ಶಾಸಕರ ಧ್ವಂಧ್ವ ಹೇಳಿಕೆ, ಭಡವಾಳದಾರರಲ್ಲಿ ಆತಂಕ-ಆಸೀಫ್ ಮಸೂದ್- MLAs controversial statements create anxiety among the landlords - Asif Masood

SUDDILIVE || SHIVAMOGGA

ಶಾಸಕರ ಧ್ವಂಧ್ವ ಹೇಳಿಕೆ, ಭಡವಾಳದಾರರಲ್ಲಿ ಆತಂಕ-ಆಸೀಫ್ ಮಸೂದ್- MLAs' controversial statements create anxiety among the landlords - Asif Masood

MLA, Controversial

ಶಾಸಕರ ದ್ವಂದ್ವ ಹೇಳಿಕೆಗಳಿಂದ ಹೂಡಿಕೆದಾರರು ಶಿವಮೊಗ್ಗದಲ್ಲಿ ಭಂಡವಾಳ ಹೂಡಲು ಹಿಂಜರಿಯುತ್ತಿದ್ದಾರೆ ಎಂದು ಮಾಜಿ ಕಾರ್ಪೊರೇಟರ್ ಆಸೀಫ್ ಮಸೂದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಜಾತಿ ಮತ ಭೇದವಿಲ್ಲದೆ ಗ್ಯಾರಂಟಿ ಯೋಜನೆಗಳ ಮುಖಾಂತರ ಎಲ್ಲಾ ಸಮುದಾಯದ ಬಡವರ ಜೀವನಕ್ಕೆ ದಾರಿದೀಪವಾಗಿದೆ.ಸಮಾಜದಲ್ಲಿ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ದ್ವೇಷಭಾಷಣ ಮಾಸೂದೆ ಯನ್ನು ಸರ್ಕಾರ ಅಂಗೀಕರಿಸಿದೆ. ಜನಪರ ಕಾಳಜಿ ಇಲ್ಲದ ಬಿಜೆಪಿ ಪಕ್ಷ ಸಮಾಜದಲ್ಲಿ ದ್ವೇಷವನ್ನು ಬೀಡುತ್ತಾ ರಾಜಕೀಯ ಮಾಡುತ್ತಾ ಬರುತ್ತಿದೆ, ಈ ಮಾಸೂದೆ ಯಿಂದ ಜನಪರ ಕಾಳಜಿ ಇಲ್ಲದ ಬಿ ಜೆ ಪಿ ಪಕ್ಷದ ಮೂಲ ಭಂಡವಾಳಕ್ಕೆ ತೊಂದರೆ ಯಾಗಿತ್ತಿದೆ. ಹಾಗಾಗಿ ಬಿ ಜೆ ಪಿ ಪಕ್ಷ ಈ ಮಾಸೂದೆ ವಿರುದ್ಧವಾಗಿ ಬೊಬ್ಬೆ ಹೊಡೆಯುತ್ತಿದೆ.

ಶಿವಮೊಗ್ಗದ ಅಭಿರುದ್ದಿ ಬಗ್ಗೆ ಕಾಳಜಿ ಇಲ್ಲದ ಶಾಸಕ ಚನ್ನಬಸಪ್ಪ ರವರು ಸದನದಲ್ಲಿ ನಗರದ ಯಾವುದೇ ಅವರು ವಿಷಯಗಳ ಬಗ್ಗೆ ಚರ್ಚೆ ಮಾಡದೇ ಶಿವಮೊಗ್ಗದಲ್ಲಿ ಏನೂ ಸರಿಯಿಲ್ಲ ಎಂಬ ಸಂದೇಶ ನೀಡಿ ಭಂಡವಾಳ ಹೂಡಿಕೆದಾರರು ಭಂಡವಾಳ ಹೂಡಲು ಹಿಂಜರಿಯುವಂತೆ ಮಾಡಿದ್ದಾರೆ. ಜೊತೆಗೆ ಚನ್ನಬಸಪ್ಪರವರಿಗೆ ಚುನಾವಣೆಯಲ್ಲಿ ಸಹಕರಿಸಿದ ಗಾಂಧಿಬಜಾರ್, ನೆಹರುರಸ್ತೆ, ದುರ್ಗಿಗುಡಿಯ ವ್ಯಾಪಾರಸ್ಥರು ರಿಯಲ್ ಎಸ್ಟೇಟ್ ಉದ್ಯಮಿಗಳು ತಲೆಯಮೇಲಿ ಕೈ ಹೊತ್ತು ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಇನ್ನಾದರೂ ಶಾಸಕರು ನಗರದ ಅಭಿರುದ್ಧಿ ಕಡೆ ಗಮನಹರಿಸಲಿ ಎಂದು ಆಸೀಫ್ ಆಗ್ರಹಿಸಿದ್ದಾರೆ.

MLAs' controversial statements create anxiety among the landlords - Asif Masood

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close