ನಿತಿನ್ ನಬೀನ್ ಆಯ್ಕೆ, ರಾಜ್ಯ ಬಿಜೆಪಿಯಲ್ಲಿ ಶುರುವಾಯ್ತು ಗುಸುಗುಸು- Nitin Nabeen's elected, murmurs begin in the state BJP

 SUDDILIVE || SHIVAMOGGA

ನಿತಿನ್ ನಬೀನ್ ಆಯ್ಕೆ, ರಾಜ್ಯ ಬಿಜೆಪಿಯಲ್ಲಿ ಶುರುವಾಯ್ತು ಗುಸುಗುಸು- Nitin Nabeen's elected, murmurs begin in the state BJP   

Nitin, Nabeen


ಬಿಜೆಪಿಯ ರಾಷ್ಟ್ರೀಯ ಕಾರ್ಯಧ್ಯಕ್ಷರ ಹುದ್ದೆಯನ್ನ ಸೃಷ್ಠಿಸಿ ಯುವ ನಾಯಕ ನಿತಿನ್ ನಬೀನ್ ಗೆ ಹುದ್ದೆ ನೀಡಿದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಅವರನ್ನ ಬದಲಿಸುತ್ತಾರೆ ಎಂದು ಒಂದು ಬಣ ವಾದ ಮಾಡಿದರೆ ಮತ್ತೊಂದು ಬಣ ಅವರೆ ಮುಂದುವರೆಯುತ್ತಾರೆ ಎಂಬ ಚರ್ಚೆಗೆ ಇಳಿದಿದೆ. 

ಬಿ.ವೈ.ವಿಜೇಂದ್ರರನ್ನ ತೆಗಳುತ್ತಾ ತೆಗಳುತ್ತಾ ಇಬ್ಬರು ನಾಯಕರು ಪಕ್ಷದಿಂದ ಹೊರಹೋದರೆ ವಿನ ವಿಜೇಂದ್ರರನ್ನ ಬದಲಿಸಲಿಲ್ಲ. ಪಕ್ಷದಲ್ಲಿ ನಾಯಕತ್ವ ಕೊರತೆ ಎದ್ದುಕಾಣತೊಡಗಿದರೂ ಹೈಕಮಾಂಡ್ ಗಾಢನಿಧ್ದೆಗೆ ಜಾರಿದೆ. ಮೂರು ಉಪಚುನಾವಣೆಯಲ್ಲಿ ವಿಜೇಂದ್ರ ನೇತೃತ್ವದಲ್ಲಿ ಪಕ್ಷ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ. ಆದರೂ ಸ್ಥಳೀಯ ಚುನಾವಣೆಯಲ್ಲಿ ವಿಜೇಂದ್ರ ಅವರ ನೇತೃತ್ವದಲ್ಲಿ ಪಕ್ಷ ಸ್ಪರ್ಧಿಸಿ  ಸಂಘಟನಾ ಮತ್ತು ಚಾತುರ್ಯತೆ ಬಲವನ್ನ ಪರೀಕ್ಷಿಸುವ ನಿರೀಕ್ಷೆಯಲ್ಲಿ ಬಿಜೆಪಿ  ಹೈಕಮಾಂಡ್ ಇದ್ದಂತೆ ಕಾಣುತ್ತಿದೆ. ಆದರೆ ಸ್ಥಳೀಯ ಚುನಾವಣೆಗಳೆ ನಡೆಯದೆ ಕಾಲಹರಣವಾಗುತ್ತಿರುವುದು ಇವರ ಪರೀಕ್ಷೆಗೆ ತಡೆಯೊಡ್ಡಿರಬಹುದು. 

