ಜಾತ್ರೆ ವ್ಯಾಪಾರಸ್ಥರ ಮೇಲೆ ಕೆಂಗಣ್ಣು ತೋರಿದ್ರಾ ಚರ್ಚ್ ನ ಫಾದರ್? Is the church father frowning upon the fair vendors?

 SUDDILIVE || SHIVAMOGGA

ಜಾತ್ರೆ ವ್ಯಾಪಾರಸ್ಥರ ಮೇಲೆ ಕೆಂಗಣ್ಣು ತೋರಿದ್ರಾ ಚರ್ಚ್ ನ ಫಾದರ್?Is the church father frowning upon the fair vendors?

Church, vendors


ಕ್ರಿಸ್ಮಸ್ ಹಿನ್ನಲೆಯಲ್ಲಿ ಇಂದು ಬಿ.ಹೆಚ್ ರಸ್ತೆಯಲ್ಲಿರುವ ಸೇಕ್ರೆಡ್ ಹಾರ್ಟ ಕೆಥಡ್ರಲ್ ಚರ್ಚ್ ನಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಜಾತ್ರೆಯ ವಾತಾವರಣ ನಿರ್ಮಾಣವಾಗಲಿದೆ. ಮೂರು ನಾಲ್ಕು ಗಂಎಯ ಈ ಸಂಭ್ರಮಾಚರಣೆಗೆ ಜಾತ್ರೆ ವ್ಯಾಪಾರಿಗಳ ಮೇಲೆ  ಚರ್ಚ್ ನ ಫಾದರ್ ಕೆಂಗಣ್ಣು ಇಟ್ಟುಬಿಟ್ರಾ ಎಂಬ ಅನುಮಾನ ಕಾಡುತ್ತಿದೆ. 

ಕ್ರಿಸ್ಮಸ್ ಹಬ್ಬದ ಹಿನ್ನಲೆಯಲ್ಲಿ ಬಿ.ಹೆಚ್ ರಸ್ತೆಯಲ್ಲಿ ಇವತ್ತು ಒಂದು ದಿನ ಸಂಭ್ರಮಾಚರಣೆ ನಡೆಯುತ್ತಿದೆ. ಈ ಪವಿತ್ರವಾದ ಹಬ್ಬದ ಹಿನ್ನಲೆಯಲ್ಲಿ ಇಂದು ಅನೇಕರು ಚರ್ಚ್ ಗೆ ಬಂದು ಭೇಟಿ ನೀಡಿ ತಮ್ಮಪ್ರಾರ್ಥನೆ ಸಲ್ಲಿಸುತ್ತಾರೆ. ಕೆಲವರು ಈ ಹಬ್ಬವನ್ನ ನೋಡಲೇಂದೇ ಚರ್ಚ್ ಗೆ ಬರುತ್ತಾರೆ. ಒಟ್ಟಿನಲ್ಲಿ ಹಬ್ಬದಲ್ಲಿ ಚರ್ಚ್ ನಲ್ಲಿ ಜಾತ್ರೆಯ ಚಿತ್ರಣ ರೂಪುಗೊಳ್ಳಲಿದೆ. 

ಆದರೆ ಇಲ್ಲಿನ ವ್ಯಾಪಾರಸ್ಥರಿಗೆ ಚರ್ಚ್ ಕಡೆಯವರಿಂದ ವ್ಯಾಪಾರ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಚರ್ಚ್ ನ ಗೇಟ್ ಒಳಗೆ  ಕಳೆದ 10 12 ವರ್ಷದಿಂದ ವ್ಯಾಪಾರ ನೀಡಲು ಇದೇ ಚರ್ಚ್ ನ ಕಮಿಟಿ ಮತ್ತು ಫಾದರ್ ಅನುಮತಿ ನೀಡುತ್ತಿದ್ದರೂ ಈ ಬಾರಿ ನಿರಾಕರಣೆಯಿಂದಾಗಿ ಜಾತ್ರೆ ವ್ಯಾಪಾರಸ್ಥರು ಕಣ್ಣೀರು ಹಾಕಿದ್ದಾರೆ. 

