ಶಿವಮೊಗ್ಗ ವಿಮಾನ ನಿಲ್ದಾಣದ ಬಳಿ ಕಾರು ಬಿಟ್ಟು ಪರಾರಿಯಾದ ಯುವಕರು- Youths flee after abandoning car near Shivamogga airport

SUDDILIVE|| SHIVAMOGGA

ಶಿವಮೊಗ್ಗ ವಿಮಾನ ನಿಲ್ದಾಣದ ಬಳಿ ಕಾರು ಬಿಟ್ಟು ಪರಾರಿಯಾದ ಯುವಕರು- Youths flee after abandoning car near Shivamogga airport    

Shivamogga, airport

ಮಂಗಳೂರು ಆರ್ ಟಿ ಒ ನೋಂದಣಿ ನಂಬರ್ ಹೊಂದಿದ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆಸಿ ವಿಮಾನ ನಿಲ್ದಾಣದ ಬಳಿ ವಾಹನ ಬಿಟ್ಟು ಪರಾರಿಯಾಗಿರುವ ಘಟನೆ ವರದಿಯಾಗಿದೆ. 

ಮತ್ತೂರು ಮುಖ್ಯ ರಸ್ತೆಯಲ್ಲಿ ಊರುಗಡೂರಿನ ಸೊಸೈಟಿ ಕಟ್ಟಡ ಮುಂಭಾಗ  ಅತಿ ವೇಗವಾಗಿ ಬಂದ ಶಿಫ್ಟ್ ಡಿಸೇರ್ ಕಾರು ಎದುರಿಗೆ ಬಂದ ಟಿವಿಎಸ್ ಬೈಕ್ ಡಿಕ್ಕಿಹೊಡೆದಿದೆ. ಸ್ಥಳದಲ್ಲಿ ನಿಲ್ಲಸದ ವಾಹನ ಹಿಟ್ ಅಂಡ್ ರನ್ ಮಾಡಿ ಶಿವಮೊಗ್ಗ ವಿಮಾನ ನಿಲ್ದಾಣದ ಹತ್ತಿರ ಕಾರ್ ನಿಲ್ಲಿಸಿ ಕಾರಿನಲ್ಲಿ ಇದ್ದ ಎಲ್ಲ ಹುಡುಗರು ಪರಾರಿಯಾಗಿದ್ದಾರೆ. 

ಪ್ರಕರಣ ಹಿಟ್ ರನ್ ಆಗಿದ್ದರೂ ಸ್ಥಳೀಯರು ಮಾತ್ರ ಮತ್ತೆ ಅಪಘಾತ ಪಡಿಸಿದವರು ಗಾಂಜಾ ಸೇವಿಸಿ ಹೀಗೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಪರಾಧಿಗಳು ಸಿಕ್ಕು ಗಾಂಜಾ ಪರೀಕ್ಷೆಗೆ ಒಳಪಡುವ ತನಕ ಈ ಘಟನೆ ಗಾಂಜಾದಿಂದ ನಡೆದಿದೆ ಎಂದು ಅಧಿಕೃತವಾಗಿ ಹೇಳಲು ಅಸಾಧ್ಯ. ತುಂಗ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಕಾರ್ ನಂಬರ್ ka 19 me 1610 ಎಂದು ನೋಂದಣಿಯಾಗಿದ್ದರೆ.  ಬೈಕ್ ನಂಬರ್ KA 14 EQ 4026 ನೋಂದಣಿಯಾಗಿದೆ. ಇಬ್ಬರ ಬಗ್ಗೆಯೂ ಹೆಚ್ಚಿನ ಮಾಹಿತಿಯಿಲ್ಲ.

Youths flee after abandoning car near Shivamogga airport 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close