ಬಿ.ವೈ ವಿಜೇಂದ್ರ ಹೈಕಮಾಂಡ್ ತಮ್ಮನ್ನ ಮುಂದುವರೆಸುವ ನಿರೀಕ್ಷೆಯಲ್ಲಿದ್ದಾರೆ. ಒಮ್ಮೆ ಆದೇಶ ಹೊರಡಿಸಿದರೆ ಎಲ್ಲರ ಸಹಕಾರ ಸಿಗಲಿದೆ ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಯಾವುದು ನಿಶ್ಚತತೆಯಿಲ್ಲದೆ ಹೈಕಮಾಂಡ್ ಕರ್ನಾಟಕ ವಿಚಾರದಲ್ಲಿ ಲೋಕಮಾಂಡ್ ರೀತಿಯಲ್ಲಿ ವರ್ತಿಸುತ್ತಿದೆ. ಒಂದೆಡೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಕಳೆದ ನಂತರ ಕುರ್ಚಿ ಗಾದಿಗಾಗಿ ಗುದ್ದಾಡುತ್ತಿದ್ದರೆ ಇತ್ತ ಬಿಜೆಪಿ ತನ್ನ ನಾಯಕನ ಹುಡುಕಾಟದಲ್ಲಿಯೇ ಕಾಲಹರಣ ಮಾಡುತ್ತಿದೆ. ಎರಡೂ ಪಕ್ಷಗಳ ಹೈಕಮಾಂಡ್ ಗೆ ಕರ್ನಾಟಕ ಬೇಡವಾಗಿದೆ. 

ದಕ್ಷಿಣ ಭಾರತದ ಹೆಬ್ಬಾಗಿಲಿನಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರಕ್ಕೆ ಬಂದಿದೆ. ಈ ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷವೊಂದು ತಮ್ಮದೇ ಪಕ್ಷದ ಆಂತರಿಕ ಸಮಸ್ಯೆ ಬಗೆಹರಿಸಿಕೊಳ್ಳಲು ತಿಣಕಾಡುತ್ತಿದೆ. ರಾಜ್ಯದಲ್ಲಿ ಆಡಳಿತ ಪಕ್ಷದ ವೈಫಲ್ಯವನ್ನ ಜನರ ಬಳಿ ತೆಗೆದುಕೊಂಡು ಹೋಗದ ಬಿಜೆಪಿ ರಾಜ್ಯದಲ್ಲಿ ಜನ ಆಡಳಿತ ಪಕ್ಷದ ಮೇಲೆ ಜನ‌ಬೇಸತ್ತು ಇವರನ್ನೇ ಮುಂದಿನ ಚುನಾವಣೆಯಲ್ಲಿ ಆಯ್ಕೆ ಮಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ ವಿನ ಹೋರಾಟ ಸತ್ತುಹೋದಂತೆ ಕಾಣುತ್ತಿದೆ.

ಹೈಕಮಾಂಡ್ ಗೆ ವಿಜೇಂದ್ರ ಅವರ ನಾಯಕತ್ವ ಇರಲಿ ಎಂಬ ಸ್ಪಷ್ಟವಾಗಿ ಹೇಳುವ ಸ್ಥಿತಿಯಲ್ಲಿ ಇಲ್ಲ. ಒಂದು ಕಡೆ ಬಿಎಸ್ ವೈ ಮಾತು ತೆಗೆದು ಹಾಕಲು ಆಗದೆ, ಮತ್ತೊಂದೆಡೆ ವಿಜೇಂದ್ರರ ಎದಯರಾಳಿಗೆ ವಿಜೇಂದ್ರರನ್ನ ಅಧ್ಯಕ್ಷ ಸ್ಥಾನದಿಂದ ತೆಗೆಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಲು ಆಗದೆ ಒದ್ದಾಡುತ್ತಿರುವುದಂತೆ ಕಂಡು ಬರುತ್ತಿದೆ. ಒಟ್ಟಿನಲ್ಲಿ ಪಕ್ಷದ ಹೈಕಮಾಂಡ್ ಗೆ ನಾಯಕತ್ವ ಬದಲಿಸುವ ತಲೆ ನೋವು ಬೇಡವಾಗಿದ್ದು ಇನ್ನು ಜನಸಾಮಾನ್ಯರಿಗೆ ಬೇಕಾ ಎಂಬ ಪ್ರಶ್ನೆಗೆ ಉತ್ತರವಿಲ್ಲದಂತಾಗಿದೆ. ಸಮರ್ಥ ನಾಯಕನ ಮೂಲಕ ಪಕ್ಷ ಅಧಿಕಾರ ಹಿಡಿಯುವ ಯೋಜನೆಯನ್ನ ಬಿಟ್ಟು ವರ್ಷಗಳೆ ಕಳೆದಂತೆ ಕಾಣುತ್ತಿದೆ.

Nitin Nabeen's elected, murmurs begin in the state BJP

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close