದ 1 ಲಕ್ಷ ಕೋಟಿ ಹಣವನ್ನ ಈಗಲೇ ಬಿಡುಗಡೆ ಮಾಡಿದರೆ ಕೇಂದ್ರದಿಂದ  ಬರಬೇಕಿದ್ದ 5 ಸಾವಿರ ಕೋಟಿ ಹಣವನ್ನ ನವು ತಂದಕೊಡಲು ಸಿದ್ದವೆಂದು ಸವಾಲು ಹಾಕಿದರು.

ರಾಜ್ಯದಲ್ಲಿ ಉದ್ಯೋಗ ಸೃಷ್ಠಿಯಾಗುತ್ತಿಲ್ಲ‌, ಇರುವ ಕೈಗಾರಿಕೆ ರಾಜ್ಯವನ್ನ ಬಿಟ್ಟು ಹೋಗುತ್ತಿದೆ. ಇವರ ವೈಫಲ್ಯವನ್ನ‌ಮುಚ್ಚಿ ಹಾಕಲು ಕೇಂದ್ರ ಸರ್ಕಾರವನ್ನ ತೆಗಳಲಾಗುತ್ತಿದೆ. ಇದಕ್ಕೆ ಉದಾಹರಣೆ ಎಂದರೆ ಜನೌಷಧ ಕೇಂದ್ರವನ್ನ ತೆಗೆಯಲು ರಾಜ್ಯ ಸರ್ಕಾರ ಹೊರಟಿತ್ತು. ಈಗ ಹೈಕೋರ್ಟ್ ಛೀಮಾರಿ ಹಾಕಿದೆ. ಬಿಎಸ್ ವೈ ಅವರ ರೈತರ ಸಮ್ಮಾನ್, ಬೊಮ್ಮಾಯಿ ಅವರ ರೈತ ನಿಧಿ ಯೋಜನೆಯನ್ನ ತೆಗೆದುಹಾಕಿದೆ. ಚುನಾವಣೆ ಬಂದರೆ ಗೃಹಲಕ್ಷ್ಮೀ ಬಿಡುಗಡೆ ಮಾಡುವ ಕಾಂಗ್ರೆಸ್ ಭಾಗ್ಯಗಳನ್ನ ಉಡಾಫೆಯಂತೆ ನಡೆಸಿಕೊಳ್ಳುತ್ತಿದೆ ಎಂದರು. 

ಪಾಕ್ ಜಿಂದಾಬಾದ್ ಎಂದವರ ವಿರುದ್ಧ ಏನು ಮಾಡಿದ್ರು?

ದ್ವೇಷ ಭಾಷಣದ ಬಗ್ಗೆ ಶಾಸನ ತರಲು ಕಾಂಗ್ರೆಸ್ ಹೊರಟಿದೆ. ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯನ್ನ ಮರು ನೆನಪು ಮಾಡುವಂತೆ ಈ ಬಿಲ್ ಮಾಡುತ್ತಿದೆ. ಪತ್ರಿಕಾ ಹಾಗೂ ಸೋಷಿಯಲ್ ಮೀಡಿಯಾ ಮತ್ತು ವಿಪಕ್ಷಗಳನ್ನ ಕಟ್ಟಿಹಾಕಲು ಹೊರಟಿದೆ. ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದೆ ಎಂದರು. 

ವಿಧಾನ ಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರನ್ನೇ ಏನೂ ಮಾಡದ ಕಾಂಗ್ರೆಸ್ ವಿಪಕ್ಷಗ ಮತ್ತು ಮಾಧ್ಯಮಗಳನ್ನ ಕಟ್ಟಿಹಾಕಲು ದ್ವೇಷ ಭಾಷಣಕ್ಕೆ ಕಾನೂನು ತರಲಾಗುತ್ತಿದೆ ಎಂದು ವಿವರಿಸಿದರು

