ಡಿ.13 ರಂದು ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಕಾರ್ಯಗಾರ-Workshop on December 13th to celebrate the exam as a festival

 SUDDILIVE || SHIVAMOGGA

ಡಿ.13 ರಂದು ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಕಾರ್ಯಗಾರ-Workshop on December 13th to celebrate the exam as a festival



ಮೈಸೂರು ಅಕಾಡೆಮಿ ಅಡಿ ಆರಂಭವಾದ ಗಂಗೋತ್ರಿ ಇಂಡಿಪೆಂಡೆಂಟ್ ಪಿಯು ಕಾಲೇಜನ್ನ ಕೋಟೆ ಚಂಡಿಕಾ ದುರ್ಗಪರಮೇಶ್ವರಿ ದೇವಸ್ಥಾನದ ಎದುರು ನಡೆಯುತ್ತಿದ್ದು ಈಗ ಹೊಸ ಆಡಳಿತ ಮಂಡಳಿಯ ಜೊತೆ ಆರಂಭಗೊಂಡಿದೆ.

ಈ ಕುರಿತು ಮಾತನಾಡಿದ ಸೂಡ ಅಧ್ಯಕ್ಷರೂ ಮತ್ತು ಕಾಲೇಜಿನ ಪಾಲುದಾರ ಹೆಚ್ ಎಸ್ ಸುಂದರೇಶ್ ಇಂದಿನ ದಿನಗಳಲ್ಲಿ ಜನ ಸಂಖ್ಯೆಯ ಅಡಿಯಲ್ಲಿ ನಡೆಯುತ್ತಿರುವ ಪೈಪೋಟಿಯ ಅಡಿ ಕಾಲೇಜು ಆರಂಭವಾಗುತ್ತಿದೆ. ಮಕ್ಕಳ ಶೈಕ್ಷಣಿಕ ವಿಷಯದ ಅಡಿಯಲ್ಲಿ ಏನೂ ನೀಡಬೇಕು ಅದನ್ನ ನೀಡಲಾಗುತ್ತಿದೆ ಎಂದರು. 

SSLC ಮಕ್ಕಳಿಗೆ ಕಾರ್ಯಗಾರ ನಡೆಸಲಾಗುತ್ತಿದೆ. ಡಿ.13 ರಂದು ಅಂಬೇಡ್ಕರ್ ಭವನದಲ್ಲಿ ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಎಂಬ ನಾಮದಡಿ ಕಾರ್ಯಗಾರ ನಡೆಸಲಾಗಿದೆ. ಮಕ್ಕಳಲ್ಲಿ ಪರೀಕ್ಷೆಯ ಭೂತವನ್ನ ನಿವಾರಿಸಿ ಪರೀಕ್ಷೆಯನ್ನ ತಾಂತ್ರಿಕವಾಗಿ ಬರೆಯುವಂತೆ  ಮಾಡಲಾಗುವುದು. 

ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಹರಿಪ್ರಸಾದ್ ಮಾತನಾಡಲಿದ್ದು ಬಿಇಒ ರಮೇಶ್, ಅನುದಾನಿತ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಗಿರೀಶ್, ನಿವೃತ್ತ ಎನ್ ಬಿ ಮಂಜುನಾಥ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ಜಗದೀಶ್, ಖಜಾಂಚಿ ದಿನೇಶ್ ಪಟೇಲ್ ಮೊದಲಾದವರು ಭಾಗಿಯಾಗಲಿದ್ದಾರೆ. 

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಟರ್ನಿಂಗ್ ಪಾಯಿಂಟ್ ಆಗಿದ್ದು, ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕ ಪಡೆಯಲು ಪೂರಕವಾದ ವಾತಾವರಣವನ್ನ ಗಂಗೋತ್ರಿ ಕಾಲೇಜಿನಲ್ಲಿ ನಿರ್ಮಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ಪಿಯುಸಿಯಲ್ಲೇ ನೀಡಲಾಗುತ್ತಿದೆ. ನೀಟ್ ಮತ್ತು ಜೆಡಬ್ಲೂ ಪರೀಕ್ಷೆ ತಯಾರಿಗೆ ಹೆಚ್ಚಿನ ಹಣ ಇರಲ್ಲ ಎಂದರು. 

Workshop on December 13th to celebrate the exam as a festival

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close