ವಿವಾಹಿತ ಮಹಿಳೆ ವಿ*ಷ ಸೇವಿಸಿ ಆ*ತ್ಮಹತ್ಯೆ-Married woman commits su*icide by co*nsuming po*ison

 SUDDILIVE || BHADRAVATHI

ವಿವಾಹಿತ ಮಹಿಳೆ ವಿ*ಷ ಸೇವಿಸಿ ಆ*ತ್ಮಹತ್ಯೆ-Married woman commits suicide by consuming poison    

Married, woman

ಭದ್ರಾವತಿ ಸಾದತ್ ಕಾಲೋನಿಯ ವಿವಾಹಿತ ಮಹಿಳೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. 

ಅನ್ವರ್ ಕಾಲೋನಿಯ ಆಯೇಷ ಎಂಬ 23 ವರ್ಷದ ಮಹಿಳೆ  ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ನಾಲ್ಕುವರ್ಷದ ಹಿಂದೆ ಸಯ್ಯದ್ ಸಲೀಮ್ ಎಂಬುವರ ಜೊತೆ ಮದುವೆಯಾಗಿತ್ತು. ಸಯ್ಯದ್ ಸಲೀಮ್ ಎಂಬುವರ ಜೊತೆ ಸಂಸಾರ ನಡೆಸಿದ ಆಯೇಷಾರಿಗೆ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಲೀಮ್, ಅವರ ತಂದೆ ಸಹೋದರಿಯರು ಆಯೇಷಾರ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಸಲೀಮ್ ದುಬೈನಲ್ಲಿದ್ದರೂ ಮೊಬೈಲ್ ಕರೆಯಿಂದ ಟಾರ್ಚರ್ ನೀಡುತ್ತಿರುವುದಾಗಿ ಆಯೇಷಾರ ತವರು ಕುಟುಂಬ ಆರೋಪಿಸಿದೆ. 

ಮೂರು ದಿನಗಳ ಹಿಂದೆ ಹೊಟ್ಟೆನೋವು ಎಂದು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಬಂದು ದಾಖಲಾಗಿದ್ದ ಆಯೇಷಾ ವಿಷ ಸೇವಿಸಿದ್ದಾಗಿ ತಿಳಿದು ಬಂದ ತಕ್ಷಣ ಮೆಗ್ಗಾನ್ ಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರಿಗೆ ಒಂದು ಹೆಣ್ಣು ಒಂದು ಗಂಡು ಮಕ್ಕಳಿದ್ದರು.  

Married woman commits suicide by consuming poison

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close