ಮೈಸೂರಿನ ಮಹಿಳೆ ಮೆಗ್ಗಾನ್ ನಲ್ಲಿ ಸಾವು, ಕರ್ತವ್ಯ ನಿಷ್ಠೆ ಮೆರೆದ ಪೊಲೀಸ್ ಚೌಡಪ್ಪ-Mysore woman dies in Meggan, police officer Chowdappa shows loyalty to duty

 SUDDILIVE || SHIVAMOGGA 

ಮೈಸೂರಿನ ಮಹಿಳೆ ಮೆಗ್ಗಾನ್ ನಲ್ಲಿ ಸಾವು, ಕರ್ತವ್ಯ ನಿಷ್ಠೆ ಮೆರೆದ ಪೊಲೀಸ್ ಚೌಡಪ್ಪ-Mysore woman dies in Meggan, police officer Chowdappa shows loyalty to duty    

Chowdappa, police


ಮೈಸೂರಿನಿಂದ ಬಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಮಹಿಳೆಯೋರ್ವರ ವಾರಸುದಾರರನ್ನ ಪತ್ತೆ ಹಚ್ಚುವಲ್ಲಿ ಎ ಉಪವಿಭಾಗದ ಪೊಲೀಸ್ ಚೌಡಪ್ಪ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಮೃತರ ಕುಟುಂಬಕ್ಕ ಅವ ಮೈಮೇಲಿದ್ದ ಚಿನ್ನಾಭರಣ ಹಾಗೂ ನಗದನ್ನ ಹಿಂದಿರುಗಿಸಲು ಸಹಾಯವಾಗಿದೆ. 

ದಿನಾಂಕಃ 17-12-2025 ರಂದು ಮಹಿಳೆಯೊಬ್ಬರು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ಅನಾರೋಗ್ಯದ ಕಾರಣ ದಾಖಲಾಗಿದ್ದು, ಮಹಿಳೆಯು ದಾಖಲಾಗುವ ಸಂದರ್ಭದಲ್ಲಿ ತನ್ನ  ಹೆಸರನ್ನು ತಿಳಿಸದೇ ಕೇವಲ ಊರು ಮೈಸೂರು ಎಂದು ಹೇಳಿದ್ದು, ನಂತರ ಮಹಿಳೆಯು ಅದೇ ದಿನ ಉಸಿರಾಟದ ತೊಂದರೆಯಿಂದ ಮೃತ ಪಟ್ಟಿರುತ್ತಾರೆ.  ಮೃತೆಯ ವಾರಸುದಾರರ ಬಗ್ಗೆ ಪರಿಶಿಲಿಸುವಾಗ ಯಾವುದೇ ಕುರುಹುಗಳು ಲಭ್ಯವಿರುವುದಿಲ್ಲ, ನಂತರ ಮೃತೆಯ ಹತ್ತಿರವಿದ್ದ ಚೀಟಿಯಲ್ಲಿ ಬರೆದಿರುವ ಫೋನ್ ನಂಬರ್ ಗೆ ಕರೆ ಮಾಡಿ ವಿಚಾರ ತಿಳಿಸಿದಾಗ, ಆಕೆಯ ಮಗಳು ಪತ್ತೆಯಾಗಿದ್ದು, ನಂತರ ಮೃತೆಯ ಬಳಿ ಇದ್ದ 34,400/-  ರೂ ನಗದು ಹಣ ಹಾಗೂ ಒಂದು ಕೊರಳು ಚೈನ್ ಮತ್ತು 02 ಉಂಗುರಗಳನ್ನು ಮೃತೆಯ ಮಗಳಿಗೆ ಹಸ್ತಾಂತರಸಿರುತ್ತದೆ.


 ಶಿವಮೊಗ್ಗ  ಎ ಉಪ ವಿಭಾಗದ ಸಿಇಸಿ ಚೌಡಪ್ಪ ಕಮತರರವರು ಅನಾಮಧೇಯ ಮಹಿಳೆಯ ವಾರಸುದಾರರನ್ನು ಪತ್ತೆ ಮಾಡಿ, ಉತ್ತಮ ಕರ್ತವ್ಯವನ್ನು ನಿರ್ವಹಿಸಿದ್ದು,ಕರ್ತವ್ಯ ನಿಷ್ಠೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸಿಸಿ ಅಭಿನಂದಿಸಿರುತ್ತಾರೆ. ಜೊತೆಯಲ್ಲಿ ಮೆಗ್ಗಾನ್ ಆಸ್ಪತ್ರೆಯ ಹೆಲ್ಪ್ ಲೈನ್ ಮನು ಉಪಸ್ಥಿತರಿರುತ್ತಾರೆ.

Mysore woman dies in Meggan, police officer Chowdappa shows loyalty to duty 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close