ಡಿ.15 ರಂದು ಶಿವಮೊಗ್ಗದಲ್ಲಿ ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೃಭವ-Cultural extravaganza to be held in Shivamogga on December 15

 SUDDILIVE || SHIVAMOGGA

ಡಿ.15 ರಂದು ಶಿವಮೊಗ್ಗದಲ್ಲಿ ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೃಭವ-Cultural extravaganza to be held in Shivamogga on December 15   


ಶಿವಮೊಗ್ಗದಲ್ಲಿ ಆಳ್ವಸ್ ನುಡಿಸಿರಿ, ಸರ್ಕಾರಿ ನೌಕರರ ಸಂಘ ಎಸ್ ಬಿಐ, ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರಿ ನೌಕರರ ಸೌಹಾರ್ಧ ಸಂಘದ ವತಿಯಿಂದ ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೃಭವ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಡಿ.15 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿದ್ದು 300 ಜನ ವಿದ್ಯಾರ್ಥಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಎಲ್ಲರನ್ನೂ ತೊಡಗಿಸಿಕೊಙಡು ನಡೆಯುವ ಕಾರ್ಯಕ್ರಮ ಇದಾಗಿದೆ ಎಂದರು.

8000 ಜನರಲ್ ಪಾಸ್ ನೀಡಲಾಗುತ್ತಿದೆ.  1500 ವಿಐಪಿ ಪಾಸ್ ಮಾಡಿಸಲಾಗಿದೆ. ಯೋಗದೀಪಿಕ, ಶಾಸ್ತ್ರೀಯ ನೃತ್ಯ, ಅಷ್ಟಲಕ್ಷ್ಮೀ, ಬಡಗುತಿಟ್ಟು ಯಕ್ಷಗಾನ, ಗುಜರಾತಿ ಗಾರ್ಭ ಮತ್ತು ದಾಂಡಿಯಾ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಲ್ಲಕಂಬ ಮತ್ತು ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ನೃತ್ಯ, ಪುರುಲಿಯಾ, ತೆಂಕುತಿಟ್ಟು ಯಕ್ಷಗಾನ, ಬೊಂಬೆ ವಿನೋದಾವಳಿ ಕಾರ್ಯಕ್ರಮ ನಡೆಯಲಿದೆ. 

2021 ರಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆದಿತ್ತು. ನಂತರ ಇದು ನಡೆದಿರಲಿಲ್ಲ. ಇನ್ನುಮುಂದೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲು ಯೋಚಿಸಲಾಗಿದೆ‌. ಎಲ್ಲವೂ ಪ್ರಚಾರ ನಡೆಸಲಾಗುತ್ತಿದೆ. 300 ಜನ ಕಲಾವಿದ್ಯಾರ್ಥಿಗಳು ಆಳ್ವಾಸ್ ವಿದ್ಯಾಸಂಸ್ಥೆಯಿಂದ ಬರಲಿದ್ದಾರೆ ಎಂದರು. 

ಎಸ್ ಪಿ ದಿನೇಶ್ ಮಾತನಾಡಿ, 2012 ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಶಿವಮೊಗ್ಗದಲ್ಲಿ ನಡೆದುಕೊಂಡು ಬಂದಿದೆ. ಪ್ರತಿ ವರ್ಷ ಈ ಕಾರ್ಯಕ್ರಮ ನಡೆಸಲು ಸಾಧ್ಯವಾಗೊಲ್ಲ. ವರ್ಷದ ಮೊದಲೇ ಈ ಕಾರ್ಯಕ್ರಮದ ಬುಕ್ಕಿಂಗ್ ನಡೆಯುವುದರಿಂದ ಇದು ಪ್ರತಿ ವರ್ಷಕ್ಕೊಮ್ಮೆ ಕಾರ್ಯಕ್ರಮ ನಡೆಸಲಾಗದು. ಕಾರ್ಯಕ್ರಮದಲ್ಲಿ 15 ಸಾವಿರ ಕುರ್ಚಿಗಳನ್ನ ಹಾಕಲಾಗುವುದು ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close