ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ವಜ್ರ ಮಹೋತ್ಸವ ಡಿಸೆಂಬರ್ 20 ಮತ್ತು 21 ರಂದು- Sacred Heart High School's Diamond Jubilee Celebration on December 20th and 21st

SUDDILIVE || SHIVAMOGGA

ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ವಜ್ರ ಮಹೋತ್ಸವ ಡಿಸೆಂಬರ್ 20 ಮತ್ತು 21 ರಂದು-Sacred Heart High School's Diamond Jubilee Celebration on December 20th and 21st

Diamond, jublee

ನಗರದ ಪ್ರತಿಷ್ಠಿತ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯು ತನ್ನ 60ನೇ ವರ್ಷದ ವಜ್ರ ಮಹೋತ್ಸವವನ್ನು ಡಿಸೆಂಬರ್ 20 ಮತ್ತು 21 ರಂದು ಶಾಲಾ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದೆ ಎಂದು ಮಾಜಿ ವಿದ್ಯಾರ್ಥಿ ಹಾಗೂ ಸಚಿವರಾದ ಕುಮಾರ್ ಬಂಗಾರಪ್ಪ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಇದು “ನನ್ನದು ಎಂದು ಹೇಳಿಕೊಳ್ಳುವ ಸ್ವಾರ್ಥದ ಒಂದು ಹಕ್ಕಿದೆ ಎಂದರೆ ಅದು  ಶಾಲೆ ಮಾತ್ರ. 1965 ರಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ಆರಂಭವಾದ ಈ ವಿದ್ಯಾಸಂಸ್ಥೆಯು ಕಾಲಕ್ರಮೇಣ ಅಭಿವೃದ್ಧಿ ಹೊಂದಿದ್ದು, ಇಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಇಂದು ಸಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಶೈಕ್ಷಣಿಕವಾಗಿ ನಮ್ಮ ಶಾಲೆ  ಎಲ್ಲವನ್ನೂ ನೀಡಿದ್ದು, ಅಂತಹ ಶಾಲೆಯಲ್ಲಿ ಓದಿದ್ದು ನಮಗೆ ಹೆಮ್ಮೆಯ ವಿಷಯ ಎಂದು ಅವರು ತಮ್ಮ ಶಾಲಾ ನೆನಪುಗಳನ್ನು ಮೆಲಕು ಹಾಕಿದರು.

ವಜ್ರ ಮಹೋತ್ಸವದ ಕಾರ್ಯಕ್ರಮಗಳ ವಿವರ:

ಈ ವೇಳೆ ಸಚಿವ ಕುಮಾರ್ ಬಂಗಾರಪ್ಪ ಅವರು ಕಾರ್ಯಕ್ರಮಗಳ ವಿವರ ನೀಡಿದ್ದು, ಎರಡು ದಿನಗಳ ಕಾಲ ಮಹೋತ್ಸವವು ನಡೆಯಲಿದೆ. ಡಿಸೆಬರ್ 20, 2025  ರಂದು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಬೆಳಗ್ಗೆ ಹಳೆಯ ವಿದ್ಯಾರ್ಥಿಗಳಿಗಾಗಿ ಶಾಲಾ ಆವರಣದಲ್ಲಿ ಕ್ರೀಡಾಕೂಟ. ಹಾಗೆಯೇ ಸಂಜೆ  ಮನೋರಂಜನಾ ಕಾರ್ಯಕ್ರಮ ಹಾಗೂ ಔತಣಕೂಟವನ್ನು ಏರ್ಪಡಿಸಲಾಗಿದೆ. ಇನ್ನೂ ಡಿಸೆಂಬರ್ 21 ರಂದು ಸಂಜೆ: ಶಾಲಾ ಆವರಣದಲ್ಲಿ ಅದ್ದೂರಿಯಾದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಜ್ರ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದರು

ಶಿಕ್ಷಕರ ಕೊಡುಗೆ ಅನನ್ಯ: ಧನಂಜಯ ಸರ್ಜಿ

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಎಲ್ಲ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಪೊಲೀಸ್ ಇಲ್ಲದಿದ್ದರೆ ಭದ್ರತೆ ಇಲ್ಲ, ವಕೀಲರಿಲ್ಲದಿದ್ದರೆ ನ್ಯಾಯವಿಲ್ಲ. ಆದರೆ ಇವರೆಲ್ಲ ಆಗಲು ಮೂಲ ಕಾರಣ ಶಾಲೆ ಹಾಗೂ ಶಿಕ್ಷಕರುಎಂದು ಶಾಲೆಯ ಕೊಡುಗೆಯನ್ನು ಸ್ಮರಿಸಿದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಡಿಸೆಂಬರ್ 20 ರಂದು ಫುಟ್ಬಾಲ್ ಹಾಗೂ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಹಾಗೆಯೇ, ಈಗಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

Sacred Heart High School's Diamond Jubilee Celebration on December 20th and 21st

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close