ಗಾಂಜಾ ವಿರುದ್ಧದ ಜೀರೋ ಟಾಲರೆನ್ಸ್ ಎಂದ್ರು ಎಸ್ಪಿ , ಥ್ಯಾಂಕ್ಸ್ ಟು ಶಾಸಕ ಚೆನ್ನಿ & ಡಾ.ನಾಗಲಕ್ಷ್ಮೀ ಚೌಧರಿ-Zero tolerance against marijuana says SP, thanks to MLA Chenni & Dr. Nagalakshmi Chaudhary

 SUDDILIVE || SHIVAMOGGA

ಗಾಂಜಾ ವಿರುದ್ಧದ ಜೀರೋ ಟಾಲರೆನ್ಸ್ ಎಂದ್ರು ಎಸ್ಪಿ , ಥ್ಯಾಂಕ್ಸ್ ಟು ಶಾಸಕ ಚೆನ್ನಿ & ಡಾ.ನಾಗಲಕ್ಷ್ಮೀ ಚೌಧರಿ-Zero tolerance against marijuana says SP, thanks to MLA Chenni & Dr. Nagalakshmi Chaudhary

Zero, tolernce


ಗಾಂಜಾ ವಿರುದ್ಧ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಭೂತಪೂರ್ವ ಕಾರ್ಯಾಚರಣೆಗೆ ಇಳಿದಿದೆ. ಶಾಸಕ ಚೆನ್ನಬಸಪ್ಪನವರ ಆರ್ಭಟ, ಮಹಿಳ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿಯವರ ಖಡಕ್ ಸೂಚನೆ ಮತ್ತು ಅಪರೂಪಕ್ಕೆ ಜಿಲ್ಲಾ ಗಾಂಜಾ ವಿರುದ್ಧ ಜಿಪಂ ಸಭೆಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪನವರ ಆದೇಶದ ಮೇರೆಗೆ ಜಿಲ್ಲಾ ಪೊಲೀಸ್ ಮೈಚಳಿ ಬಿಟ್ಟು ಗಾಂಜಾ ಡ್ರೈವ್ ಮಾಡಿದ್ದಾರೆ.

ಶಿವಮೊಗ್ಗದ ಗಾಂಜಾ ಎಲ್ಲೆಡೆ ಸಿಗ್ತಾಯಿದೆ ಪೊಲೀಸರು ಇದರಲ್ಲಿ ಇನ್ವಾಲ್ವ್ ಆಗಿದ್ದಾರೆ ಎಂದು ಆರೋಪಿಸಿ ಶಾಸಕ ಚೆನ್ನಿ ಗೃಹಸಚಿವರಿಗೆ, ಐಜಿ, ಡಿಜಿ ಮತ್ತು ಎಡಿಪಿಜಿ ಬಳಿ ಹೋಗಿ ಮನವಿ ಕೊಟ್ಟು ಬಂದ ಬೆನ್ನಲ್ಲೇ ಪೊಲೀಸ್ ಇಲಾಖೆ ಇಂದು ದಿಡೀರ್ ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ವಿರುದ್ಧ ಜಿರೋ ಟಾಲೆನ್ಸ್ ಎಂದು ಹೇಳಿದ್ದಾರೆ. ಪೊಲೀಸರು ಗಾಂಜಾ ವಿರುದ್ಧ ಅಭೂತಪೂರ್ವ ಕಾರ್ಯಾಚರಣೆಗೆ ಇಳಿದ ಹಿನ್ನಲೆಯಲ್ಲಿ ಶಿವಮೊಗ್ಗ ಜನತೆ ಶಾಸಕರಿಗೆ ಮತ್ತು ಮಹಿಳಾ ಆಯೋಗಕ್ಕೆ  ಥ್ಯಾಂಕ್ಸ ಹೇಳುವಂತೆ ಮಾಡಿದೆ. 

