ಅಗ್ನಿವೀರ್ ಹೋಗಬೇಕಿದ್ದ ಕಿರಣ್ ಕೊಲೆಯಾಗಿದ್ದ-Kiran, who was supposed to go to Agniveer, was murdered

SUDDILIVE || SHIVAMOGGA

ಅಗ್ನಿವೀರ್ ಹೋಗಬೇಕಿದ್ದ ಕಿರಣ್ ಕೊಲೆಯಾಗಿದ್ದ-Kiran, who was supposed to go to Agniveer, was murdered 

Kiran, Agniveer

ಶಿವಮೊಗ್ಗದ ಭದ್ರಾವತಿಯಲ್ಲಿ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ ಕೊಲೆಯಾದ ಕಿರಣ್ ಎಂಬ ಯುವಕನ ಕಥೆ ರೋಚಕವೆನಿಸಿದೆ. ಆರ್ಮಿಗೆ ಸೇರುವ ಹಂಬಲ ಹೊಂದಿದ್ದ ಯುವಕ ಧಾರುಣವಾಗಿ ಕೊಲೆಯಾಗಿದ್ದಾನೆ. 

ಡಿಗ್ರೀ ಓದುತ್ತಾ ಪೇಯಿಟಿಂಗ್ ಕೆಲಸ ಮಾಡಿಕೊಂಡಿದ್ದ ಕಿರಣ್ ಭದ್ರಾವತಿಯಲ್ಲಿ ಅಂತಿಮ ವರ್ಷದ ಪದವಿ ಓದುತ್ತಿದ್ದ. ಇಂಡಿಯನ್ ಆರ್ಮಿಗೆ ಸೇರಲೇಬೇಕೆಂಬ ಛಲ ಹೊಂದಿದ್ದನು. ಅಗ್ನಿವೀರ್ ನೇಮಕಾತಿಯ ದೈಹಿಕ ಹಾಗೂ ಇತರ ಪರೀಕ್ಷೆಯಲ್ಲಿ ಪಾಸಾಗಿದ್ದನು. 

ಟ್ಯಾಟೂ ಕಾರಣಕ್ಕೆ ಕಿರಣನನ್ನ ಆರ್ಮಿ ನೇಮಕಾತಿ ಸಮಿತಿ ಕೊನೆಯ ಹಂತದಲ್ಲಿ ರಿಜೆಕ್ಟ್ ಮಾಡಿತ್ತು. ನಾಲ್ಕು ವರ್ಷದ ಅಗ್ನೀವೀರ್ ಗೆ ನಾನು ಹೋಗಲ್ಲ ಎಂದು ಸಹ ಕಿರಣ್ ಹೇಳುದ್ದ. ಬಳಿಕ ಧಾರವಾಡಕ್ಕೆ ಹೋಗಿ, ಟ್ಯಾಟೂ ತೆಗೆಸಿಕೊಂಡು ಬಂದಿದ್ದನು. 

ತಾಯಿಯ ಬಳಿ ನಾನು ಆರ್ಮಿಗೆ ಹೋಗೇ ಹೋಗ್ತೇನೆ ಎಂದು ಸಹ ಹೇಳಿದ್ದ. ಕಿರಣ್ ನ ಕಳೆದುಕೊಂಡು ತಾಯಿ ಧನಲಕ್ಷ್ಮಿ ಮತ್ತು ಆಪ್ತರ ಬಳಗ ಕಣ್ಣೀರು ಹಾಕಿದ್ದಾರೆ. 

Kiran, who was supposed to go to Agniveer, was murdered 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close