ನುಡಿದಂದೆ ಮುಗ್ಗರಿಸಿದ ಸರ್ಕಾರ

ಕಾಂಗ್ರೆಸ್ ರಾಜ್ಯದಲ್ಲಿ ನುಡಿದಂತೆ ನಡೆಯುವ ಸರ್ಕಾರವಲ್ಲ ನುಡಿದಂತೆ ಮುಗ್ಗರಿಸುತ್ತಿರುವ ಸರ್ಕಾರವೆನಿಸಿದೆ. ರಾಜ್ಯದ ಪಾಲಿಗೆ ಸತ್ತಂತಾಗಿದೆ.  ಕಾಂಗ್ರೆಸ್ ಜನಮಾನಸದಿಂದ ಹೊರಹೋಗಿದೆ ವೋಟ್ ಚೋರಿಯಿಂದ ಜನಮಾನಸದಲ್ಲಿರುವುದಾಗಿ ಹೇಳುತ್ತಾರೆ. ಪ.ಬಂಗಾಳದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲಿದೆ. ಜನರಿಂದ ದೂರ ಆಗುವ 

ಯತ್ನಾಳ ವಿರುದ್ಧ ಮಾನನಷ್ಠ ಮೊಕ್ಕದ್ದಮೆ

ಯತ್ನಾಳರ ವಿರುದ್ಧ ಮಾನನಷ್ಠ ಮೊಕದ್ದಮೆ ಹಾಕಬೇಕೆಂದಿರುವೆ. ನನ್ನನ್ನ ಉಪಮುಖ್ಯಮಂತ್ರಿ ಸ್ಥಾನಕ್ಕಿಳಿಸಿದ್ದಾರೆ. ಡಿಕೆಶಿ ಸಿಎಂ ವಿಜೇಂದ್ರ ಡಿಸಿಎಂ ಸ್ಥಾನಕ್ಕೆ ಒಪ್ಪಂದವಾಗಿತ್ತು ಎಂದು ಯತ್ನಾಳ್ ಹೇಳಿರುವುದಕ್ಕೆ ವಿಜೇಂದ್ರ ಹೀಗೆ ಪ್ರತಿಕ್ರಿಯಿಸಿದ್ದಾರೆ. ನಮಗೆ ಅಧಿಕಾರ ಹಿಡಿಯುವ ಹಪಾಪಿಯಿಲ್ಲ. ಪಕ್ಷದ ಹಿರಿಯರು ಪಕ್ಷದ ಸಂಘಟನೆ ಬಲಪಡಿಸಲು ಹೇಳಿದ್ದಾರೆ. ಯತ್ನಾಳ್ ಗೆ ನನ್ನ ಹೆಸರು ಹೇಳದಿದ್ದರೆ ಊಟ ಸೇರಲ್ಲ ಎಂದರು. 

ಕೇಂದ್ರಕ್ಕೆ ಯಾವುದೇ ವರದಿ ನೀಡದೆ ಹಣ ಕೇಳಿದರೆ ಹೇಗೆ?

ಕಳೆದ ವಿಧಾನ ಸಭೆಯಲ್ಲಿ ಗಾಂಜಾ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಡ್ರಗ್ಸ್ ಹರಡುತ್ತಿದೆ. ದುಷ್ಠಶಕ್ತಿಯಾರು ಬುಡಕ್ಕೆ ಹೋಗಿ ಹಿಡಿಯಬೇಕು. ರಾಜ್ಯಕ್ಕೆ ಕೇಙದ್ರ ಮಲತಾಯಿ ಧೋರಣೆ ಮಾಡುತ್ತಿಲ್ಲ. ರಾಜ್ಯದ ಯೋಜನೆ ಬಗ್ಗೆ ವರದಿಯನ್ನ ಕೇಂದ್ರಕ್ಕೆ ರಾಜ್ಯದವರು ನೀಡುತ್ತಿಲ್ಲ. ಅಪ್ಪರ್ ತುಂಗ ಯೋಜನೆಗೆ ಕೇಂದ್ರ ಹಣ ಬಿಡುಗಡೆ ಮಾಡಿಲ್ಲ ಎಂಬುದು ಅಪಹಾಸ್ಯ ಮಾಡಿದಂತೆ ಎಂದರು. 

Congress government has stumbled as promised, says Vijendra Levadi   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close