ಆರೋಪಿಗಳ ಫೊಟೊ ಹಿಡಿದುಕೊಂಡು ಬಂದ ಮೃತಳ ಕುಟುಂಬ-The deceased's family came holding a photo of the accused

 SUDDILIVE || BHADRAVATHI

ಆರೋಪಿಗಳ ಫೊಟೊ ಹಿಡಿದುಕೊಂಡು ಬಂದ ಮೃತಳ ಕುಟುಂಬ-The deceased's family came holding a photo of the accused.

ನ.24 ರಂದು ಭದ್ರ ನಾಲೆಗೆ ಹಾರಿ ಶವವಾಗಿ ಪತ್ತೆಯಾಗಿದ್ದ ಭದ್ರಾವತಿಯ ಲತಾ (24) ರವರ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಇಂದು ಮೃತ ಕುಟುಂಬ ಭದ್ರಾವತಿಯ ಡಿವೈಎಸ್ಪಿ ಕಚೇರಿಗೆ ಮನವಿ ನೀಡಲು ಆರೋಪಿತರ ಫೊಟೊ ಹಿಡಿದು  ಆಗಮಿಸಿದ್ದರು. 

ಮಾವ ಕೃಷ್ಣಪ್ಪ, ಅತ್ತೆ ಶಾರದಮ್ಮ, ಪತಿ ಗುರುರಾಜ್, ಮಗಳು ಪೂಜಾ(ಕವನ) ಗುರು ಅವರ ಅಕ್ಕ ನಾಗರತ್ನ, ಎರಡನೇ ಅಕ್ಕ ರಾಜೇಶ್ವರಿ ಎಂಬುವರನ್ನ ಬಂಧಿಸಬೇಕೆಂದು ಆಗ್ರಹಿಸಲಾಯಿತು. ಇಂದು ಪತಿ ಗುರುರಾಜ್ ಅವರನ್ನ ಹೊಳೆಹೊನ್ನೂರು ಪೊಲೀಸ್ ಠಾಣೆಯವರು ಬಂಧಿಸಿ ಡಿವೈಎಸ್ಪಿ ಕಚೇರಿಗೆ ಕರೆತರಲಾಗಿತ್ತು. 


ಅದೇ ವೇಳೆಯಲ್ಲಿ ಮೃತಳ ದೊಡ್ಡಪ್ಪ ಕಚೇರಿ ಮುಂದೆಯೇ ರೌದ್ರಾವತಾರ ತಾಳಿ ಪೊಲೀಸರು ಉಳಿದವರನ್ನ ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು. ಚಿನ್ನದಂತಹ ಹುಡುಗಿಯನ್ನ ಹದ್ದಿನ ಕೈಗೆ ಕೊಟ್ಟಂತಾಗಿದೆ ಎಂದು ದೂರಿದ್ದಾರೆ. 

ದೊಂಬರ ಬೈರನಹಳ್ಳಿ(ಡಿ.ಬಿ.ಹಳ್ಳಿ) ಲತಾ (24) ಕೆಪಿಸಿಎಲ್ ನಲ್ಲಿ ಎಇಇ ಗುರುರಾಜ್ ಎಂಬುವರನ್ನ  ಜೊತೆ  ಏಪ್ರಿಲ್ 14 ರಂದು ಮದುವೆಯಾಗಿದ್ದರು.  ಲತಾ‌ನ.24 ರಂದು ಡೆತ್ ನೋಟ್ ಬರೆದು ಭದ್ರ ಚಾನೆಲ್ ಗೆ ಹಾರಿದ್ದು, ನ.26 ರಂದು ಶವವಾಗಿ ಪತ್ತೆಯಾಗಿದ್ದಳು.  ವರದಕ್ಷಿಣೆ ಹಿನ್ನಲೆಯಲ್ಲಿ ಕೊಲೆಯಾಗಿದೆ ಎಂದು ಆರೋಪಿಸಿ ಮೃತರ ಕುಟುಂಬ ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದರು.   ಇಂದು ಲತಾಳ ಕುಟುಂಬ ಭದ್ರಾವತಿ ಡಿವೈಎಸ್ಪಿ ಕಚೇರಿಗೆ ತಲುಪಿ ಆರೋಪಿತರನ್ನ ಕೂಡಲೇ ಬಂಧಿಸುವಂತೆ ಒತ್ತಾಯಿಸಿದೆ. 

The deceased's family came holding a photo of the accused.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close