ನಾಯಿ ಹಿಡಿದು ಸಾಯಿಸುವ ದೃಶ್ಯ ವೈರಲ್-ಬಿತ್ತು ಕೇಸ್-Video of dog being killed goes viral, case emerges

 SUDDILIVE || SHIVAMOGGA

ನಾಯಿ ಹಿಡಿದು ಸಾಯಿಸುವ ದೃಶ್ಯ ವೈರಲ್-ಬಿತ್ತು ಕೇಸ್-Video of dog being killed goes viral, case emerges   

Dog, killing


ಶಿವಮೊಗ್ಗದಲ್ಲಿ ನಾಯಿಯೊಂದನ್ನ ಹಿಡಿದು ಹೊಡೆದು ಸಾಯಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ. 

ಬೀದಿ ನಾಯಿಯನ್ನು ಬಲೆ ಹಾಕಿ ಹಿಡಿದು ಕ್ರೂರವಾಗಿ ಹೊಡೆಯುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು,  ಈ ಬಗ್ಗೆ ಪ್ರಾಣಿ ರಕ್ಷಣಾ ಸೇವಾ ತಂಡದ ಸದಸ್ಯರಾದ ಹಾಗೂ ಗೋಪಾಳದ ನಿವಾಸಿ  ಸೂರಜ್ ಎಸ್ ದಿನಾಂಕ:01/12/2025 ರಂದು ರಾತ್ರಿ ತುಂಗಾನಗರ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರು ನೀಡಿದ್ದರು.  

ನ.11 ರಂದು ಶಿವಮೊಗ್ಗ ವೃದ್ದಾಶ್ರಮ ಎದುರು ಗೋಪಾಳ ಪೊಲೀಸ್ ಲೇ ಔಟ್ ನಲ್ಲಿ ಬೆಳಗ್ಗೆ 08:16 ಗಂಟೆಗೆ, ಖಾಸಗಿ ಹಂದಿ ಹಿಡಿಯುವವರ ಗುಂಪೊಂದು ಸಮುದಾಯದ ಬೀದಿ ನಾಯಿಯನ್ನು ಬಲೆಯಲ್ಲಿ ಹಿಡಿದು ಹೊಡೆದು ಸಾಯಿಸಿರುತ್ತಾರೆ. 


ನಾಯಿ ಹಿಡಿದ ದೃಶ್ಯ ಸಿ.ಸಿ. ಟಿ.ವಿ. ಕ್ಯಾಮೆರಾ ಪರಿಶೀಲಿಸಿದಾಗ ಬೀದಿ ನಾಯಿಯನ್ನು ಸೆರೆಹಿಡಿದು ಕ್ರೂರವಾಗಿ ಕೊಲ್ಲುವ ದೃಶ್ಯ ಕಂಡು ಬಂದಿರುತ್ತದೆ, ಈ ಕೃತ್ಯವೆಸಗಿದವರ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ  Prevention of cruelty to Animal (PCA) Act 1960 &  ಕಲಂ 325  ಬಿ ಎನ್ ಎಸ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

Video of dog being killed goes viral, case emerges

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close