ರೈಲ್ವೆ ಇಲಾಖೆಯ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ಕೊಡದೆ ಇದ್ದರೆ ಉಗ್ರ ಹೋರಾಟ-Violent protest if Kannada is not allowed in Railway Department recruitment exam

SUDDILIVE || SHIVAMOGGA

ರೈಲ್ವೆ ಇಲಾಖೆಯ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ಕೊಡದೆ ಇದ್ದರೆ ಉಗ್ರ ಹೋರಾಟ-Violent protest if Kannada is not allowed in Railway Department recruitment exam   

Recruitment, exam


ರೈಲ್ವೆ ಇಲಾಖೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಕನ್ನಡಕ್ಕೆ ಅವಕಾಶ ಕೊಡದೆ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನ ಕರವೇ ಸಿಂಹ ಸೇನೆಯ ರಾಜ್ಯಾಧ್ಯಕ್ಷರಾದ ರವಿಪ್ರಸಾದ್ ಎಂ ನೀಡಿದ್ದಾರೆ.  

ಕರ್ನಾಟಕ ರಾಜ್ಯದಲ್ಲಿ ಹುಬ್ಬಳ್ಳಿ ಮತ್ತು ಮೈಸೂರನ್ನು ಹೊರತುಪಡಿಸಿ ಬೆಂಗಳೂರಿನಲ್ಲಿ ನಡೆದಂತಹ ರೈಲ್ವೆ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ದ್ವಿ ಭಾಷಯಲ್ಲಿ ಅಂದರೆ ಇಂಗ್ಲೀಷ್ ಹಿಂದಿಯನ್ನು ಅಳವಡಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ತ್ರಿ ಭಾಷಾ ಸೂತ್ರವನ್ನು  ಪಾಲಿಸುತ್ತಿರುವ ರೈಲ್ವೆ ಇಲಾಖೆ, ಬೆಂಗಳೂರಿನ ಪರೀಕ್ಷೆಯನ್ನು ದ್ವಿ ಭಾಷಾ ಸೂತ್ರದಲ್ಲಿ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.  

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕರಾವೇ ಸಿಂಹ ಸೇನೆಯು ಯಾವುದೇ ಕಾರಣಕ್ಕೂ ಇಂತಹ ಅನ್ಯಾಯವನ್ನು ಸಹಿಸುವುದಿಲ್ಲ  ಕೇಂದ್ರ ರೈಲ್ವೆ ಇಲಾಖೆಯ ಅಧಿಕಾರಿಗಳು ಬೆಂಗಳೂರನ್ನು ತಮಷ್ಟಕ್ಕೆ ತಾವು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿಕೊಂಡಿರುವ ಹಾಗೆ ಕಾಣುತ್ತದೆ ಮತ್ತು ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸದೆ ಹೋದಲ್ಲಿ ದೊಡ್ಡಮಟ್ಟದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.  

ನಮ್ಮ ರಾಜ್ಯದವರೇ ಆದಂತಹ ರೈಲ್ವೆ ಸಚಿವ ವಿ ಸೋಮಣ್ಣನವರು ಇದರ ಬಗ್ಗೆ ದೊಡ್ಡ ಮಟ್ಟದ ವಿಚಾರವಾಗಿರುವುದರಿಂದ ಮಧ್ಯಪ್ರವೇಶಿಸಿ ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ ಹಾಗೆ ಶಿವಮೊಗ್ಗ ಜಿಲ್ಲೆಯವರೇ ಆದಂತಹ ಮಾನ್ಯ ಬಿ ವೈ ವಿಜಯೇಂದ್ರರವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದು ಅವರು ಸಹ ಕೇಂದ್ರ ಸರ್ಕಾರ ದ ಸಚಿವರೊಂದಿಗೆ ಮಾತನಾಡಬೇಕೆಂದು ಒತ್ತಾಯಿಸಿದ್ದಾರೆ. 

Violent protest if Kannada is not allowed in Railway Department recruitment exam

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close