ಸಹೋದರಿಯ ಪತಿಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ಶಿಕ್ಷೆ ಪ್ರಕಟ- Sister's husband attacked over trivial reason, punishment announced

SUDDILIVE || SHIVAMOGGA

ಸಹೋದರಿಯ ಪತಿಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ಶಿಕ್ಷೆ ಪ್ರಕಟ-Sister's husband attacked over trivial reason, punishment announced

Sister, attack

ಸಹೋದರಿಯ ಪತಿಗೆ ಮಾರಣಾಂತಿಕ ಹಲ್ಲೆ ನಡೆಸಿದವನಿಗೆ ್ನ ನ್ಯಾಯಾಲಯ 7 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 35,000/- ರೂ. ದಂಡ ವಿಧಿಸಿ ತೀರ್ಫು ನೀಡಿದೆ. 

ದಿನಾಂಕ: 11-12-2020 ರಂದು  ಶ್ರೀಮತಿ ಸುಮಾರಿಗೆ (29) ಕಲ್ಲಗಂಗೂರು ಗ್ರಾಮದ ದೊಡ್ಡಪ್ಪನ ಮಗನಾದ ದೊಡ್ಡೇಶಪ್ಪ (48) ಯಾವಾಗಲೂ ಅವರಿಗೆ  ಹಾಗೂ ಅವರ ಗಂಡನಿಗೆ ಅವಾಚ್ಯ ಶಬ್ಧಗಳಿಂದ ಬೈಯುವುದು ಮತ್ತು ಹಗೆತನ ಸಾಧಿಸುತ್ತಿದ್ದನು. ಈ ವಿಷಯವಾಗಿ ಆರೋಪಿತನಿಗೂ ಹಾಗೂ  ಸುಮರ ಪತಿಗೆ ಜಗಳವಾಗುತ್ತಿತ್ತು. 

ಸುಮರ ಪತಿ ರಾಮಚಂದ್ರಪ್ಪ ಕೆ ಅವರನ್ನ (56)   ಸಾಯಿಸುವ ಉದ್ದೇಶದಿಂದ ಕಬ್ಬಿಣದ ಕಂದಲಿಯಿಂದ ತಲೆಯ ಎಡಭಾಗಕ್ಕೆ  ಬಲವಾಗಿ ಹೊಡೆದು ರಕ್ತಗಾಯಪಡಿಸಿದ್ದ.  ಪ್ರಕರಣವು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. 

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಗ್ರಾಮಾಂತರ ಠಾಣೆಯ ಪಿಐ ಸಂಜೀವ್‌ ಕುಮಾರ್‌ ಟಿ, ಹಾಲಿ ಡಿ.ವೈ.ಎಸ್.ಪಿ ಶಿವಮೊಗ್ಗ ಬಿ ಉಪ ವಿಭಾಗ ರವರು ಆರೋಪಿ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. 

ಪ್ರಕರಣದಲ್ಲಿ ಸರ್ಕಾರದ ಪರವಾಗಿ  ಶಾಂತರಾಜ್‌ ಜೆ, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ಘನ 3ನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿ ದೊಡ್ಡೇಶಪ್ಪ, 48 ವರ್ಷ, ವಾಸ ಕಲ್ಲಗಂಗೂರು, ಶಿವಮೊಗ್ಗ ಈತನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರಾದ ಶ್ರೀ ಯಶವಂತ ಕುಮಾರ್ ರವರು ಆರೋಪಿಗೆ 7 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 35,000/- ರೂ. ದಂಡ ವಿಧಿಸಿ ಆದೇಶಿಸಿರುತ್ತಾರೆ.

Sister's husband attacked over trivial reason, punishment announced

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close