ವಿದ್ಯುತ್ ಶಾಕ್ ಕೊಟ್ಟು ಕಾಡುಕೋಣ ಹತ್ಯೆ- Killing wild boar by giving electric shock

SUDDILIVE || Hosanagara

ವಿದ್ಯುತ್ ಶಾಕ್ ಕೊಟ್ಟು ಕಾಡುಕೋಣ ಹತ್ಯೆ! - ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ-Killing wild boar by giving electric shock

Wild, Boar


ವಿದ್ಯುತ್ ಶಾಕ್ ಕೊಟ್ಟು ಕಾಡುಕೋಣವನ್ನು ಹತ್ಯೆಗೈದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಸಮೀಪದಲ್ಲಿ ನಡೆದಿದೆ.

ಕೋಡೂರು ಸಮೀಪದ ಶಾಖವಳ್ಳಿ ಗ್ರಾಮದ ಸರ್ವೆ ನಂ 9 ರಲ್ಲಿ ಗಂಡು ಕಾಡುಕೋಣವೊಂದು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆ ನಡೆದಿದ್ದು , ವಿಷಯ ತಿಳಿಯುತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಸಮೀಪದಲ್ಲಿಯೇ ಅಂತ್ಯಕ್ರಿಯೆ ನಡೆಸಿರುವ ಘಟನೆ ನಡೆದಿದೆ.

ನಡೆದಿದ್ದೇನು !!?

ಕಾಡುಕೋಣವೊಂದನ್ನು ವಿದ್ಯುತ್ ಶಾಕ್ ನೀಡಿ ಹತ್ಯೆಗೈದಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೊಡೂರು ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಶಾಖವಳ್ಳಿ ಗ್ರಾಮದಲ್ಲಿ ಹುಡುಕಾಟ ನಡೆಸಿದ್ದಾರೆ ಈ ಸಂಧರ್ಭದಲ್ಲಿ ಶಾಖವಳ್ಳಿ ಗ್ರಾಮದ ಸರ್ವೆ ನಂಬರ್ 9 ರ ಗದ್ದೆಯಲ್ಲಿ ಕಾಡುಕೋಣದ ಮೃತದೇಹ ಪತ್ತೆಯಾಗಿದೆ.ಸ್ಥಳದಲ್ಲಿದ್ದ ವಿದ್ಯುತ್ ಕಂಬದಿಂದ ಬೇಲಿಗೆ ವಿದ್ಯುತ್ ಸಂಪರ್ಕ ಪಡೆದಿದ್ದು ಕಂಡುಬಂದಿದೆ.

ಈ ಸಂಧರ್ಭದಲ್ಲಿ ಮಾತನಾಡಿದ ಸಾಗರ ವಲಯ ಡಿಎಫ಼್ ಓ ಮೋಹನ್ ಕುಮಾರ್ ವಿದ್ಯುತ್ ಪ್ರವಹಿಸಿ ಕಾಡುಕೋಣ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಿಂದ ಪ್ರಾಥಮಿಕವಾಗಿ ತಿಳಿದುಬಂದಿದೆ ಸಂಬಂಧಪಟ್ಟ ಆರೋಪಿತರ ದೋಷಾರೋಪಣ ಪಟ್ಟಿ ಕಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂಧರ್ಭದಲ್ಲಿ ಎಸಿಎಫ಼್ , ಹೊಸನಗರ ಆರ್ ಎಫ಼್ ಓ ಅನಿಲ್ ಕುಮಾರ್ , ಉಪ ವಲಯ ಅರಣ್ಯಾಧಿಕಾರಿ ಹಾಲೇಶ್ , ಸಿಬ್ಬಂದಿಗಳಾದ ಮಂಜುನಾಥ್ , ಚಳ್ಳಯ್ಯ ಹಾಗೂ ಇನ್ನಿತರರು ಇದ್ದರು.

Killing wild boar by giving electric shock

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close