ಯಾರು ಪತ್ರಕರ್ತರಲ್ಲವೋ ಅವರನ್ನ ಸುದ್ದಿಮನೆಯಿಂದ ದೂರಯಿಡಿ- ಶಿವಾನಂದ ತಗಡೂರು- Keep those who are not journalists away from the newsroom - Shivananda Tagadur

 SUDDILIVE || SHIVAMOGGA

ಯಾರು ಪತ್ರಕರ್ತರಲ್ಲವೋ ಅವರನ್ನ ಸುದ್ದಿಮನೆಯಿಂದ ದೂರಯಿಡಿ- ಶಿವಾನಂದ ತಗಡೂರು- Keep those who are not journalists away from the newsroom - Shivananda Tagadur   

News, room

News, room

ಕಾರ್ಯನಿರತ ಪತ್ರಕರ್ತ ಸಂಘ ಶಿವಮೊಗ್ಗ ಘಟಕದ ನೂತನ ಪದಗ್ರಹಣ ಕಾರ್ಯಕ್ರಮ ಪತ್ರಿಕೋದ್ಯಮದಲ್ಲಿ ನಡೆದಿದೆ. ಶಿವಮೂರ್ತಿ ವೃತ್ತದಿಂದ  ಆರ್ ಟಿ ಒ ಕಚೇರಿ ರಸ್ತೆಯಲ್ಲಿರುವ ಪತ್ರಿಕಾ ಭವನದ ವರೆಗೂ ಡೊಳ್ಳು ಮತ್ತು ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. 

ನಂತರ ಪತ್ರಿಕಾಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟಿ,  ಪತ್ರಕರ್ತರು ಆರೋಗ್ಯ ಕಾಪಾಡಿಕೊಳ್ಳಿ ಪತ್ರಕರ್ತರೆಂಬ ಕಲ್ಪನೆಯೇ ಬದಲಾಗಿದೆ. ಕಾರ್ಯ ಮರೆತ ಪತ್ರಕರ್ತರೆಂದು ಕಾರ್ಯನಿರತ ಪತ್ರಕರ್ತರ ಸಂಘವನ್ನ  ಲೇವಡಿ ಮಾಡಲಾಗುತ್ತಿತ್ತು. ಈಗ ಶಿವಾನಂದ ತಗಡೂರು ಅವರು ರಾಜ್ಯಾಧ್ಯಕ್ಷರಾದ ನಂತರ ಈ ಲೇವಡಿಯನ್ನ ಬದಲಾಯಿಸಿದ್ದಾರೆ ಎಂದರು. 

ಪತ್ರಕರ್ತರ ಪಿಂಚಣಿ ವ್ಯವಸ್ಥೆ ಬದಲಾಗಬೇಕಿದೆ. ಸಾಕಷ್ಟು ನಿವೃತ್ತ ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ. ನಿಯಮಾವಳಿಗಳು ಬದಲಾಗಬೇಕು. ಮುಂದಿನ ಪತ್ರಕರ್ತರು ಸೌಲಭ್ಯ ಪಡೆಯುವಂತಾಗಬೇಕು.  ವಾರ್ತ ಇಲಾಖೆ ಅಧಿಕಾರಿಗಳು ಪಿಂಚಣಿ ನೀಡಲು ಬದಲಾಗಬೇಕಿದೆ ಎಂದರು. 

ಕಾರ್ಯ ನಿರತ ಪತ್ರಕರ್ತರು ಮೇಲ್ಮನವಿ ಸಲ್ಲಿಸಿ. ರಿಯಾಕ್ಷನ್ ಮತ್ತು ಊಹಾ ಪತ್ರಿಕೋದ್ಯಮದಿಂದ ದೂರವಿರಬೇಕು.  ಪತ್ರಕರ್ತರು ಅಭಿವೃದ್ಧಿ ಮತ್ತು ತನಿಖಾ ಪತ್ರಿಕೋದ್ಯಮದ ಬಗ್ಗೆ ಗಮನ ಹರಿಸಿ ಎಂದು ಕರೆ ನೀಡಿದರು.

