ಡಿಕೆಶಿ ಸಿಎಂ ಆಗಲಿ ಎಂದು ಆಶಿಸಿ ಶಕ್ತಿ ದೇವತೆಗೆ ವಿಶೇಷ ಪೂಜೆ ಮತ್ತು ಭಿಕ್ಷುಕರಿಗೆ ಹೊದಿಕೆಯ ಕಾಣಿಕೆ-Special worship to the deity and offering of blankets to beggars, hoping that DKshi will become CM

SUDDILIVE || SHIVAMOGGA

ಡಿಕೆಶಿ ಸಿಎಂ ಆಗಲಿ ಎಂದು ಆಶಿಸಿ ಶಕ್ತಿ ದೇವತೆಗೆ ವಿಶೇಷ ಪೂಜೆ ಮತ್ತು ಭಿಕ್ಷುಕರಿಗೆ ಹೊದಿಕೆಯ ಕಾಣಿಕೆ-Special worship to the deity and offering of blankets to beggars, hoping that DKshi will become CM

Diety, worship


ಎಳ್ಳಮಾವಾಸ್ಯೆ ಪ್ರಯುಕ್ತ. ಶೀಘ್ರದಲ್ಲೇ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜಿ ಅವರು ಮುಖ್ಯಮಂತ್ರಿ ಆಗಲು ಇರುವ ಅಡತಡೆಗಳನ್ನು ಹಾಗೂ ಅವರು ಮುಖ್ಯಮಂತ್ರಿ ಆಗಲು ಅಡ್ಡಿಪಡಿಸುತ್ತಿರುವ ಶಾಸಕರುಗಳು ಮತ್ತು ಕಾಂಗ್ರೆಸ್ ಮುಖಂಡರಿಗೆ ದೇವರು ಸದ್ಬುದ್ದಿ ಕೊಡಲಿ ಎಂದು ಆಶಿಸಿ ಇಂದು ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ ದೇವರಿಗೆ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪರವರಿಂದ ವಿಶೇಷ ಪೂಜೆ ನಡೆಸಲಾಗಿದೆ. 

ಕೊಟ್ಟ ಮಾತಿನಂತೆ ಅಧಿಕಾರ ಅಸ್ತಾಂತರಿಸಿ ಯಾವುದೇ ಆತಂಕವಿಲ್ಲದೆ ಶೀಘ್ರದಲ್ಲೇ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾಗಿ ಜನರ ಉತ್ತಮ ಸೇವೆ ಮಾಡಲೆಂದು  ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪನವರ ದೇವರಲ್ಲಿ ಪ್ರಾರ್ಥಿಸಿದ್ದಾರೆ.    

Diety, worship

ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಶಿವಮೊಗ್ಗ ನಗರದಲ್ಲಿ ಅತಿ ಚಳಿ ಇರುವ ಪ್ರಯುಕ್ತ ದೇವಸ್ಥಾನದ ಮುಂದೆ ಭಿಕ್ಷೆ ಬೇಡುವ ವಯೋವೃದ್ಧರಿಗೆ. ಹಾಗೂ ದೇವರನ್ನು ಹೊತ್ತ ಜೋಗಿತಿಯರಿಗೆ ಇಂದು ಚಾದರ ಹಾಕಿ ಕಾಣಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ನ ಹಿಂದುಳಿದ ವರಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಎಂ ಹರ್ಷ. ಜಿಲ್ಲಾ ಕಾರ್ಮಿಕ ವಿಭಾಗಗಳ ಕಾರ್ಯ ಅಧ್ಯಕ್ಷರಾದ ಕುಮಾರ್ ಜಿಲ್ಲಾ ಕಾಂಗ್ರೆಸ್ ಮುಖಂಡರದ ಸ್ಟೆಲಾ. ಕವಿತಾ ರಾಘವೇಂದ್ರ  ಮಾರ್ಟಿನ್ ಮಾಲತೇಶ್ ಧ್ರುವ ಕುಮಾರ್ ನವಿಲೇ ಸಂತೋಷ್. ಕಾಂಗ್ರೆಸ್ ಮುಖಂಡರಾದ ಪ್ರಭು ಮುಂತಾದವರು ಹಾಜರಿದ್ದರು.

Special worship to the deity and offering of blankets to beggars, hoping that DKshi will become CM

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close