ನನ್ನದು ವಿಧಾಯ ಭಾಷಣವಲ್ಲ, ಐದು ವರ್ಷ ನಾನೇ ಸಚಿವನಾಗಿ ಮುಂದುವರೆಯುವೆ-ಸಚಿವ ಮಧು ಬಂಗಾರಪ್ಪ-This is not my farewell speech, I will continue as a minister for five years - Minister Madhu Bangarappa

 SUDDILIVE || SHIVAMOGGA

ನನ್ನದು ವಿಧಾಯ ಭಾಷಣವಲ್ಲ, ಐದು ವರ್ಷ ನಾನೇ ಸಚಿವನಾಗಿ ಮುಂದುವರೆಯುವೆ-ಸಚಿವ ಮಧು ಬಂಗಾರಪ್ಪ-This is not my farewell speech, I will continue as a minister for five years - Minister Madhu Bangarappa     

Madhu, Bangarappa



 



ಸರ್ಕಾರ ಪರ್ಮನೆಂಟ್ ಐದು ವರ್ಷಿರುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ನುಡಿದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡುವರೆ ವರ್ಷದಿಂದ ಸಚಿವನಾಗಿ ಉತ್ತಮ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಿದ್ದಂತೆ ಮಾಧ್ಯಮದವರು ವಿಧಾಯ ಭಾಷಣ ಎಂದು ಬಿಂಬಿಸುವುದು ಬೇಡ ಹಾಗಾಗಿ ಮುಂದಿನ ಐದು ವರ್ಷ ನಮ್ಮದೇ ಸರ್ಕಾರವಿರುತ್ತದೆ ಎಂದರು.

ಅನುದಾನಿತ ರಹಿತ, ಅನುದಾನಿತ ಶಾಲೆ ಹೆಡ್ ಮಾಸ್ಟರ್ ಗೆ ಗೌರವಿಸಲಾಗುತ್ತಿದೆ. 25 ಸಾವಿರ ರೂ ಒಂದು ಶಾಲೆಗೆ ನೀಡಲಾಗುತ್ತಿದೆ. ಒಳ್ಳೆ ಕೆಲಸ ಮಾಡುವವರಿಗೆ ಪ್ರೋತ್ಸಾಹಿಸಲು ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ನನ್ನ ಇಲಾಖೆಯಲ್ಲಿ ಹಣದ ಸಮಸ್ಯೆ ಇಲ್ಲ. 900 ಕೆಪಿಎಸ್ ಶಾಲೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಶಿವಮೊಗ್ಗದಲ್ಲಿಯೇ ಜನವರಿ ತಿಂಗಳ ಕೊನೆಯಲ್ಲಿ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗುವುದು. ಸಿಎಂ ಅವರನ್ನ ಕರೆತರಲಾಗುತ್ತಿದೆ ಎಂದರು.

ಸದನದಲ್ಲಿ ವಿಪಕ್ಷಗಳ ನಾಯಕರು ನನ್ನನ್ನ ಬೆಂಬಲಿಸಿದ್ದಾರೆ. ಸ್ಟ್ಯಾಂಡರ್ಡ್ ಸೂಚನೆ ನೀಡಿರುವೆ‌. ಎಲ್ಲಾಕಡೆ ನಾನು ಹೋಗಲು ಸಾಧ್ಯವಿಲ್ಲ. ಹಾಗಾಗಿ ಇಲಾಖೆ ಅಧಿಕಾರಿಗಳಿಗೆ ಸಮಸದಯೆ ಕಂಡರೆ ಅದರ ಬಗ್ಗೆ ವರದಿ ನೀಡಲು ಸೂಚಿಸಿರುವೆ. ಬೆಂಗಳೂರಿನಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮೆಘಾ ಪಿಟಿ ನಡೆಸಲಾಗಿದೆ. 46 ಸಾವಿರ ಶಾಲೆಗಳ ಮಕ್ಕಳು ಭಾಗಿಯಾಗಿದ್ದರು.

ಮಕ್ಕಳು ಶಾಲೆಗೆ ಹೋದರೆ ಐಎಎಸ್ ಅಧಿಕಾರಿ ಆಗುತ್ತಾರೆ ಎಂಬ ನಂಬಿಕೆಯಿದೆ. ಆದರೆ ಪೋಷಕರೇ ಮೊದಲ ಪಾಠಶಾಲೆಯವರು. ಕಾಣದ ದೇವರಿಗೆ ಪೂಜೆ ಮಾಡ್ತೀವಿ ತಂದೆ ತಾಯಿನೇ ದೇವರು. ನಮ್ಮ ಮಗ ಪಾದಪೂಜೆ ಮಾಡಿದ್ದಕ್ಕೆ ಪೋಷಕರು ಕಣ್ಣೀರು ಭಾಷ್ಪ ಇಟ್ಟಿರುವ ಘಟನೆ ಮೆಘಾ ಪಿಟಿಯಲ್ಲಿ ನಡೆದಿದೆ. ಇದು ಸಂತೋಷ ತಂದಿದೆ. ಇಂದು ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನ ಅರ್ಥಪೂರ್ಣವಾಗಲಿದೆ  ಎಂದರು.