ಇಂದು ಡಿಎಆರ್ ನಲ್ಲಿ ಗಾಂಜಾ ಸಂಬಂಧ ಪಟ್ಟಂತೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿಕೆ ನಗರದಲ್ಲಿ ಗಾಂಜಾ ವಿರುದ್ಧ ಜೀರೋ ಟಾಲರೆನ್ಸ್ ಹೊಂದಿದ್ದೇವೆ.  ಈ ವರ್ಷ ಗಾಂಜಾ ಪ್ರಕರಣ ಹೆಚ್ಚಾಗಿದೆ. 420 ಗಾಂಜಾ ಸೇವನೆ ಪ್ರಕರಣ ದಾಖಲಾಗಿದೆ. ಇಲಾಖೆಯಿಂದ ಪ್ರೋ ಆಕ್ಟವ್ ಆಗಿ ಗಾಂಜಾ ತಪಾಸಣೆ ನಡೆಸಲಾಗುತ್ತಿದೆ 4209 ಜನರನ್ನ ಗಾಂಜಾ ಪರೀಕ್ಷೆ ನಡೆಸಿದರೆ 420 ಗಾಂಜಾ ಸೇವನೆ ಪತ್ತೆಯಾಗಿದೆ ಎಙದರು.

ಏರಿಯಾ ಡಾಮಿನೇಷನ್ ಮಾಡಿದಾಗ ಜನರನ್ನ ಪಿಕ್ ಮಾಡಲಾಗಿದೆ. ಇಡೀ ಜಿಲ್ಲೆಯಲ್ಲಿ ಏರಿಯಾ ಡಾಮಿನೇಷನ್ ಮಾಡಲಾಗುತ್ತಿದೆ. 420 ಗಾಂಜಾ ಪ್ರಕರಣದಲ್ಲಿ ಅರ್ಧಕ್ಕೂ ಹೆಚ್ಚು ಶಿವಮೊಗ್ಗ ನಗರದಲ್ಲಿ 279 ಪ್ರಕರಣ ಪತ್ತೆಯಾಗಿದೆ.ಗಾಂಜಾ ಪೆಡ್ಲರ್ ಗಳನ್ನ ಪತ್ತೆಹಚ್ಚಲು ಡ್ರೋಣ್ ಸಹ ಬಳಕೆ ಮಾಡಲಾಗುತ್ತಿದೆ. ಇಮೇಜ್ ಕ್ಯಾಪ್ಚರ್ ಮಾಡಲಾಗುತ್ತಿದೆ. ಎಲ್ಲಿಂದ ತರಲಾಗಿದೆ ಸಪ್ಲೇ ಮಾಡಲಾಗಿದೆ ಎಂಬುದನ್ನ ಪತ್ತೆ ಮಾಡಲಾಗುತ್ತಿದೆ ಎಂದರು. 

ಗಾಂಜಾ ಜಾಗೃತಿ ಕಾರ್ಯಕ್ರಮಗಳನ್ನ ಮಾಡಲಾಗಿದೆ. 2025 ನ.30ರ ತನಕ  613 ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ದೂರು ಬರುವ ಕಡೆ ರ‌್ಯಾಂಡಮ್ ದಾಳಿ ನಡೆಸಲಾಗುತ್ತಿದೆ. 929 ಗಾಂಜಾ ದಾಳಿ ನಡೆದಿದೆ. ಸಾರ್ವಜನಿಕರು ಸಹ ಗಾಂಜಾ ಸೇವನೆ ಬಗ್ಗೆ ಮಾಹಿತಿ ನೀಡಿದರೆ ದೂರು ನೀಡಿದವರ ಹೆಸರನ್ನ ಗೌಪ್ಯವಾಗಿ ಇಡಲಾಗುವುದು. ಒಂದು ವೇಳೆ ಠಾಣೆಗೆ ಕೊಡಲು ಇಷ್ಟವಿಲ್ಲದಿದ್ದರೆ ನನಗೆ ನೇರವಾಗಿ ಮಾಹಿತಿ ನೀಡಲಾಗಿದೆ ಎಂದು ತಿಳಿದಿಸರು.