ಚರ್ಚ್ ಎದುರು ಜಾತ್ರೆ ವ್ಯಾಪಾರಸ್ಥರು ದೂರದ ಊರಿನಿಂದ ಬಂದು ತಮ್ಮ ಬದುಕುಕಟ್ಟಿಕೊಳ್ಳುತ್ತಾರೆ. ಇವರಿಗೆಲ್ಲಾ ಇದೇ ಚರ್ಚ್ ನ ಕಮಿಟಿಯವರು ಗೇಟ್ ಒಳಗೆ ಅನುಮತಿ ನೀಡುತ್ತಿದ್ದವರು ದಿಡೀರ್ ಎಂದು ಸ್ಥಗಿತಗೊಳಿಸಿರುವುದಾಗಿ ಇಲ್ಲಿನ ವ್ಯಾಪಾರಸ್ಥರು ದೂರಿದ್ದಾರೆ. ಕೆಲವರಿಗೆ ಮಾತ್ರ ಕ್ರೈಸ್ತ ಭವನದೊಳಗೆ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ದೂರಿದ್ದಾರೆ.  ಈ ಬಗ್ಗೆ ಫಾದರ್ ಗೆ ಕೇಳಿದರೆ ಕಮಿಟಿಗೆ ಅಂಗಡಿ ಹಂಚಲು ಅಧಿಕಾರ ನೀಡಲಾಗಿದೆ ಎನ್ನುತ್ತಾರೆ. ಕಮಿಟಿಯವರಿಗೆ ಕೇಳಿದರೆ ಫಾದರ್ ಗೆ ಹ್ಯಾಂಡ್ ಓವರ್ ಮಾಡಲಾಗಿದೆ ಎನ್ನುತ್ತಾರೆ ಎಂದು ಚನ್ನರಾಯಪಟ್ಟಣದಿಂದ ಗೊಂಬೆ ಮಾರಾಟ ಮಾಡಲು ಬಂದವರಲ್ಲೊಬ್ಬರು ಸುದ್ದಿಲೈವ್ ಮುಂದೆ ಅಳಲು ತೋಡಿಕೊಂಡಿದ್ದಾರೆ. 

ಈ ಬಾರಿ 50-60 ಜನ ಜಾತ್ರೆ ವ್ಯಾಪಾರಿಗಳಿಗೆ ಅಂಗಡಿ ಹಾಕಲು ನಿರಾಕರಿಸಲಾಗಿದೆ. ಗೊಂಬೆ, ಬಾಂಬೆ ಮಿಠಾಯಿ, ಬಲೂನ್ ಮಾರಾಟ, ಮಕ್ಕಳ ಆಟಿಕೆ, ತಿನಿಸು ಅಂಗಡಿಗಳು ಮೊದಲಾದ ಜಾತ್ರೆ ಅಂಗಡಿಗಳಿದ್ದರೇನೆ ಅಲ್ಲೊಂದು ಹಬ್ಬದ ವಾತಾವರಣ ಇರುವುದು. ಇವರನ್ನ ಹೊರಗಿಟ್ಟು ಹಬ್ಬ ಮಾಡಿದರೆ ಅದು ಹಬ್ಬವಾಗಲಿದೆಯಾ ಎಂಬ ಪ್ರಶ್ನೆಗೆ ಫಾದರ್ ಮತ್ತು ಚರ್ಚ್ ನವರೆ ಉತ್ತರಿಸಬೇಕು.  

ಅಂಹಿಸೆ, ಬಲಿದಾನ, ಮಾನವೀಯತೆಗೆ ಪ್ರಸಿದ್ದವಾದ ಸ್ಥಳದಲ್ಲಿ ಜಾತ್ರೆ ವ್ಯಾಪಾರಿಗಳನ್ನ ದೂರವಿಟ್ಟರೆ ಆ ಕ್ರೈಸ್ತ ಪರಮಾತ್ಮ ಮೆಚ್ಚುತ್ತಾನಾ ಎಂಬುದೆ ಪ್ರಶ್ನೆಯಾಗಿದೆ. ಊರು ತಿರುಗಿ ಬದುಕನ್ನ ಕಟ್ಟಿಕೊಲ್ಳುವ ಈ ಜನರ ಮೇಲೆ ಫಾದರ್ ಗೆ ಕರುಣೆ ಯಾಕೆ ಕರುಣಿಸಲಿಲ್ಲ ಎಂಬುದು ಮತ್ತೊಂದು ಪ್ರಶ್ನೆಯಾಗಿದೆ. ನಾಲ್ಕರಿಂದ ಐದು ಗಂಟೆಯ ವ್ಯಾಪಾರ ಮಾಡಿಕೊಂಡು ಊರಿಗೆ ಹೋಗುವವರನ್ನ ತಡೆದು ಚರ್ಚ್ ಸಾಧಿಸಿದ್ದು ಏನು ಎಂಬುದು ಮಗದೊಂದು ಪ್ರಶ್ನೆಯಾಗಿದೆ. 

Is the church father frowning upon the fair vendors?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close