ಕಾರಾಗೃಹದಲ್ಲಿ ಜೈಲು ಸಿಬ್ಬಂದಿಗಳಿಂದಲೇ ತಪಾಸಣೆ, ನಿಷೇಧಿತ ವಸ್ತುಗಳು ಪತ್ತೆ-Prison staff conducts inspection in prison, finds banned items

 SUDDILIVE || SHIVAMOGGA

ಕಾರಾಗೃಹದಲ್ಲಿ ಜೈಲು ಸಿಬ್ಬಂದಿಗಳಿಂದಲೇ ತಪಾಸಣೆ, ನಿಷೇಧಿತ ವಸ್ತುಗಳು ಪತ್ತೆ-Prison staff conducts inspection in prison, finds banned items

Prision, staff

ಶಿವಮೊಗ್ಗದ ಕಾರಾಗೃಹದಲ್ಲಿರುವ ಸಿಬ್ಬಂದಿಗಳೇ ಇಂದು ತಪಾಸಣೆ ನಡೆಸಿ ಹಲವು ನಿಷೇಧಿತ ವಸ್ತುಗಳನ್ನ  ಪತ್ತೆಹಚ್ಚಿದ್ದಾರೆ. ನಿಷೇಧಿತ ವಸ್ತುಗಳ ಪತ್ತೆ ಹಿನ್ನಲೆಯಲ್ಲಿ ತುಂಗ ನಗರದಲ್ಲಿ ದೂರು ದಾಖಲಿಸಿದ್ದಾರೆ. 

ರಾಜ್ಯದ ಪ್ರಮುಖ ಜೈಲುಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಡಿಜಿಪಿ ಅಲೋಕ್​ ಕುಮಾರ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೆ ಪರಪ್ಪನ ಅಗ್ರಹಾರ ಜೈಲಿಗೆ ಅಚ್ಚರಿಯ ವಿಸಿಟ್ ನೀಡಿ ಅಲ್ಲಿಯ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಷ್ಟೆ ಅಲ್ಲದೆ, ಪ್ರಮುಖ ಸೂಚನೆಗಳನ್ನ ನೀಡಿದ್ದರು. ಈ ನಡುವೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ, ಕಾರಾಗೃಹ ಸಿಬ್ಬಂದಿಗಳೇ ದಿಢೀರ್ ಕಾರ್ಯಾಚರಣೆ ನಡೆಸಿ, ಜೈಲಿನೊಳಗೆ ನಿಷೇಧಿತ ವಸ್ತುಗಳನ್ನು ಪತ್ತೆ ಮಾಡಿದ್ಧಾರೆ.ಗಾಂಜಾ ಸೇರಿದಂತೆ ವಿವಿಧ ನಿಷೇಧಿತ ವಸ್ತುಗಳು ಜೈಲಿನೊಳಗೆ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಸಿಬ್ಬಂದಿ ಕಳೆದ ಕೆಲವು ತಿಂಗಳಿನಲ್ಲಿ ಈ ಸಂಬಂಧ ಮುನ್ನೆಚ್ಚರಿಕಾ ಕ್ರಮಗಳಲ್ಲಿಯೇ ಹಲವು ಕೇಸ್​ಗಳು ದಾಖಲಾಗುವಂತೆ ಕ್ರಮ ಕೈಗೊಂಡಿದ್ದರು.

ಶಿವಮೊಗ್ಗ ಕಾರಾಗೃಹದಲ್ಲಿ ಅಲ್ಲದೆ ತಮ್ಮದೇ ಸಿಬ್ಬಂದಿಯ ಕಳ್ಳಾಟವನ್ನು ಬಯಲಿಗೆಳೆದಿದ್ದ ಕಾರಾಗೃಹ ಇಲಾಖೆ ಅಧಿಕಾರಿಗಳು ಬಾಳೆಗೊನೆಯಲ್ಲಿ ಗಾಂಜಾ ಸಾಗಾಟಕ್ಕೂ ಬ್ರೇಕ್​ ಹಾಕಿದ್ದರು. ಈ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ಕಾರಾಗೃಹ ಇಲಾಖೆ ಸಿಬ್ಬಂಧಿ ಮುಖ್ಯ ಅಧೀಕ್ಷಕ ಡಾ.ಪಿ ರಂಗನಾಥ್​ರವರ ನೇತೃತ್ವದಲ್ಲಿ ತಪಾಸಣೆಯನ್ನ ನಡೆಸಿದ್ದಾರೆ.

ಸಾಮಾನ್ಯವಾಗಿ ಜೈಲುಗಳ ಮೇಲೆ ಆಯಾ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳು ಸರ್ಚ್ ಆಪರೇಷನ್​ ನಡೆಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕಾರಾಗೃಹ ಸಿಬ್ಬಂದಿಯೇ ದಿಢೀರ್​ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಶಿವಮೊಗ್ಗದ ಮುಖ್ಯ ಅಧೀಕ್ಷಕರ ನೇತೃತ್ವದಲ್ಲಿ ಕಾರಾಗೃಹದ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರಾಗೃಹದ ಕಾವೇರಿ ವಿಭಾಗದಲ್ಲಿ ಅನಿರೀಕ್ಷಿತ ತಪಾಸಣೆಯನ್ನು ಕೈಗೊಂಡಿದ್ದರು. ಈ ವೇಳೆ ಪೊಲೀಸರಿಗೆ  03 ಮೊಬೈಲ್ ಗಳು, 04 ಸಿಮ್ ಕಾರ್ಡ್​ಗಳು, 03 ಡೆಟಾ ಕೇಬಲ್ ಗಳು, 02 ಇಯರ್ ಫೋನ್, 01 ಚಾರ್ಜರ್ ಸಿಕ್ಕಿದೆ. 

Prison staff conducts inspection in prison, finds banned items

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close