ನಾನು ಫೇಲ್ ಆಗಿರಬಹುದು ಆದರೆ ಶಾಲೆಯಲ್ಲಿ ಮಕ್ಕಳು ಹೆಚ್ಚು ಓದಬೇಕೆಂದರು. ನನ್ನ ಎಕ್ಸಾಮ್ ಸದನದಲ್ಲಿ ನಡೆದಿದೆ. ನಾನು ಡಿಸ್ಟಿಂಗ್ ನಲ್ಲಿ ಪಾಸ್ ಆಗಿರುವೆ. ಶಿಕ್ಷಕರ ನೇಮಕಾತಿ ಆಗಲಿದೆ. 1995ರಲ್ಲಿ ನೇಮಕಾತಿಯಾದ ಅನುದಾನ ರಹಿತ ಕನ್ನಡ ಶಾಲೆಯ 6000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಶಿಕ್ಷಣ ಇಲಾಖೆಗೆ ಹೆಚ್ಚಿನ ಬಜೆಟ್ ನೀಡುವಂತೆ ಬೇಡಿಕೆಯಿಡಲಾಗಿದೆ. ಅನುದಾನಿತ ಶಿಕ್ಷಕರಿಗೆ ಹೆಚ್ಚು ಸಂಬಳ ನೀಡುವ ಭರವಸೆ ನೀಡಲಾಗಿದೆ. ಗಡಿಭಾಗದ ಕನ್ನಡ ಶಾಲೆಗಳ ಉಳಿವಿಗೆ ಹೊಸ ಆದೇಶವನ್ನೇ ಮಾಡಿದ್ದೇನೆ. ಕೆಪಿಎಸ್ ನಲ್ಲಿ ಎಲ್ ಕೆಜಿ ಯಿಂದ ಕಾಲೇಜಿನ ವರೆಗೆ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಮುಂದಿನವರ್ಷದಿಂದ ಎಲ್ಲಾ ಸರ್ಕಾರಿ ಶಾಲೆ ಮತ್ತು ಪಿಯು ಕಾಲೇಜಿಗೆ ಎಲ್ ಕೆಜಿಯಿಂದ 12 ನೇ ಶಾಲೆವರೆಗೆ ನೋಟ್ ಬುಕ್, ಯೂನಿಫಾರಂ, ಬಿಸಿಊಟ ನೀಡಲಾಗುತ್ತಿದೆ. ಇನ್ನೂರು ಕೋಟಿ ಹಣ ಹೆಚ್ಚುವರಿಯಾಗಲಿದೆ. ಇದು ಹೊರೆಯಾಗದು ಎಂದ ಅವರು ಕೆಪಿಎಸ್ ಶಾಲೆಯಲ್ಲಿ ಮೂಸಿಕ್ ಟೀಚರ್ ಮತ್ತು ಪಿಟಿ ಟೀಚರ್ ನ್ನ ಖಡ್ಡಾಯವಾಗಿ ನೇಮಿಸಲಾಗುವುದು ಎಂದರು.

ಹೇಟ್ ಸ್ಪೀಚ್ ಕಾನೂನು ನ್ನ ಸ್ವಾಗತಿಸುವೆ.‌ ಮಕ್ಕಳ ಭವಿಷ್ಯಕ್ಕೆ ಇದು ಒಳ್ಳೆಯಲಾಗಲಿದೆ. ಸಾಮಾಜಿಕ ಜಾಲತಾಣದ ವಿಷಯ ಹೆಚ್ಚು ಪ್ರಚಲಿತವಾಗಿದೆ. ಗುಣಾತ್ಮಕ ಶಿಕ್ಷಣವನ್ನ ನೀಡಲು ಕೆಪಿಎಸ್ ಶಾಲೆ ಆರಂಭಿಸಲಾಗಿದೆ. ಹೇಟ್ ಸ್ಪೀಚ್ ಕಾಯ್ದೆಯನ್ನ ಸದನದಲ್ಲಿ ಹರಿದುಹಾಕಲಾಗಿದೆ. ಕರಾವಳಿ ಭಾಗದ ಬಿಜೆಪಿಯವರು ಹೇಸಿಗೆಯನ್ನ ತುಂಬಿಕೊಂಡು ರಾಜಕಾರಣ ಮಾಡುವವರಿಗೆ ಕಾಯ್ದೆ ಬ್ರೇಕ್ ಹಾಕಲಿದೆ ಎಂದರು.

ಮನ್ರೇಗಾ ಹೆಸರನ್ನ ಬಿಜೆಪಿ ಬದಲಿಸಿದೆ. ಇಡೀ ದೇಶ ಮತ್ತು ಪ್ರಪಂಚದಲ್ಲಿ ಹೆಚ್ಚು ಪ್ರತಿಮೆ ಸ್ಥಾಪನೆ ಆಗಿರುವುದು ಗಾಂಧಿಜಿದು. ಅವರ ಹೆಸರನ್ನೇ ಬದಲಿಸುತ್ತಿರುವ ಬಿಜೆಪಿ ಗೋಡ್ಸೆಯ ಕಾನೂನನ್ನ ತರಲಿದ್ದಾರೆ ಎಂದರು.

