ರಾಜ್ಯಾದ್ಯಂತ ಬೂತ್ ಪ್ರವಾಸಕ್ಕೆ ವಿಜೇಂದ್ರ ಕರೆ- Vijendra call for statewide booth tour

 SUDDILIVE || SHIVAMOGGA

ರಾಜ್ಯಾದ್ಯಂತ ಬೂತ್ ಪ್ರವಾಸಕ್ಕೆ ವಿಜೇಂದ್ರ ಕರೆ- Vijendra call for statewide booth tour   

Vijendra, tour

ಹೋರಾಟದ ಫಲವಾಗಿ ರಾಜ್ಯದ ಪ್ರತಿ ಹಳ್ಳಿಯಲ್ಲಿ ಬಿಜೆಪಿಯನ್ನ ಜನ ಈಗ ಗುರುತಿಸಿದ್ದಾರೆ‌. ಇದಕ್ಕೆಯಡಿಯೂರಪ್ಪ, ಡಿ.ಹೆಚ್ ಶಂಕರ ಮೂರ್ತಿ  ಹಾಗೂ ಹಿರಿಯರ ಶ್ರಮವಿದೆ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ತಿಳಿಸಿದರು. 

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ವಿಷೇಶ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಅವರು ಬಿಜೆಪಿಗೆ ಇಂದು ಕರ್ನಾಟಕ ರಾಜ್ಯ ದಕ್ಷಿಣ ಭಾರತದ ಹೆಬ್ಬಾಗಿಲಾಗಿದೆ. ಯಾವುದೇ ಫಲಾಪೇಕ್ಷವನ್ನ ನಿರೀಕ್ಷಿಸದೆ, ನಿಷ್ಠಾವಂತ ಕಾರ್ಯಕರ್ತರಿಂದ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ 27 ಕ್ಷೇತ್ರವನ್ನ ಬಿಜೆಪಿ ರಾಜ್ಯದಲ್ಲಿ ಗೆದ್ದುಬೀಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ವಯಂ ಕೃತ ಅಪರಾಧದಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಕಾಂಗ್ರೆಸ್ ಯಶಸ್ವಿಗಿಂತ ನಮ್ಮ ವೈಫಲ್ಯವೇ ಹೆಚ್ಚಾಗಿತ್ತು ಎಂದು ಆತ್ಮವಿಮರ್ಶೆ ಮಾಡಿಕೊಂಡರು.

ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ ಜನ ಪರ ಯೋಜನೆ ನೀಡಿದರೂ 40% ಭ್ರಷ್ಠಾಚಾರದ ಆರೋಪ ಮಾಡಿ ಕಾಂಗ್ರೆಸ್ ಚುನಾವಣೆಯಲ್ಲಿ ಅಪಪ್ರಚಾರ ನಡೆಸಿ ಚುನಾವಣೆ ಗೆದ್ದರೂ ಎರಡೂವರೆ ವರ್ಷದಲ್ಲಿ ಬಿಜೆಪಿ ಅದನ್ನ ಕಟ್ಟಿಹಾಕಿ ಜನರ ಮುಂದೆ ನಿಜಬಣ್ಣ ಬಯಲು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತೆಲಂಗಾಣದಲ್ಲಿ ಮತ್ತು ಹಿಮಾಚಲ ಪ್ರದೇಶದ ಕಾಂಗ್ರೆಸ್ ಸಿಎಂಗಳು ಗ್ಯಾರೆಂಟಿಯನ್ನ ಜಾರಿ ಮಾಡಿದ ಪರಿಣಾಮ ಸರ್ಕಾರಿ ನೌಕರರಿಗೆ ಸಂಬಳಕೊಡಲಾಗುತ್ತಿಲ್ಲ ಎಂದಿದ್ದಾರೆ. 

ಹಿಮಾಚಲ ಸಿಎಂ ದೇವಾಲಯಗಳಿಗೆ ಪತ್ರ ಬರೆದು ಗ್ಯಾರೆಂಟಿ ಹಣವನ್ನ ಕೊಡಲಾಗದೆ ಹೆಚ್ಚಿನ ಅನುದಾನ‌ಕೊಡಿ ಎಂದು ಪತ್ರ ಬರೆದಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ವಿಪಕ್ಷಗಳಿಗೆ ಕಾಂಗ್ರೆಸ್ ಕಂಡರೆ ಹೊಟ್ಟೆ ಉರಿ ಹಾಗಾಗಿ ಗ್ಯಾರೆಂಟಿಯನ್ನ ತೆಗೆಳುತ್ತಿದ್ದಾರೆ ಪಕ್ಷವನ್ನ ಬೈಯುತ್ತಿದ್ದಾರೆ ಎಂದಿದ್ದಾರೆ. ಬಿಜೆಪಿಯ ಸಿಎಂಗಳಾದ ಬಿಎಸ್ ವೈ ಮತ್ತು ಬೊಮ್ಮಾಯಿ ಅವರು ಜನಪರ ಕಾರ್ಯಕ್ರಮ ಕೊಟ್ಟರು ಆದರೆ ಕಾಂಗ್ರಸ್ ಗ್ಯಾರೆಂಟಿಯನ್ನ ನೀಡಿ ಚುನಾವಣೆ ಗೆಲ್ಲಲು ಕಾರ್ಯಕ್ರಮ ಕೊಟ್ಟರು ಎಂದರು. 

