ಶಿವಮೊಗ್ಗದ ನೂತನ ಡಿಸಿಯಾಗಿ ಪ್ರಭು ಕವಲಕಟ್ಟಿ-Prabhu Kavalakatti appointed as new DC of Shivamogga

 SUDDILIVE || SHIVAMOGGA

ಶಿವಮೊಗ್ಗದ ನೂತನ ಡಿಸಿಯಾಗಿ ಪ್ರಭು ಕವಲಕಟ್ಟಿ-Prabhu Kavalakatti appointed as new DC of Shivamogga 

Dc, kavalakatti


ಎಸ್ಪಿ ಮಿಥುನ್ ಕುಮಾರ್ ಜಿ.ಕೆ ವರ್ಗಾವಣೆ ಬೆನ್ನಲ್ಲೇ ಶಿವಮೊಗ್ಗದ ಜಿಲ್ಲಾಧಿಕಾರಿಯಾಗಿರುವ ಗುರುದತ್ತ ಹೆಗಡೆ ಅವರ ವರ್ಗಾವಣೆಯಾಗಿದೆ. ಪ್ರಭು ಕವಲಿಕಟ್ಟಿ ಅವರನ್ನು ಶಿವಮೊಗ್ಗದ ನೂತನ ಜಿಲ್ಲಾಧಿಕಾರಿಯಾಗಿ ಆದೇಶ ಮಾಡಲಾಗಿದೆ.

ಜಿಲ್ಲಾಧಿಕಾರಿಯಾಗಿರುವ ಗುರುದತ್ತ ಹೆಗಡೆ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಸ್ಟೇಟ್‌ ಮೆಡಿಕಲ್‌ ಸಪ್ಲೈ ಕಾರ್ಪೊರೇಷನ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಿ ಡಿಪಿಎಆರ್‌ ಆದೇಶದಲ್ಲಿ ತಿಳಿಸಲಾಗಿದೆ.  

ಪ್ರಭು ಕವಲಕಟ್ಟಿ ಅವರು ಬೆಂಗಳೂರು ಮುನಿಸಿಪಲ್‌ ಅಡ್ಮಿನಿಸ್ಟ್ರೇಷನ್‌ ನಿರ್ದೇಶಕರಾಗಿದ್ದರು. ಡಿಸಿ ಅವರ ಸ್ಥಾನಕ್ಕೆ ಈ ಮೊದಲು ಸ್ಥಳ ಕಾಯ್ದಿರಿಸಿ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ಹೊರಗೆಬಿದ್ದಿತ್ತು. ತದನಂತರ ಪ್ರಭು ಕವಲಕಟ್ಟಿ ಅವರ ವರ್ಗಾವಣೆ ಆಗಿದೆ ಎಂಬ ಮಾಹಿತಿ ಖಚಿತಗೊಂಡಿದೆ.

Prabhu Kavalakatti appointed as new DC of Shivamogga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close