ಹೊಟೆಲ್ ಸಿಬ್ಬಂದಿಯ ಮೇಲೆ ಪೊಲೀಸರಿಂದ ಹಲ್ಲೆ? Police attack on hotel staff?

 SUDDILIVE || SHIVAMOGGA

ಹೊಟೆಲ್ ಸಿಬ್ಬಂದಿಯ ಮೇಲೆ ಪೊಲೀಸರಿಂದ ಹಲ್ಲೆ?  Police attack on hotel staff?  

Police, attack

ತಾರಾ ಹೋಟೆಲ್ ನಲ್ಲಿ ನಿನ್ನೆ ರಾತ್ರಿ ದೊಡ್ಡಪೇಟೆ ಪೊಲೀಸರು ಹೋಟೆಲ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. 

ಬಾಗಿಲು ಮುಚ್ಚಿಸಲು ಹೋದಾಗ ಅಲ್ಲಿನ ಸಿಬ್ಬಂದಿಯ ಮೇಲೆ ಡಬ್ಬಲ್ ಸ್ಟಾರ್ ಪೊಲೀಸರು ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ. ವ್ಯಾಪಾರಸ್ಥರು ಪೊಲೀಸರು ಹೀಗೆ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದರೆ ಸಿಬ್ಬಂದಿಗಳು ಉಳಿಯುವುದಿಲ್ಲ ಎಂಬ ಕೊರಗು ಇರುವ ಬೆನ್ನಲ್ಲೇ ಈ ಘಟನೆ ವ್ಯಾಪಾರಸ್ಥರಿಗೆ ಆಘಾತ ಉಂಟು ಮಾಡಿದೆ. 

ನಿನ್ನೆ ರಾತ್ರಿ 11-30 ರ ಸಮಯದಲ್ಲಿ ದೊಡ್ಡಪೇಟೆ ಪೊಲೀಸರು ತಾರಾ ಹೋಟೆಲ್ ನ ಹೊರಗಡೆ ನಿಂತಿದ್ದ ವೇಳೆ ಹೋಟೆಲ್ ಬಂದ್ ಮಾಡಲು ಸೂಚಿಸಿದ್ದರು. ಆ ವೇಳೆ ಒಳಗಡೆಯಿದ್ದ ಮತ್ತೋರ್ವ ಸಿಬ್ಬಂದಿ ಶವೀಜ್ ಎಂಬಾತ ಹೊರಗಡೆ ಏನು ನಡೆಯುತ್ತಿದೆ ಎಂದು ಹೊರಗೆ ಬಂದಿದ್ದಾರೆ. ಶವೀಜ್ ಮೇಲೆ ದೊಡ್ಡಪೇಟೆ ಪಿಎಸ್ಐ ಅವರು ಹೊಡೆದಿರುವುದಾಗಿ ವಿಡಿಯೋ ದಲ್ಲಿ ತಿಳಿದು ಬಂದಿದೆ. 


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಮಿಥುನ್ ಕುಮಾರ್ ಈ ವಿಡಿಯೋ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಆದರೆ ರಾತ್ರಿ 10 ಗಂಟೆಯ ಒಳಗೆ ವ್ಯಾಪಾರಸ್ಥರು ತಮ್ಮ ಹೋಟೆಲ್ ಗಳನ್ನ ಬಂದ್ ಮಾಡಲು ಈ ಹಿಂದೆ ಬಹಳ ಸಲ ಸೂಚನೆ ನೀಡಲಾಗಿದೆ ಎಂದಿದ್ದಾರೆ.  

ಆದರೂ ಸಮಯ ಮೀರಿ ವ್ಯಾಪಾರ ಮಾಡಲಾಗುತ್ತಿರುವ ಬಗ್ಗೆ ಬಸ್ ಸ್ಟ್ಯಾಂಡ್ ಸುತ್ತಮುತ್ತದ ವ್ಯಾಪಾರಸ್ಥರು ಕಂಡು ಬರುತ್ತಿದ್ದಾರೆ.  ಆದರೆ ಹೋಟೆಲ್ ನವರು ಬಹುತೇಕ ಬಂದ್ ಆಗಿತ್ತು. ಇಬ್ಬರು ಗ್ರಾಹಕರು ಮಾತ್ರ ಕುಳಿತು ಊಟ ಮಾಡುತ್ತಿದ್ದರು ಎಂದು ಸಮ್ಜಾಯಿಷಿ ನೀಡಿದ್ದಾರೆ. ಪೊಲೀಸರು ಮತ್ತು ವ್ಯಾಪಾರಸ್ಥರು  ಹೊಂದಾಣಿಕೆಯಿಂದ ಹೋಗುವ ಅನಿವಾರ್ಯತೆ ಎದುರಾಗಿದೆ. 

Police attack on hotel staff

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close