ದಲಿತ ಯುವಕನನ್ನ ಮದುವೆಯಾಗಿದ್ದಕ್ಕೆ ಮಾನ್ಯ ಪಾಟೀಲ್ ಹತ್ಯೆ ಆರ್ ಎಸ್ ಎಸ್ ಪ್ರಚೋದಿತ-ಡಿಎಸ್ಎಸ್- RSS instigated the murder of Manya Patil for marrying a Dalit youth - DSS

 SUDDILIVE || SHIVAMOGGA

ದಲಿತ ಯುವಕನನ್ನ ಮದುವೆಯಾಗಿದ್ದಕ್ಕೆ ಮಾನ್ಯ ಪಾಟೀಲ್ ಹತ್ಯೆ ಆರ್ ಎಸ್ ಎಸ್ ಪ್ರಚೋದಿತ-ಡಿಎಸ್ಎಸ್- RSS instigated the murder of Manya Patil for marrying a Dalit youth - DSS

RSS, patil

 

ದಲಿತ ಯುವಕನನ್ನ ಮದುವೆ ಮಾಡಿಕೊಂಡಿರುವ ಮಾನ್ಯ ಪಾಟೀಲ್ ಎಂಬ ಯುವತಿಯನ್ನ ಅವರ ತಂದೆಯೇ ಕೊಲೆ ಮಾಡಿರುವುದನ್ನ ಡಿಎಸ್ ಎಸ್ ಖಂಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಎಸ್ಎಸ್ ಗುರುಮೂರ್ತಿ ಸಂಘ ಪರಿವಾರ ಮತ್ತು ಆಋ ಎಸ್ ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂವಿಧಾನವನ್ನ ಬುಡಮೇಲು ಮಾಡುವ ಹುನ್ನಾರದ ಭಾಗವಾಗಿ ಯುವತಿಯ ಕೊಲೆಗೆ ಪ್ರಚೋದಿತವಾಗಿದೆ. 

ಭಾರತವನ್ನ ಹಿಂದೂ ರಾಷ್ಟ್ರ ಮಾಡುವ ಮಾತು ಇತ್ತೀಚೆಗೆ ಕೇಳಿ ಬರುತ್ತಿದೆ. ಮೋಹನ್ ಭಾಗವತ್ ಭಾರತದಲ್ಲಿ ಜಾತಿಯಲ್ಲ ಜಾತಿಯ ಘರ್ಷಣೆ ಇದೆ ಎಂದು ಹೇಳಿದ್ದಾರೆ. ಭಗವದ್ಗೀತೆ ಸೂಕ್ತ ಎಂದು ಹೇಳುವ ಆರ್ ಎಸ್ ಎಸ್ ಹೇಳಿಕೆ  ಕೊಲೆಗೆ ಪ್ರಚೋದನೆ ನಡೆಯುತ್ತಿದೆ. ಹಿಂದೂ ಸಮಾಜದಲ್ಲಿ ಮೋಹನ್ ಭಾಗವಾತ್ ಹೇಳಿಕೆಗೂ ಹಿಂದೂ ಸಂಘಟನೆಯ ಈ ಹೇಳಿಕೆಗೆ ಪ್ರಚೋದಿತವಾಗಿದೆ. ಮಾನ್ಯ ಪಾಟೀಲ್ ಕುಟುಂಬಕ್ಕೆ ಭದ್ರತೆಬೇಕಿದೆ. ಎಲ್ಲ ಪರಿಹಾರ ನೀಡಬೇಕು. ಡಿಸಿಯವರು ಐದು ಲಕ್ಷ ಪರಿಹಾರ ನೀಡಿದೆ ಇದು ಸಾಲದು ಕನಿಷ್ಠ ಪಕ್ಷ ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. 

