ಪ್ರೀತಿಯ ವಿಚಾರದಲ್ಲಿ ಭದ್ರಾವತಿಯಲ್ಲಿ ಹರಿಯಿತು ನೆತ್ತರು, ಲಾಂಗು ಬೀಸಿ ಮರ್ಡರ್- In the matter of love, the Bhadravati river flowed, the murder was committed with a longing.

 SUDDILIVE || BHADRAVATHI

ಪ್ರೀತಿಯ ವಿಚಾರದಲ್ಲಿ ಭದ್ರಾವತಿಯಲ್ಲಿ ಹರಿಯಿತು ನೆತ್ತರು, ಲಾಂಗು ಬೀಸಿ ಮರ್ಡರ್- In the matter of love, the Bhadravati river flowed, the murder was committed with a longing.     

Murder, Bhadravathi


ಭದ್ರಾವತಿಯ ಜೈಭೀಮ್ ನಗರದಲ್ಲಿ ವ್ಯಕ್ತಿಯೋರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಈ ಗಲಾಟೆಯಲ್ಲಿ ಇಬ್ಬರು ಗಾಯಗೊಂಡಿದ್ದು ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ನಗರಕ್ಕೆ ಕಳುಹಿಸಲಾಗಿದೆ. 

ಮರ್ಡರ್ ಆದ ಮಂಜುನಾಥ್

ಜೈಭೀಮ್ ನಗರದಲ್ಲಿ ಮಂಜುನಾಥ್ (65) ಎಂಬುವರನ್ನ ಕೊಲೆ ಮಾಡಲಾಗಿದೆ ಲಾಂಗು ಬೀಸಿ ಮಂಜುನಾಥ್ ಅವರನ್ನ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಸೂರಿ ಮತ್ತು ಕಿರಣ್ ಗಾಯಗಳಾಗಿದ್ದು ಅವರನ್ನ ಶಿವಮೊಗ್ಗ  ಆಸ್ಪತ್ರೆಗೆ ರವಾನಿಸಲಾಗಿದೆ. 

ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಂಜುನಾಥನ ದೇಹವನ್ನ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯ ಮರಣೋತ್ತರ ಪರೀಕ್ಷೆ ಕೇಂದ್ರದಲ್ಲಿರಿಸಲಾಗಿದೆ. ಗಲಾಟೆ ಯಾಕೆ ಆಗಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. 

ಪ್ರೀತಿಯ ವಿಚಾರದಲ್ಲಿ ಮರ್ಡರ್?

ಪ್ರಾಥಮಿಕ ಮಾಹಿತಿಯ ಪ್ರಕಾರ ಪ್ರೀತಿಯ ವಿಚಾರದಲ್ಲಿ ಮರ್ಡರ್ ಆಗಿದೆ. ಜೈಭೀಮ್ ನಗರದ ನಿವಾಸಿಯಾಗಿದ್ದ ಸೃಷ್ಠಿ ಮತ್ತು ನಂದೀಶ್ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಸುತ್ತಿದ್ದ ಯುವತಿ ಮತ್ತು ಯುವಕ ಎರಡು ದಿನ ನಾಪತ್ತೆಯಾಗಿದ್ದರು. ಇಂದು ಭದ್ರಾವತಿಗೆ ವಾಪಾಸ್ ಆದ ಯುವಕ ಯುವತಿ ನೇರವಾಗಿ  ಭದ್ರಾವತಿ ಹಳೇನಗರ ಪೊಲೀಸ್ ಠಾಣೆಗೆ ಹೋಗಿದ್ದರು. ಯುವಕ ಪೊಲೀಸ್ ಠಾಣೆಯಲ್ಲಿದ್ದು ಯುವಕನ ಪ್ರೀತಿಗೆ ಸಹಕರಿಸಿದ್ದ ಆರೋಪದ ಮೇಲೆ ಯುವತಿಯ ಅಣ್ಣ ಕಿರಣ್ ಗೆ ಹಲ್ಲೆ ನಡೆಸಿದ್ದನು. ಇದನ್ನ ಬಿಡಿಸಲು ಹೋದ ಜೈಭೀಮ್ ನಗರದ ನಿವಾಸಿ ಮಂಜುನಾಥ್ ಗೆ ಲಾಂಗು ಬೀಸಿ ಕೊಲೆಯಾಗಿದ್ದಾರೆ. 

ಈ ಗಲಾಟೆಯಲ್ಲಿ ಸೂರಿ ಮತ್ತು ಕಿರಣ್ ಮೇಲೂ ಲಾಂಗು ಬೀಸಲಾಗಿದೆ. ಗಾಯಾಳುಗಳನ್ನ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಮರ್ಡರ್ ಮಾಡಿದ್ದ ಶಶಿ , ಕೆಂಚ ಮತ್ತು ಮೂವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಆಸ್ಪತ್ರೆಯ ಕಿಟಕಿ ಪೀಸ್ ಪೀಸ್


ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಮಂಜುನಾಥ್ ಅವರ ಮೃತ ದೇಹವನ್ನ ತರುವಾಗ ಭರ್ಜರಿ ಜನ ಸೇರಿದ್ದು ಮಂಜುನಾಥ್ ನನ್ನ ಕೊಲೆ ಮಾಡಿರುವುದಕ್ಕೆ ಅವರ ಕಡೆಯವರು ಆಸ್ಪತ್ರೆಯ ಡ್ರೆಸ್ಸಿಂಗ್ ಕೊಠಡಿಯ ಮುಂಭಾಗದ ಕಿಟಕಿ ಗ್ಲಾಜನ್ನ ಒಡೆದಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close