ಎರಡು ಪ್ರತ್ಯೇಕ ಘಟನೆ, ಒಂದು ಟ್ಯಾಂಕರ್ ಬಸ್ ಮುಖಾಖಿ ಡಿಕ್ಕಿ, ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ-Head-on collision, Hit-and-run case

SUDDILIVE || RIPPONPETE

ರಡು ಪ್ರತ್ಯೇಕ ಘಟನೆ, ಒಂದು ಟ್ಯಾಂಕರ್ ಮತ್ತು ಬಸ್ ಮುಖಾಖಿ ಡಿಕ್ಕಿ, ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ-Two separate incidents, one involving a tanker and a bus head-on collision, the other a hit-and-run case


Hit, run

ರಿಪ್ಪನ್ ಪೇಟೆಯಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತ ಸಂಭವಿಸಿದೆ. ಎರಡು ದಿನಗಳ ಹಿಂದೆ ಚಿಪ್ಪಗರ ರಸ್ತೆಯ ಬಳಿ ಹಿಟ್ ಅಂಡ್ ರನ್ ಆಗಿದೆ. ಈ ಅಪಘಾತದಲ್ಲಿ ಯುವತಿ ಕಾಲುಮುರಿದುಕೊಂಡರೆ, ಅಪಘಾತ ಪಡಿಸಿದ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ.   ಇಂದು ಬೆಳಿಗ್ಗೆ ಪೆಟ್ರೋಲ್ ಟ್ಯಾಂಕರ್ ಮತ್ತು ಬಸ್ ನಡುವೆ ನಡೆದ ಅಪಘಾತದಲ್ಲಿ ಹಲವರಿಗೆ ಗಾಯಗಳಾಗಿವೆ. 

ಇಲ್ಲಿನ ಸಮೀಪದ ಕೋಡೂರು ಪಟ್ಟಣದಲ್ಲಿ ಬಸ್ ಹಾಗೂ ಪೆಟ್ರೋಲ್ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹಲವರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.

ಗಜಾನನ ಬಸ್ ಹಾಗೂ ಪೆಟ್ರೋಲ್ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಘಟನೆಯಲ್ಲಿ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ ಓರ್ವ ಮಹಿಳೆಗೆ ತಲೆಗೆ ಗಂಭೀರ ಪೆಟ್ಟಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ನಡೆಯುತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿ ಬಸ್ಸಿನಲ್ಲಿದ್ದ ಗಾಯಾಳು ಪ್ರಯಾಣಿಕರನ್ನು ಆಂಬುಲೆನ್ಸ್ ಮೂಲಕ ಹೊಸನಗರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

HIT AND RUN

Hit, run

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಯುವತಿಯೊಬ್ಬಳಿಗೆ ಗಂಭೀರ ಗಾಯವಾಗಿರುವ ಘಟನೆ ಹೊಸನಗರ ರಸ್ತೆಯ ಚಿಪ್ಪಿಗರ ಕೆರೆಯ ಬಳಿ ನಡೆದಿದೆ . ಅತೀ ವೇಗವಾಗಿ ಬಂದು ಅಜಾಗರೂಕತೆಯಿಂದ ಸ್ಕೂಟಿಗೆ ಡಿಕ್ಕಿಯಾಗಿ ನಂತರ ಸ್ಥಳದಿಂದ ಪರಾರಿಯಾಗಿರುವ ಬೈಕ್ ಸಮೇತ ಸವಾರ ಪರಾರಿಯಾಗಿದ್ದಾನೆ.

ಗವಟೂರು ಸಮೀಪದ ಹಳೂರು ನಿವಾಸಿ ಅನ್ನಪೂರ್ಣ ಎಂಬ ಯುವತಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಹೊಸನಗರ ರಸ್ತೆಯ ಕೆರೆಯ ಏರಿ ಮೇಲೆ ಹಳೂರು ನಿವಾಸಿ ಸಂಜೀವ್ ತಮ್ಮ ಮಗಳೊಂದಿಗೆ ಹೊಂಡಾ ಆಕ್ಟೀವಾ ಸ್ಕೂಟಿಯಲ್ಲಿ ಗವಟೂರಿನಿಂದ ಪಟ್ಟಣದ ಕಡೆಗೆ ಬರುತಿದ್ದಾಗ ಪಟ್ಟಣದ ಕಡೆಯಿಂದ ಅತೀ ವೇಗವಾಗಿ ಬಂದ ಅನಾಮಧೇಯ ಬೈಕ್ ಸವಾರ ಏಕಾಏಕಿ ಸ್ಕೂಟಿಗೆ ಡಿಕ್ಕಿ ಹೊಡೆದು ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.

ತತ್ತಕ್ಷಣ ಸ್ಥಳಿಯರು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ವಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Head-on collision, Hit-and-run case

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close