ಎಲೆಚುಕ್ಕಿ ರೋಗಕ್ಕೆ ಬಿಎಸ್ ವೈ ಸಿಎಂ ಆಗಿದ್ದಾಗ ಹಣಕೊಡುವುದಾಗಿ ಹೇಳಿದ್ದರು. ಆದರೆ ಬರಲಿಲ್ಲ. ಬೊಮ್ಮಾಯಿ ಸಿಎಂ ಆಗಿದ್ದಾಗ 10 ಕೋಟಿ ಹಣ ಕೊಡುವುದಾಗಿ ಹೇಳಿದ್ದರು. ಬಂತಾ ಹಣ ಎಂದು ಪ್ರಶ್ನಿಸಿದ ಸಚಿವರು ಕೊಳೆ ರೋಗಕ್ಕೆ ಸಿಎಂ ಸಿದ್ದರಾಮಯ್ಯ ಇದ್ದಾಗ ಹಣ ಬಂದಿತ್ತು. ಕೇಂದ್ರದ ಗೃಹ ಸಚಿವ ಅಡಿಕೆ ಸಂಶೋಧನ ಕೇಂದ್ರ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಇದುವರೆಗೂ ಈಕಡೆ ತಿರುಗಿ ನೋಡೇ ಇಲ್ಲ. ಇದೇ ಸಂಸದರು ನಾವು ಕಟ್ಟಿದ ತೆರಿಗೆ ಹಣವನ್ನ ಸದನದಲ್ಲಿ ಮಾತನಾಡಲಿಲ್ಲ. ಕಳೆದ ಬಾರಿ ಹಣವನ್ನ ನ್ಯಾಯಾಲಯದ ಮೂಲಕ ತೆರಿಗೆ ಹಣ ಪಡೆದಿದ್ದವಿ ಎಂದರು.

ಕೇವಲ ಹೆಸರು ಬದಲಿಸುವುದು ಮತ್ತು ಸದನದಲ್ಲಿ ಮಾತನಾಡುವ ವಿಷಯವನ್ನ ಮಾಧ್ಯಮಗಳಿಗೆ ಸಂಸದರು ಬಿಡುಗಡೆ ಮಾಡಿ ಪ್ರಚಾರ ಪಡೆಯುತ್ತಿದ್ದಾರೆ. ಹಾಗಾಗಿ ಹೆಸರು ಬದಲಿದುವುದನ್ನ‌ ವಿರೋಧಿಸುತ್ತಿದ್ದೇವೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೊಂದಲ ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ. ಎರಡು ತಿಂಗಳ ಹಣ ಬಾರದಿದ್ದಕ್ಕೆ ಸಚಿಚರ ಕಣ್ಣಲ್ಲಿ ಕಣ್ಣೀರು ಹಾಕಿಸಿದ್ದಾರೆ ಎಂದರು.

ಅರಣ್ಯ ವಿಚಾರ ಒಂದು ಹಂತಕ್ಕೆ ಬಂದಿದೆ. ಆನೆ ತುಳಿತದಿಂದ ಸಾವಾಗಿರುವ ಘಟನೆಗಳ ಬಗ್ಗೆನೂ ಗಂಭೀರವಾಗಿ ಪರಿಗಣಿಸಲಾಗಿದೆ. ಚಂದ್ರಗುತ್ತಿ ಪ್ರಾಧಿಕಾರ ಆರಂಭಿಸಲಾಗಿದೆ. ಕೆಎಫ್ ಡಿ ಗೆ ಕೇಂದ್ರ ಸರ್ಕಾರ ಸಹಕಾರಕ್ಕೆ ಬರಬೇಕು. ಸಂಶೋಧನೆ ಎಲ್ಲದಕ್ಕೂ ದೊಡ್ಡದಿರುತ್ತದೆ. ಅದನ್ನ ಸಂಸದರು ಮಾಡಬೇಕಿತ್ತು  ಎಂದರು.

ಗಾಂಜಾ ಮತ್ತು ಕಾನೂಬಾಹಿರ ಚಟುವಟಿಕೆಗೆ ಬ್ರೇಕ್ ಹಾಕಲಾಗುತ್ತದೆ ಹಲವು ದಿನಗಳಿಂದ‌ ಜಿಲ್ಲೆಯಲ್ಲಿ ಪೊಲೀಸರು ಬೇರೂರಿದ್ದಾರೆ. ಎಸ್ಪಿ ಐಜಿಪಿ ಅವರು ಜಿಲ್ಲೆಯಲ್ಲಿ ಗಾಂಜಾ ಹತ್ತಿಕ್ಕಬೇಕಿದೆ. ಇಲ್ಲವಾದರೆ ಅವರನ್ನೇ ಜವಬ್ದಾರಿ ಮಾಡಲಾಗುವುದು ಎಂದರು.

This is not my farewell speech, I will continue as a minister for five years - Minister Madhu Bangarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close