ಭದ್ರಾವತಿ-ಪ್ರಾಂಶುಪಾಲರಿಂದ ಮಹಿಳ ಅತಿಥಿ ಉಪನ್ಯಾಸಕಿಗೆ ಲೈಂಗಿಕ ದೌರ್ಜನ್ಯದ ಆರೋಪ-Principal accused of sexual assault on female guest lecturer

 SUDDILIVE|| SHIVAMOGGA 

ಪ್ರಾಂಶುಪಾಲರಿಂದ ಮಹಿಳ ಅತಿಥಿ ಉಪನ್ಯಾಸಕಿಗೆ ಲೈಂಗಿಕ ದೌರ್ಜನ್ಯದ ಆರೋಪ-Principal accused of sexual assault on female guest lecturer

Sexual, assault


ಕಾಲೇಜಿನ ಪ್ರಾಂಶುಪಾಲರು ಒಬ್ಬರು ಅತಿಥಿ ಉಪನ್ಯಾಸಕಿ ಒಬ್ಬರಿಗೆ ಕಾರಿನಲ್ಲಿ ಡ್ರಾಪ್ ಮಾಡುವ ವೇಳೆ ಲೈಂಗಿಕ ದೌರ್ಜನ್ಯ ನೀಡಿರುವ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಭದ್ರಾವತಿಯ ಬಿಆರ್ ಪ್ರಾಜೆಕ್ಟ್ ನ ಶಾಂತಿನಗರದಲ್ಲಿರುವ ಇರುವ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನಲ್ಲಿ ಅತಿಥಿ ಉನ್ಯಾಸಕರಾಗಿದ್ದ 40 ವರ್ಷದ ಮಹಿಳೆ ಶಿವಮೊಗ್ಗದಿಂದ ಓಡಾಡುತ್ತಿದ್ದರು. ಕಾಲೇಜಿನ ಪ್ರಾಂಶುಪಾಲರು ಕಾರಿನಲ್ಲಿ ಡ್ರಾಪ್ ನೀಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ನೀಡಲು ಯತ್ನಿಸಿರುವ ಆರೋಪ ಕೇಳಿ ಬಂದಿದೆ. ನಿಮ್ಮ ಜಾತಿಯವರು ಲೈಂಗಿಕ ಕ್ರಿಯೆಗೆ ಸಹಕರಿಸುವುದಾಗಿ ಮಹಿಳೆಗೆ ಪ್ರಚೋದಿಸಲಾಗಿದೆ ಎನ್ನಲಾಗಿದೆ. 

ಶ್ರೀಪಾದ ಹೆಗ್ಡೆ, ಮಂಗಳ ವಸುಂಧರ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಡಿ.19 ರಂದು ಮಂಜುಳ ಮತ್ತು ವಸುಂಧರರವರು ಡ್ಯಾನ್ಸ್ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಬೈಯುವಾಗ ಪ್ರಶ್ನಿಸಿದ ಅತಿಥಿ ಉಪನ್ಯಾಸಕಿಗೆ ಥಳಿಸಿದ್ದಾರೆ. ಅಲ್ಲೇ ಇದ್ದ ಪ್ರಾಂಶುಪಾಲ ಶ್ರೀಪಾದ ಹೆಗ್ಡೆ ಜಾತಿ ಬುದ್ದಿ ಬಿಡಬೇಕು ಎಂದು ಹೇಳಿ ನಿಂದಿಸಿರುವ ಬಗ್ಗೆ ದೂರಲಾಗಿದೆ. 

ಈ ಕುರಿತು ಸುದ್ದಿಲೈವ್ ನೊಂದಿಗೆ ಮಾತನಾಡಿದ ಸಸಂತ್ರಸ್ತೆ ಲೈಂಗಿಕ ದೌರ್ಜನ್ಯವಾಗಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ಪ್ರಕರಣ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. 

Principal accused of sexual assault on female guest lecturer

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close