270 ಕಳುವು ಪ್ರಕರಣಗಳು ಪತ್ತೆ, ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸರು-Police recover 270 theft cases, return them to their heirs

SUDDILIVE || SHIVAMOGGA

270 ಕಳುವು ಪ್ರಕರಣಗಳು ಪತ್ತೆ, ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸರು-Police recover 270 theft cases, return them to their heirs

Police, recovey
ತುಂಗನಗರದ ಪೊಲೀಸರಾದ, ಕಿರಣ ರಾಮಕೃಷ್ಣ, ಅರುಣ್ ಮೊದಲಾದವರು ಚಿತ್ರದಲ್ಲಿದ್ದಾರೆ


ಶಿವಮೊಗ್ಗದ ಡಿಎಆರ್ ಗ್ರೌಂಡ್ ನಲ್ಲಿ ಇಂದು 2025 ನೇ ಸಾಲಿನಲ್ಲಿ ಕಳು ವಾಗಿದ್ದ ಮಾಲುಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಯಿತು. 

2025 ನೇ ಸಾಲಿನಲ್ಲಿ 222 ಪ್ರಕರಣಗಳು ಪತ್ತೆಯಾಗಿದ್ದರೆ ಹಿಂದಿನ ವರ್ಷದಲ್ಲಿ 48 ಪ್ರಕರಣಗಳು ಸೇರಿ ಒಟ್ಟು 270 ಪ್ರಕರಣಗಳು ಪತ್ತೆಯಾಗಿವೆ. ಅಂದಾಜು ಮೌಲ್ಯ 6,43,65, 477 ರೂ. ಮೌಲ್ಯದ ಮಾಲುಗಳನ್ನ ಜಿಲ್ಲಾ ಪೊಲೀಸರು ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಯಿತು. 

2025 ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 612 ಸ್ವತ್ತು ಕಳೆವು ಪ್ರಕರಣಗಳು ಅಂದರೆ ಇನ್ನೊಬ್ಬರು ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ ಎರಡು ಲಾಭಕ್ಕಾಗಿ ಕೊಲೆ 8 ದರೋಡೆ 17 ಸುಲಿಗೆ 14 ಸರಗಳ್ಳತನ 48  ಕಳ್ಳತನ 12 ಮನೆಗಳತನ 37 ಸಾಮಾನ್ಯ ಕಳವು 12 ಜಾನುವಾರು ಕಳವು 53 ವಾಹನ ಕಳವು ಹಾಗೂ 19 ವಂಚನೆ ಪ್ರಕರಣಗಳು ಸೇರಿದಂತೆ 270 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.



ಬಂಗಾರದ ಆಭರಣಗಳು ಬೆಳ್ಳಿಯ ಆಭರಣಗಳು ಮೊಬೈಲ್ ಫೋನ್ ವಾಹನಗಳು ಜಾನುವಾರು ನಗದು ಹಣ ಎಲೆಕ್ಟ್ರಾನಿಕ್ ವಸ್ತುಗಳು ಅಡಿಕೆ ಮತ್ತು ಇತರೆ ವಸ್ತುಗಳನ್ನು ಸೇರಿ ಆರು ಕೋಟಿ 43,65,47 ರೂ ಮೌಲ್ಯಗಳನ್ನು ಪತ್ತೆಹಚ್ಚಲಾಗಿದೆ ಕಳೆದ ವರ್ಷ ಪತ್ತೆಯಾದ 48 ಪ್ರಕರಣಗಳಲ್ಲಿ 89 ಲಕ್ಷದ 43 125 ಮೌಲ್ಯಗಳ ಎಂದು ಅಂದಾಜಿಸಲಾಗಿದೆ.

ಸಿ ಈ ಆರ್ ಪೋರ್ಟಲ್ ಮುಖಾಂತರ ಪತ್ತೆ ಹಚ್ಚಲಾದ 1920 ಮೊಬೈಲ್ ಫೋನ್ ಗಳನ್ನು ಹಿಂದುರಿಸಲಾಗಿದೆ. ಮಾಲೀಕರಿಗೆ ಹಿಂದಿರುಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಉತ್ತಮ ಕಾರ್ಯವನ್ನು ನಿರ್ವಹಿಸಿದ್ದು ವರಿಗೆ ಎಸ್‌ಪಿ ಮಿಥುನ್ ಕುಮಾರ್ ಅವರು ಪ್ರಶಂಶಿಸಿ ಅಭಿನಂದಿಸಿರುತ್ತಾರೆ

ತುಂಗನಗರ ಠಾಣೆಯಲ್ಲಿ 2,59,15,687 ರೂ.ಗಳಲ್ಲಿ 1,67,83,456 ರೂ. ಮೌಲ್ಯದ ಮಾಲುಗಳನ್ನ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಇದರಲ್ಲಿ 1204.7 ಗ್ರಾಂ ಚಿನ್ನಾಭರಣ, 1295 ಗ್ರಾಂ ಬೆಳ್ಳಿ, 21 ವಾಹನಗಳ ಪತ್ತೆ, 12 ಜಾನುವಾರುಗಳು, 60 ಲಕ್ಷ್ಕೂ ಹೆಚ್ಚು ನಗದು ಪತ್ತೆ ಮಾಡಲಾಗಿದೆ. 

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 39 ಲಕ್ಷದ ಮೌಲ್ಯದ ವಸ್ತುಗಳು ಕಳುವಾಗಿದ್ದು ಅದರಲ್ಲಿ 22,14,500 ರೂ ಮೌಲ್ಯಗಳ ವಸ್ತುಗಳು ಪತ್ತೆಯಾಗಿವೆ. ಕೋಟೆಯಲ್ಲಿ 80 ಲಕ್ಷ ರೂ ಮೌಲ್ಯದ ವಸ್ತುಗಳು ಪತ್ತೆಯಾಗಿವೆ. ವಿನೋಬನಗರದಲ್ಲಿ 20,69,718 ರೂ.ಗಳು ರಿಕವರಿಯಾಗಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ 162 ಗ್ರಾಂ ಚಿನ್ನಾಭರಣ ಕಳುವಾಗಿದ್ದು ಇದರಲ್ಲಿ 132 ಗ್ರಾಂ ಚಿನ್ನಾಭರಣ ಕಳುವಾಗಿದೆ. 

Police recover 270 theft cases, return them to their heirs

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close