ಮಾನ್ಯತಾ ಪಾಟೀಲ್ ಲಿಂಗಾಯಿತ ಸಮುದಾಯಕ್ಕೆ ಸೇರಿದ್ದು, ಬಸವಣ್ಣನನ್ನ ಗುಣಗಾನ ಮಾಡುವ ಸ್ವಾಮೀಜಿಗಳು ಮತ್ತು ಆರ್ ಎಸ್ ಎಸ್ ನವರು ಈ ಬಗ್ಗೆ ಮಾತನಾಡಬೇಕು. ದಲಿತನನ್ನ ಮದುವೆಯಾಗಿದ್ದಕ್ಕೆ ಕೊಲೆಯಾಗಿದ್ದನ್ನ ದಲಿತ ಸಂಘನೆ ಘಟನೆಯನ್ನ ಖಂಡಿಸುತ್ತದೆ ಎಂದರು. 

ವಕೀಲ ಶ್ರೀಪಾಲ್ ಮಾತನಾಡಿ, ಸಮಾಜದಲ್ಲಿ ಮರ್ಯಾದೆ ಹತ್ಯೆ ಮಾಡಿರುವುದಕ್ಕೆ ವಿರೋಧಿಸದೆ ಮೌನವಾಗಿರುವುದು ಖಂಡನೀಯವಾಗಿದೆ. ದೊಡ್ಡ ನಾಯಕರ ಮಾತನ್ನ ಜನ ಆಲಿಸುತ್ತಾರೆ ಇದನ್ನ ಖಂಡಿಸದ ಕಾರಣ ಮೌನಿಗಳಾಗಿರುವ ಇವರು ಸಹ ಆರೋಪಿಗಳು ಎಂದರು. 

ಧಾರವಾಡದಲ್ಪಿ ನಡೆದ ಘಟನೆಯನ್ನ ಬಾಂಗ್ಲಾದಲ್ಲಿ ನಡೆದ ಘಟನೆಯನ್ನ ಮಾತನಾಡುತ್ತಾರೆ. ಎರಡೂ ಖಂಡನೀಯ ಘಟನೆಯಾಗಿದೆ. ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು. ಜಾತಿ ಧರ್ಮದಲ್ಲಿ ರಾಜಕಾರಣವಾಗುತ್ತಿದೆ. ಜಾತಿಯ ಮುಳ್ಳು ತೆಗೆಯುವಲ್ಲಿ ಸರ್ಕಾರ ಶ್ರಮಿಸಬೇಕು ಎಂದರು. 


ನ್ಯಾಯಾಧೀಶರು ವೇದಿಕೆ ಹಂಚಿಕೊಳ್ಳಬಾರದು ಎಂದು ಪತ್ರ


ಹೈಕೋರ್ಟ್ ಮತ್ತು ಸುಪ್ರೀಕೋರ್ಟ್ ನ್ಯಾಯಾಧೀಶರಿಗೆ ಪತ್ರಬರೆದಿದ್ದೆ. ಆರೋಪಿತರ ಜೊತೆ ವೇದಿಕೆ ಹಂಚಿಕೆಯಾಗಬಾರದು ಎಂದು ಪತ್ರಬರೆದಿದ್ದೆ. ಮಾಜಿ ಡಿಸಿಎಂ ಈಶ್ವರಪ್ಪನವರ ವಿರುದ್ಧ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿದೆ. ಹಾಗಾಗಿ ಡಿ.25 ರಂದು ಶಿವಮೊಗ್ಗದಲ್ಲಿ ಶ್ರೀಗಂಧ ಸಂಸ್ಥೆಯಿಂದ ನಡೆಯುವ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಶ್ರೀ ಶಾನಂದ ಭಾಗಿಯಾಗುತ್ತಿದ್ದಾರೆ. ಇದು ಆಗಬಾರದು ಎಂದು ಪತ್ರ ಬರೆದಿರುವುದಾಗಿ ವಕೀಲ ಶ್ರೀಪಾಲ್ ತಿಳಿಸಿದರು‌.

RSS instigated the murder of Manya Patil for marrying a Dalit youth - DSS

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close