35 ಪ್ರಕರಣವನ್ನ ಪೆಡ್ಲರ್ ವಿರುದ್ದ 80 ಕೇಸ್ ದಾಖಲಿಸಲಾಗಿದೆ. ಗಾಂಜಾ ಖರೀದಿಸುವ ಜಾಗಕ್ಕೂ ನಮ್ಮ ತಂಡವನ್ನ ಕಳುಹಿಸಲಾಗಿದೆ. ಸರ್ಕಾರ ಆಂಟಿ ಆರ್ಕಡ್ ಟಾಸ್ಕ್ ಫೋರ್ಸ್ ರಚಿಸಲಾಗಿದೆ.  ಇವರು ಪ್ರತಿತಿಂಗಳು ಎನ್ ಕಾಲ್ಡ್ ಮೀಟಿಂಗ್ ಸಹ ನಡೆಯುತ್ತಾರೆ. ಇವರು ಶಾಲೆಯಲ್ಲಿ ಕಾಲೇಜಲ್ಲಿ ವ್ಯಸನ ಹೆಚ್ಚಾಗುವ ಬಗ್ಗೆ ಮಾಹಿತಿ ನೀಡುತ್ತಾರೆ.  ಇವರು ನೀಡಯವ ಸಲಹೆಗಳನ್ನ ಪೊಲೀಸ್ ಇಲಾಖೆ ಪಡೆಯಲಾಗುತ್ತಿದೆ. ನಂತರ ಅದನ್ನ ಕಾರ್ಯಗತ ಮಾಡುತ್ತದೆ ಎಂದರು. 

ಸಮಿತ್ರ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದೆ. ಗಾಂಜಾ ವ್ಯಸನಿ ಆರೋಪಿಗೆ ಪೊಲೀಸ್ ಸಿಬ್ವಂದಿ ಒಬ್ಬರನ್ನ  ಅಟ್ಯಾಚ್ ಮಾಡಲಾಗುತ್ತದೆ.  ಅವರ ಮೇಲೆ ನಿಗಾಇಡಲಾಗುತ್ತಿದೆ. ಆರೋಪಿ ವ್ಯಸನ ಮುಕ್ತವಾಗುವ ವರೆಗೂ ಪೊಲೀಸ್ ಸಿಬ್ಬಂದಿ ಇರುತ್ತಾರೆ. 18 ರಿಂದ 20 ವಯಸ್ಸಿನವರು ಗಾಂಜಾ ಸೇವನೆಯಲ್ಲಿ ಹೆಚ್ಚಿದ್ದಾರೆ. ಕಾಲೇಜ್ ಡ್ರಾಪ್ಸ್ ಔಟ್ ಆದವರು ಹೆಚ್ಚಿದ್ದಾರೆ. ಗಾಂಜಾವನ್ನ ಸ್ಥಳೀಯವಾಗಿ ತರಲಾಗುತ್ತಿರುವುದು ಕಡಿಮೆ, ಆದರೆ ಹೊರ ರಾಜ್ಯ ಮತ್ತು ಜಿಲ್ಲೆಯಿಂದ ತರಲಾಗುತ್ತಿದೆ ಎಂದು ತಿಳಿಸಿದರು. 

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ಗಾಂಜಾ ಡ್ರೈವ್ ಮಾಡಲಾಗುತ್ತಿದೆ. ಕತ್ತೆ ಕಾರ್ತಿಕ್ ಮತ್ತು ಇತರೆ ಪ್ರಕರಣಗಳು ಒಳಗೊಂಡಂತೆ ಕಳೆದ ಐದು ದಿನಗಳಲ್ಲಿ 7-8 ಗಾಂಜಾ ಪ್ರಕರಣಗಳು ದಾಖಲಾಗಿದೆ. ಗಾಂಜಾ ಶಿಕ್ಷಾರ್ಹ ಅಪರಾಧ ಎಂದು ಎಸ್ಪಿ ಹೇಳುವುದನ್ನ‌ಮರೆಯಲಿಲ್ಲ. 

Zero tolerance against marijuana says SP, thanks to MLA Chenni & Dr. Nagalakshmi Chaudhary

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close