ಮತ್ತೋರ್ವ ಆಯುಕ್ತ ರಾಜಶೇಖರ್ ವೃತ್ತಿ ಧರ್ಮದ ಜೊತೆಗೆ ಆರೋಗ್ಯವನ್ನ ಕಾಪಾಡಿಕೊಳ್ಳಿ ಎಂದರು. ಸಂಘದ ರಾಜ್ಯ ಉಪಾಧ್ಯಕ್ಷ ಮದನಗೌಡರು ಮಾತನಾಡಿ 94 ವರ್ಷಕಳೆದಿದೆ. 100 ವರ್ಷ ಕಳೆಯುವ ಹಂತಕ್ಕೆ ಬಂದು ನಿಂತಿದೆ. ರಾಜ್ಯದ ಪತ್ರಕರ್ತರಿಗೆ ಆರೋಗ್ಯ ವಿಮೆ ಮಾಡಿಸಿದ್ದಾರೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಬೈಲಾದಂತೆ ಪತ್ರಕರ್ತರಿಗೆ ಪ್ರಮಾಣವಚನ ಓದಿಸಿದ್ದಾರೆ ಎಲ್ಲರೂ ಅವರ ಜವಬ್ದಾರಿ ನಿಭಾಯಿಸಬೇಕು. ಅಧಿಕಾರದಿಂದ ನಿರ್ಗಮಿಸುವವರು ಸಂಘದ ಮನ್ನಡೆಗೆ ಸಹಕರಿಸಬೇಕು. ಸಂಘದಲ್ಲಿ ಹಣವಿಲ್ಲ. ಆದರೆ ಸಂಘ ಗಟ್ಟಿಯಿದೆ.  ಇರುವ ವ್ಯವಸ್ಥೆಯ ಒಳಗೆ ಸಕ್ರಿಯವಾಗಿ ಇಬ್ವರು ನಡೆಸುಕೊಂಡು ಬಂದಿದೆ. ಅಶಕ್ತರಿಗೆ ಸಂಘ ಸಹಾಯವಾಗಲಿ ಎಂದರು. 

ಕಾರ್ಯನಿರತವರಿಗೆ ಇದು ಸಂಘವಿನಃ ಕಾರ್ಯಮರೆತವರಿಗೆ ಅಲ್ಲ. ಪತ್ರಕರ್ತರು ಎಂದರೆ ಸಾಲದು ವೃತ್ತಿಗೌರವವನ್ನ ಕಾಪಾಡಿಕೊಳ್ಳಬೇಕು. ಸಾರ್ವಜನಿಕರ ಪ್ರೀತಿಗಳಿಸಿ ವೃತ್ತಿ ಘನತೆ ಹೆಚ್ಚಿಸಿಕೊಳ್ಳಬೇಕು.‌ ಪತ್ರಕರ್ತರಿಗೆ ಕೊಟ್ಟ ಘನತೆ ಕಾಪಾಡಿಕೊಳ್ಳಬೇಕು. ಪದಗಳನ್ನ ನಾಜೂಕಾಗಿ ಬಳಸುತ್ತಾರೆ. ಆದರೆ ಸಮೂಹ ಪತ್ರಿಕೋದ್ಯಮದಿಂದ ಹಾಳಾಗಿದೆ. ಯಾರು ಪತ್ರಕರ್ತರಲ್ಲವೋ ಅವರನ್ನ ಸುದ್ದಿಮನೆಯಿಂದ ದೂರಯಿಡಬೇಕಿದೆ ಎಂದರು. 

ದೇವರುಕೊಟ್ಟರು ಪೂಜಾರಿಕೊಡಲ್ಲ ಎಂಬ‌ನೀತಿಯನ್ನ ವಾರ್ತ ಇಲಾಖೆ ಅನಿಸರಿಸುತ್ತಿದೆ. ಕೊಂಡಿಯಾಗಿ ಕೆಲಸ ಮಾಡಬೇಕಿದ್ದ ಇಲಾಖೆ ಬದಲಿಗೆ ಕೊಕ್ಕೆಯಾಗಿ ಕೆಲಸ ಮಾಡುತ್ತಿದೆ. ಪತರ್ಕರ್ತರಿಗೆ ಉಚಿತ ಆರೋಗ್ಯ ವಿಮೆ ಸಿಗಬೇಕಿದೆ. ಇದು ಮಾನ್ಯತೆ ಪಡೆದವರಿಗೆ ಮತ್ರವಲ್ಲ ಎಲ್ಲಾ ಪತ್ರಕರ್ತರಿಗೆ ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ಕೆಲಸ ಆಗಬೇಕಿದೆ ಎಂದರು. 

Keep those who are not journalists away from the newsroom - Shivananda Tagadur 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close