ಡಿಸಿಸಿ ಬ್ಯಾಂಕ್ ಸಧೃಢ ಹಾಗೂ ಗಟ್ಟಿಮುಟ್ಟಾಗಿದೆ-ಆರ್ ಎಂ ಎಂ-DCC Bank is strong and sturdy - RMM

 SUDDILIVE || SHIVAMOGGA

ಡಿಸಿಸಿ ಬ್ಯಾಂಕ್ ಸಧೃಢ ಹಾಗೂ ಗಟ್ಟಿಮುಟ್ಟಾಗಿದೆ-ಆರ್ ಎಂ ಎಂ-DCC Bank is strong and sturdy - RMM

DCC, Bank

ಇಂದು ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ, ಸದಸ್ಯರಾದ ಎಂ ಶ್ರೀಕಾಂತ್ ಎಸ್ಕೆ ಮರಿಯಪ್ಪ, ಮಹಾಲಿಂಗಯ್ಯ ಶಾಸ್ತ್ರಿಗಳು, ದುಗ್ಗಪ್ಪ ಮೊದಲಾದವರಿಂದ 2026 ನೇ ಸಾಲಿನ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಮಾಡಲಾಯಿತು. 

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆರ್ ಎಂ ಮಂಜುನಾಥ,  8 ಡಿಸಿಸಿ ಬ್ಯಾಂಕ್ ನ  ಬ್ರಾಂಚ್ ಉದ್ಘಾಟನೆಯಾಗಲಿದೆ. ಇದರಿಂದಬ್ಯಾಂಕ್ ನಿಂದ ಒಟ್ಟು 36 ಬ್ರಾಂಚ್ ಆರಂಭಿಸಲಾದಂತಾಗಿದೆ.   ಮುಂದಿನ ವರ್ಷ ಹೋಬಳಿ ಮತ್ತು ಗ್ರಾಪಂನಲ್ಲಿ 14 ಬ್ರಾಂಚ್ ಆರಂಭಿಸಲಾಗುತ್ತಿದೆ. ಇದರಿಂದ 3.5 ಲಕ್ಷ ಗ್ರಾಹಕರಿಗೆ ಅನುಕೂಲವಾಗಲಿದೆ. 2028 ರಲ್ಲಿ ಡಿಸಿಸಿ ಬ್ಯಾಂಕ್ ಡೈಮೆಂಟ್ ಜುಬ್ಲಿ ಆಚರಿಸಲಾಗುತ್ತಿದೆ.

ಫೊನ್ ಪೇ ವ್ಯವಸ್ಥೆ ಮಾಡಲಾಗುತ್ತಿದೆ. ನೆಫ್ಟ್ ಬ್ಯಾಂಕಿಂಗ್,  ಆರ್ ಟಿಜಿಎಸ್ ಎಟಿಎಂ ಇತ್ತು. ಎಟಿಎಂ ಬಳಕೆ ಕಡಿಮೆಯಾಗಿದೆ 1300 ಕೋಟಿ ರೂ ಬೆಳೆ ಸಾಲವನ್ನ ಬರುವ ವರ್ಷದಿಂದ ಕೊಡಲು ತೀರ್ಮಾನಿಸಲಾಗಿದೆ  3488 ಸ್ವಸಹಾಯ ಗುಂಪಿಗೆ 2000 ಕ್ಕೂ ಹೆಚ್ಚು ಗುಂಪುಗಳನ್ನ ಸೇರಿಸಿ 240 ಕೋಟಿ ಹಣ ಸಾಲ ನೀಡಲು ತೀರ್ಮಾನಿಸಲಾಗಿದೆ. 

33 ಸಾವಿರ ಹಾಲು ಉತ್ಪಾದಕರು ಜಿಲ್ಲೆಯಲ್ಲಿದ್ದಾರೆ. ಬೇರೆ ಬೇರೆ ಬ್ಯಾಂಕ್ ನಲ್ಲಿ ವ್ಯವಹಾರ ಮಾಡುತ್ತಿದ್ದಾರೆ ಅವರನ್ನ ಡಿಸಿಸಿ ಬ್ಯಾಂಕ್ ನ ಶಾಖೆಯಲ್ಲಿ ವ್ಯವಹಾರ ಮಾಡಲಿದ್ದಾರೆ. ಫೊನ್ ಪೇ ಸೌಕರ್ಯ ಒದಗಿಸಲಾಗುತ್ತಿದೆ. 

ನವುಲೆ, ಏರ್ ಪೋರ್ಟ್, ಕಾಚಿನಕಟ್ಟೆ, ಹೊಳಕೂರು, ಭದ್ರಾವತಿಯಲ್ಲಿ ಆನ್ವೇರಿ, ತೀರ್ಥಹಳ್ಳಿಯಲ್ಲಿ ಮೇಗರವಳ್ಳಿ, ಕಟ್ಟೆಹಕ್ಲು, ದೇವಂಗಿ, ಅರಗ ಸಾಗರದಲ್ಲಿ ಬ್ಯಾಕೋಡು, ಸೊರಬದಲ್ಲಿ ಕುಪ್ಪಗುಡ್ಡೆ ಚಂದ್ರಗುತ್ತಿ, ಶಿಕಾರಿಪುರದ ಹಿತ್ಲ, ಹೊಸನಗರದ ನಿಟ್ಟೂರು ಸೇರಿ 14 ಕಡೆ  ಶಾಖೆ   ಆರಂಭಿಸಲಾಗುತ್ತಿದೆ 45 ಕೋಟಿ ಲಾಭದ ನಿರೀಕ್ಷೆಯಲ್ಲಿ ಬ್ಯಾಂಕ್ ಇದೆ. ಹೊಸ ಬೆಳೆ ಸಾಲ ವಿಳಂಬದ ಆರೋಪವಿದೆ. ರೈತರನಿಂದ ಅರ್ಜಿ ವಂದ 24 ಗಂಟೆಯಲ್ಲಿ ಹಣ ಕಳುಹಿಸಿಕೊಡುತ್ತೇವೆ. ನಬಾರದಡ್ ಬೆಳೆ ಸಾಲ ನಿಲ್ಲಿಸಿದೆ 1200 ಕೋಟಿ ಸಾಲ ನೀಡಲಾಗಿದೆ. ನಬಾರ್ಡ್ ನಿಂದ 130 ಕೋಟಿ ನೀಡಲಾಗಿದೆ. 

8.5% ಬಡ್ಡಿಕೊಟ್ಟರೆ ನಬಾರ್ಡ್ ಸಾಲನೀಡಲೊದೆ ಅದಕ್ಕಿಂತ ಕಡಿಮೆ ಸಾಲವನ್ನ ಡಿಸಿಸಿ ಬ್ಯಾಂಕ್ ಕೊಡುತ್ತಿದೆ. ಸ್ವಂತ ಬಂಡವಾಳವನ್ನ ಸಹಕಾರ ಸಂಘಗಳು ರೂಢಿಸಿಕೊಳ್ಳಬೇಕು. ರಾಜ್ಯದಲ್ಲಿ ನಬಾರ್ಡ್ ನ ಪಟ್ಟಿಯಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಜ್ ಮೊದಲ ರ‌್ಯಾಂಕ್ ನಲ್ಲಿದೆ. 1720.88 ಕೋಟಿ ಠೇವಣಿಯನ್ನ ಡಿಸಿಸಿ ಬ್ಯಾಂಕ್ ನಲ್ಲಿ ಠೇವಣಿ ಸಂಗ್ರಹಿಸಲಾಗಿದೆ ಎಂದರು.

DCC Bank is strong and sturdy - RMM

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close