ರೈಲಿಗೆ ಸಿಲುಕಿ ಆಯುರ್ವೇದಿಕ್ ಕಾಲೇಜಿನ ಸಿಬ್ಬಂದಿ ಆತ್ಮಹತ್ಯೆ? Did a Meggan crew member commit suicide after being hit by a train?

 SUDDILIVE || SHIVAMOGGA

ರೈಲಿಗೆ ಸಿಲುಕಿ ಆಯುರ್ವೇದಿಕ್ ಸಿಬ್ಬಂದಿ ಆತ್ಮಹತ್ಯೆ? Did a Meggan crew member commit suicide after being hit by a train?   

Meggan, crew


ಶಿವಮೊಗ್ಗದ ಪಶುವೈದ್ಯಕೀಯ ಮಹಾ ವಿದ್ಯಾಲಯದ ಬಳಿ ಹಾದು ಹೋಗುವ ರೈಲ್ವೆ ಟ್ರಾಕ್ ನಲ್ಲಿ ವ್ಯಕ್ತಿಯೋರ್ವನ ಶವವೊಂದು ಪತ್ತೆಯಾಗಿದೆ. ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. 

ಪಶುವೈದ್ಯಕೀಯ ಮಹಾವಿದ್ಯಾಲಯದ ಬಳಿ ಇರುವ ರೈಲ್ವೆ ಟ್ರಾಕ್ ಬಳಿ ಪತ್ತೆಯಾದ ಶವವನ್ನ ಆಯುರ್ವೇದಿಕ್ ಕಾಲೇಜಿನ ಸಿಬ್ಬಂದಿ ಈಶ್ವರ್ ಎಂದು ಗುರುತಿಸಲಾಗಿದೆ. ಮೆಗ್ಗಾನ್ ನಲ್ಲಿ ಕೆಲಸ ಮಾಡುತ್ತಿದ್ದ ಈಶ್ವರ್ ಇತ್ತೀಚೆಗಷ್ಟೆ ಮದುವೆಯಾಗಿದ್ದರು. 


ಈತನ ಸಾವಿಗೆ ಕಾರಣಗೊತ್ತಿಲ್ಲ. ಆದರೆ ಇದೊಂದು ಆತ್ಮಹತ್ಯೆಯಿರಬಹುದು ಎಂದು ಶಂಕಿಸಲಾಗಿದೆ. ರೈಲ್ವೆಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರೈಲಿಗೆ ತಲೆಯೊಡ್ಡಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. 

ಬೇಲಿಗೆ ಸ್ಥಳೀಯರ ಬೇಡಿಕೆ

ಇತ್ತೀಚೆಗೆ ಜೆಹೆಚ್ ಪಟೇಲ್ ಬಡಾವಣೆಯಲ್ಲಿರುವ ರವಿಶಂಇರ್ ಗುರೂಜಿ ವಿದ್ಯಾಲಯದ ಹಿಂಭಾಗ ಹಸುಗಳು ರೈಲಿಗೆ ಸಿಲುಕಿ ಸಾವನ್ನಪ್ಪುತ್ತಿದ್ದವು. ಈ ಸಂಬಂಧ ಟ್ರ್ಯಾಕ್ ಗೆ ಬೇಲಿಹಾಕಿ ಹಸುಗಳು ನುಗ್ಗದ ಹಾಗೆ ಮಾಡಲಾಗಿತ್ತು. ಈಗ ಪಶವೈದ್ಯಕೀಯ ಮಹಾವಿದ್ಯಾಲಯದ ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಹೆಚ್ಚಾಗುವ ಜೊತೆಗೆ ಟ್ರ್ಯಾಕ್ ಮೇಲೆ ಕುಳಿತು ಮದ್ಯ ಸೇವಿಸುವುದು ಮತ್ತು ಗಾಂಜಾ ಹೊಡೆಯುವ ಬಗ್ಗೆ ಸ್ಥಳೀಯರ ಆರೋಪವಿದ್ದು ಇಲ್ಲೂ ಟ್ರ್ಯಾಕ್ ಸುತ್ತ ತಂತಿ ಬೇಲಿಗೆ ಬೇಡಿಕೆಯಿಟ್ಟಿದ್ದಾರೆ. 

Did a Meggan crew member commit suicide after being hit by a train?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close