ಪ್ರತಿ ಬಾರಿ ಲೋಕಸಭದಲ್ಲಿ ಬಿಜೆಪಿ ಹೆಚ್ಚನ ಸ್ಥಾನ ಗೆಲ್ಲುತ್ತದೆ. ಆದರೆ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲಲು ಆಗ್ತಾಯಿಲ್ಲ. ಹೆಚ್ಚಿನ ಸಮಯವನ್ನ ನೀಡಿ ಕಾರ್ಯಕರ್ತರು ಪಕ್ಷವನ್ನ‌ಬಲಪಡಿಸಬೇಕು. ಕಾರ್ಯಕರ್ತರ ಆತ್ಮೀಯತೆ, ಕಷ್ಟ ಸುಖಕ್ಕೆ ಸ್ಪಂಧಿಸಬೇಕು. ಪ್ರತಿ ಬೂತ್ ನಲ್ಲೂ ಪ್ರವಾಸ ಮಾಡಬೇಕು ಅಮಿತ್ ಶಾ ಹೇಳಿದಂತೆ ಬೂತ್ ನ್ನ ಬಲಪಡಿಸಿಕೊಳ್ಳಬೇಕು ಮತ್ತು ಸವಾಲನ್ನ ಎದುರಿಸಬೇಕು. ಅಧಿಕಾರದಲ್ಲಿ ನಾವು ಇಲ್ಲ ಎಂದರೆ ಅದು ಹೀನಾಯ ಸ್ಥಿತಿಯಲ್ಲ ಎಂದರು. 

SIR ಮತದಾರ ಪಟ್ಟಿ ಪರಿಷ್ಕರಣೆ ಮೋದಿಜಿ ತೀರ್ಮಾನವಲ್ಲ. ದೇಶದ ಚುನಾವಣ ಆಯೋಗ ತೆಗೆದುಕೊಂಡ ನಿರ್ಧಾರವಾಗಿದೆ. ಇದನ್ನ ಪಕ್ಷದಿಂದ ಜಾರಿ ಮಾಡಿದರೆ ಬಿಹಾರದ ಚುನಾವಣೆ ಫಲಿತಾಂಶವನ್ನ ಕರ್ನಾಟಕದಲ್ಲೂ ತರಬಹುದು ಎಂದ ಅವರು ಪಕ್ಷದ ಎಲ್ಲಾ ಚಟುವಟಿಕೆಯ ನಡುವೆ ಫೆಬ್ರವರಿಯಿಂದ SIR ನ್ನ ಸಮರ್ಪಕವಾಗಿ ರಾಜ್ಯದಲ್ಲಿ ಜಾರಿಯಾಗುವಂತೆ ಮಾಡಬೇಕು ಎಂದು ಕರೆನೀಡಿದರು.

ಪಕ್ಷದಲ್ಲಿ ಏನೇ ಜಾತಿ ಭಿನ್ನಾಭಿಪ್ರಾಯವಿದ್ದರೂ ನಾವು ಬಿಜೆಪಿ ಎಂದು ಹೋರಾಡಬೇಕು. ಲಿಂಗಾಯಿತ, ಈಡಿಗ ಎಂಬ ಜಾತಿಯ ಬೂತಕನ್ನಡಿಯಿಂದ ನೋಡುವುದನ್ನ‌ಬಿಟ್ಟು ಪಕ್ಷದ ಕಟ್ಟಾಳುಗಳು ಎಂದು ಒಗ್ಗಾಟದಟಾಗಬೇಕು. 2028 ಕ್ಕೆ ಚುನಾವಣೆ ಬರಬಹುದು ಎಂದುಕೊಂಡಿರುವೆ. ಆದರೆ  ಮುಂಚಿತವಾಗಿ ಚುನಾವಣೆ ಬಂದರೂ ಆಶ್ಚರ್ಯಪಡುವಂತಿಲ್ಲ ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಹೊಡೆದಾಟ ಹೆಚ್ಚಾದರೆ ಆ ಸ್ಥಿತಿ ನಿರ್ಮಾಣವಾಗಬಹುದು ಎಂದರು. 

ಕಾಂಗ್ರೆಸ್ ಯಶಸ್ವಿಯಾಗದ ಪಕ್ಷವಾಗಿದೆ. ಹೋರಾಟದ ಮೂಲಕ ಪಕ್ಷವನ್ನ ಬಲಪಡಿಸೋಣ ಎಂದರು. 

Vijendra call for statewide booth tour

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close