SUDDILIVE || SHIVAMOGGA
ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ-Murder accused gets life sentence
ವೃದ್ದೆಯ ಕೊಲೆ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆಯನ್ನ ಮಾನ್ಯ ನ್ಯಾಯಾಲಯ ವಿಧಿಸಿ ಆದೇಶಿಸಿದೆ.
ದಿನಾಂಕ: 21-01-2021 ರಂದು ಕಿರಣ್ ವಾಸ ಲಿಂಗಾಪುರ ಗ್ರಾಮ, ತೀರ್ಥಹಳ್ಳಿ ಈತನು ಮೂವಳ್ಳಿ ಗ್ರಾಮದ ವಾಸಿ ಶಾರದಮ್ಮ, 68 ವರ್ಷ, ರವರಿಗೆ ಹಣ ಕೇಳಿದ್ದು, ಆಕೆಯು ಹಣ ನೀಡಲು ನಿರಾಕರಿಸಿದ ಕಾರಣ, ಆರೋಪಿಯು ಶಾರದಮ್ಮರವರನ್ನು ಕೊಲೆ ಮಾಡುವ ಉದ್ದೇಶದಿಂದ ಆಕೆಯ ತಲೆಯ ಹಿಂಭಾಗಕ್ಕೆ ಕಬ್ಬಿಣದ ಕೊಳವೆ ಮತ್ತು ಕುಡುಗೋಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದು ನಂತರ ಮೃತೆ ಶಾರದಮ್ಮ ರವರ ಮೈಮೇಲಿದ್ದ ಬಂಗಾರದ ಕಿವಿ ಓಲೆಯನ್ನು ಕಿತ್ತುಕೊಂಡು ಹೋಗಿರುತ್ತಾನೆ.
ಈ ಬಗ್ಗೆ ಮಾಳೂರು ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0014/2021 ಕಲಂ 302, 397 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಶ್ರೀ ಪ್ರವೀಣ್ ನೀಲಮ್ಮ ನವರ್ ಸಿ.ಪಿ.ಐ ಮಾಳೂರು ವೃತ್ತ ರವರು ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಶಾಂತರಾಜ್. ಜೆ, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ಘನ 3ನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿ ಕಿರಣ, 27 ವರ್ಷ, ವಾಸ ಲಿಂಗಾಪುರ ಗ್ರಾಮ, ತೀರ್ಥಹಳ್ಳಿ ಈತನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರಾದ ಶ್ರೀ ಯಶವಂತ ಕುಮಾರ್ ರವರು ಆರೋಪಿಗೆ ಜೀವಾವಧಿ ಕಾರಾವಾಸ ಶಿಕ್ಷೆ ಮತ್ತು 20,000/- ರೂ ದಂಡ ವಿಧಿಸಿ ಆದೇಶಿಸಿರುತ್ತಾರೆ.
Murder accused gets life sentence
