ಕಾನೂನು ಬಾಹಿರವಾಗಿ ನಿರ್ಮಿಸುತ್ತಿರುವ ಸಂತೋಷ್ ಗುರೂಜಿಯವರ ಕಟ್ಟಡ ಸ್ಥಗಿತಗೊಳಿಸುವಂತೆ ಪಾಲಿಕೆ ಆಯುಕ್ತರಿಗೆ ಮನವಿ-Request to the Municipal Commissioner to stop the illegal construction of Santosh Guruji's building

SUDDILIVE || SHIVAMOGGA

ಕಾನೂನು ಬಾಹಿರವಾಗಿ ನಿರ್ಮಿಸುತ್ತಿರುವ ಸಂತೋಷ್ ಗುರೂಜಿಯವರ ಕಟ್ಟಡ ಸ್ಥಗಿತಗೊಳಿಸುವಂತೆ ಪಾಲಿಕೆ ಆಯುಕ್ತರಿಗೆ ಮನವಿ-Request to the Municipal Commissioner to stop the illegal construction of Santosh Guruji's building   

Santhosh, Guruji

Santhosh, Guruji

ಕಾನೂನು ಉಲ್ಲಂಘಿಸಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿರುವ ಸಂತೋಷ್ ಗುರೂಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಸದಸ್ಯ ಅರ್ಚನಾ ನಿರಂಜನ್ ಅವರಿಂದ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಗೆ ಮನವಿ ಸಲ್ಲಿಸಲಾಯಿತು.

ಮೇಲ್ಗಟ್ಟಂ ಮುಖ್ಯರಸ್ತೆ ಅಣ್ಣನವರ ನಾಲ್ಕನೇ ತಿರುಗು ಬಲಭಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿರುವ ಸಂತೋಷ್ ಗುರೂಜಿಯವರು ವಾಣಿಜ್ಯ ಕಟ್ಟಡವು ನೀಲಿ ನಕ್ಷೆಯಲ್ಲಿ ತೋರಿಸಿರುವಂತೆ ನಿರ್ಮಿಸುತ್ತಿಲ್ಲ ಎಂದು ತಿಳಿಯ ಅಕ್ಕಪಕ್ಕದವರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ.

ಪಾರ್ಕಿಂಗ್ ವ್ಯವಸ್ಥೆಗೆ ಜಾಗ ಬಿಟ್ಟಿಲ್ಲ ಸಾರ್ವಜನಿಕರ ಅನುಕೂಲಕ್ಕಾಗಿ ರಾಜ ಕಾಲುವೆ ಇಂದು ಅದನ್ನು ಸಹ ಕಾಮಗಾರಿ ವೇಳೆಯಲ್ಲಿ ಒಡೆದು ಹಾಕಿರುವುದಾಗಿ ಸ್ಥಳೀಯರು ದೂರಿದ್ದಾರೆ ಮಿಳ್ಳಘಟ್ಟ ಮುಖ್ಯರಸ್ತೆಯ ಅಗಲೀಕರಣ ಆಗುತ್ತಿದೆ ಇಲ್ಲಿಯೂ ಸಹ ರಸ್ತೆ ಅಗಲೀಕರಣಕ್ಕೂ ಜಾಗ ಬಿಡದೆ ಕಟ್ಟಡ ಕಾಮಗಾರಿ ನಡೆಸಲಾಗುತ್ತಿದೆ.

ರಾಜ ಕಾಲುವೆ ಒಡೆದ ಪರಿಣಾಮ ಕಸ ಕಡ್ಡಿ ಗಲೀಜುಗಳು ತುಂಬಿ ಹೋಗಿದ್ದು ಇದರಿಂದ ಸಾಂಕ್ರಾಮಿಕ ಕಾಯಿಲೆಗೆ ಅಹ್ವಾನವಾಗಿದೆ ರಸ್ತೆಯಲ್ಲಿ ಮರಳು ಜಲ್ಲಿ ಕಲ್ಲು ಹಾಗೂ ಸಿಮೆಂಟ್ ಬ್ರಿಕ್ಸ್ ಅನ್ನು ಎಲ್ಲಿಂದರಲ್ಲಿ ಹಾಕಲಾಗಿದೆ ಇದರಿಂದ ವಾಹನ ಸಾವರ್ರಿಗು ಸ್ಥಳೀಯರಿಗೂ ಓಡಾಡಲು ಅನಾನುಕೂಲವಾಗಿದೆ ಎಂಬ ದೂರು ಸ್ಥಳೀಯರಿಂದ ಕೇಳಿ ಬಂದಿದೆ ಎಂದು ಮನವಿಯಲ್ಲಿ ಅರ್ಚನ ನಿರಂಜನ್ ದೂರಿದ್ದಾರೆ.

Santhosh, Guruji

ಈ ಕುರಿತು ಮಹಾನಗರ ಪಾಲಿಕೆ ಯಾವುದೇ ಕ್ರಮ ಜರಗಿಸಿರುವುದಿಲ್ಲ ಈ ಸಂಬಂಧ ಮುಖ್ಯ ಇಂಜಿನಿಯರ್ ಜಿತೇಂದ್ರ ಅವರ ಬಳಿ ಮಾಹಿತಿ ಕೇಳಿದಾಗ ಸಂತೋಷ್ ಗುರೂಜಿ ಅವರಿಗೆ ಸರಿಪಡಿಸಿಕೊಳ್ಳಲು ತಿಳಿಸಲಾಗಿದೆ ಎಂದು ಮಾಹಿತಿ ನೀಡಿರುವುದಾಗಿ ಆರೋಪಿಸಿರುವ ಅವರು ಜನಸಾಮಾನ್ಯರು ಕೂಡ ಇದೇ ರೀತಿ ಕಾನೂನು ಉಲ್ಲಂಘಿಸಿ, ಕಟ್ಟಡ ನಿರ್ಮಿಸಿದರೆ ಮುಖ್ಯ ಇಂಜಿನಿಯರ್ ಅವರು ಸರಿಪಡಿಸಿಕೊಳ್ಳಲು ತಿಳಿ ಹೇಳುತ್ತಾರಾ ಎಂಬುದು ನಮ್ಮ ಪ್ರಶ್ನೆಯಾಗಿದೆ ಎಂದು ಆಗ್ರಹಿಸಿದ್ದಾರೆ

ಕಾನೂನು ಬಾಹಿರವಾಗಿ ನಿರ್ಮಿಸಲಾಗುತ್ತಿರುವ ಸಂತೋಷ ಗುರುಜಿಯವರ ಕಟ್ಟಡವನ್ನು ತಕ್ಷಣವೇ ಸ್ಥಗಿತಗೊಳಿಸಿ ಮುಂದಿನ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

Request to the Municipal Commissioner to stop the illegal construction of Santosh Guruji's building

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close