ಇಎಸ್ಐ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ- Patient protest at ESI Hospital

 SUDDILIVE || SHIVAMOGGA

ಇಎಸ್ಐ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ- Patient protest at ESI Hospital  

ESI, patient

ESI, patient

ESI, Patient

ಇಎಸ್ಐ ಆಸ್ಪತ್ರೆಯಲ್ಲಿ ರೆಫರಿಂಗ್ ಪತ್ರ ಸಿಕ್ತಾಯಿಲ್ಲ ಹಾಗಾಗಿ ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನಿಬಣ ಕಿರಣ್ ನೇತೃತ್ವದಲ್ಲಿ ಬಿ.ಹೆಚ್ ರಸ್ತೆಯಲ್ಲಿರುವ ಇಎಸ್ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.  ಇಎಸ್ಐ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಗೆ ರೋಗಿಗಳಿಗೆ ರೆಫರಿಂಗ್ ಪತ್ರ ಪಡೆಯಲು ರೋಗಿಯ ಸಂಬಂಧಿಕರ ಪರದಾಟ ಹಾಗೂ ಗೋಳಾಟ ಮುಂದು ವರೆದಿದೆ.

ಮಹಿಳೆ ರೋಗಿಯೊಬ್ಬರ ಕಣ್ಣಿನಲ್ಲಿ ಗುಳ್ಳೆಯೆದ್ದಿದ್ದು, ಗುಳ್ಳೆಗೆ ಇಂಜಿಕ್ಷನ್ ನೀಡಿ ಅವರ ಚಿಕಿತ್ಸೆಗೆ ನೀಡಬೇಕಿದೆ. ಈ ಹಿನ್ನಲೆಯಲ್ಲಿ  ಕಣ್ಣಿನ ಬ್ಲಾಕ್ ತೆಗೆದು ಚಿಕಿತ್ಸೆ ನೀಡಲು ಸುಬ್ಬಯ್ಯ ಆಸ್ಪತ್ರೆಗೆ ದಾಖಲಾಗಿದೆ. ಮಹಿಳೆಯ ಪುತ್ರ ಮೊಹಮದ್ ಶಫಿ ಶಿವಮೊಗ್ಗದ ಬಿ.ಹೆಚ್ ರಸ್ತೆಯಲ್ಲಿರುವ ಇಎಸ್ಐ ಡಿಸ್ಪೆನ್ಸರಿ ಆಸ್ಪತ್ರೆಗೆ ನಾಲ್ಕು ದಿನಗಳಿಂದ ಓಡಾಡುತ್ತಿದ್ದು ರೆಫರಿಂಗ್ ಪತ್ರ ಸಿಕ್ಕಿಲ್ಲದೆ ಒದ್ದಾಡುತ್ತಿದ್ದಾರೆ.  ಬಡವರಿಗೆ ಅನುಕೂಲವಿಲ್ಲದೆ ಇಎಸ್ಐ ಆಸ್ಪತ್ರೆ ಮುಚ್ಚುವಂತೆ ಅವರು ಆಗ್ರಹಿಸಿದ್ದು, ಹೆಣ ಬಿದ್ದ ಮೇಲೆ ಸರ್ಕಾರ ಎಚ್ಚೆತ್ತುಕೊಳ್ಳುತ್ತಾ ಎಂಬುದು ಪ್ರಶ್ನಿಸಿದ್ದಾರೆ.

ಸಂಘಟನೆಯ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಇಎಸ್ಐ ಆಸ್ಪತ್ರೆಗಳಲ್ಲಿ ಸರ್ವರ್ ಡೌನ್ ರೆಫರಿಂಗ್ ಪತ್ರ ಸಿಕ್ತಯಿಲ್ಲದಿರುವುದು. ಬಯೋ ಮೆಟ್ರಿಕ್ ಇಲ್ಲದಿರುವುದು ಸಾಮಾನ್ಯವಾಗಿದೆ. 100 ಕಿಮಿ ಯಿಂದ ಬರುವ ರೋಗಿಗಳಿಗೆ ರೆಫರಿಂಗ್ ಪತ್ರ ಸಿಕ್ಕರೂ ಖಾಸಗಿ ಆಸ್ಪತ್ರೆಯಲ್ಲಿ ಇಎಸ್ಐ ಕೌಂಟರ ಒಪನ್ ಇರೊಲ್ಲ. ರೋಗಿಗಳಿಗೆ ಅನುಕೂಲವಾಗದಿರುವ ಹಿನ್ನಲೆಯಲ್ಲಿ ಇಎಸ್ಐ ಯಾಕೆ ಬೇಕು ಎಂದು ಪ್ರಶ್ನಿಸಿದರು.

ಅಧಿವೇಶನ ಡಿ.8 ರಿಂದ ಆರಂಭವಾಗಿದೆ. ಖಾಸಗಿ ಆಸ್ಪತ್ರೆಯ ಜೊತೆ ಇಎಸ್ಐ ಟೈ ಅಪ್  ಜೊತೆ ಆಗ್ತಯಿಲ್ಲ ಎಂಬುದರ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು. ಸರಿಯಾಗದಿದ್ದರೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಇಎಸ್ಐ ವೈದ್ಯೆ ಡಾ.ಅಶ್ವಿನಿ ಮಾತನಾಡಿ, ಖಾಸಗಿ ಆಸ್ಪತ್ರೆಗಳ ಜೊತೆ ಪರವಾನಗಿ ನವೀಕರಣದ ವೇಳೆ ಈ ಸಮಸ್ಯೆ ಉಂಟಾಗಿದೆ. ಸಾಧಾರಣ ರೋಗಿಗಳಿಗೆ ನಮ್ಮ ಡಿಸ್ಪೆನ್ಸರಿಗಳಲ್ಲಿ ಮೆಡಿಸಿನ್ ನೀಡಲಾಗುತ್ತದೆ. ಡಿ.8 ರಿಂದ ರೆಫರಿಂಗ್ ಪತ್ರ ಸಿಗ್ತಾಯಿಲ್ಲ ಎಂಬ ಸಮಸ್ಯೆ ಉಂಟಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೌಂಟರ್ ಓಪನ್ ಆಗಿದೆ. ತುರ್ತಾಗಿ ಬಂದವರಿಗೆ ದಾವಣಗೆರೆಗೆ ಬರೆದುಕೊಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಆದರೆ ಇನ್ನೊಬ್ಬ ರೋಗಿಯ ಸಂಬಂಧಿ ಸೂಪರ್ಸ್ಪೆಷಾಲಿಟಿ ಆಸ್ಪತ್ರೆಗಳಲ್ಲೂ ಕೌಂಟರ್ ತೆರೆದಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಇಎಸ್ಐ ರೋಗಿಗಳ ಪರದಾಟ ಪ್ರತಿ ವರ್ಷಕ್ಕೆ ನಡೆಯುತ್ತಿದ್ದು ಯಾರೂ ಹೇಳುವರಿಲ್ಲ ಕೇಳುವವರಿಲ್ಲದಂತಾಗಿದೆ.  

Patient protest at ESI Hospital  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close