ಭದ್ರಾವತಿಯ ದಂಪತಿ ಸಾವು ಪ್ರಕರಣ, ವೈದ್ಯ ಡಾ.ಮಲ್ಲೇಶ್ ಬಂಧನ- Bhadravati couple's death case, doctor Dr. Mallesh arrested

 SUDDILIVE || BHADRAVATHI

ಭದ್ರಾವತಿಯ ದಂಪತಿ ಸಾವು ಪ್ರಕರಣ, ವೈದ್ಯ ಡಾ.ಮಲ್ಲೇಶ್ ಬಂಧನ- Bhadravati couple's death case, doctor Dr. Mallesh arrested  

Bhadravathi, doctor

ಭದ್ರಾವತಿಯಲ್ಲಿ ವೃದ್ದ ದಂಪತಿಗಳ ಅನುಮಾನಸ್ಪದ ಕೊಲೆ ವಿಚಾರದಲ್ಲಿ ವೈದ್ಯ ಆರೋಪಿಯೋಬ್ಬರನ್ನ ಬಂಧಿಸಲಾಗಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಎಸ್ಪಿ ನಿಖಿಲ್ ಬಿ ಡಾ ಮಲ್ಲೇಶ್ ಎಂಬುವರನ್ನ ಬಂಧಿಸಲಾಗಿದೆ

ಬೆಂಗಳೂರಿನಲ್ಲಿ ಪತಿಪತ್ನಿ ಹತ್ಯೆಯ ಪ್ರಕರಣದಂತೆ ವೃದ್ದರಾದ ಜಯಮ್ಮ(75) ಮತ್ತು ಚಂದ್ರಣ್ಣನವರ(78) ಹತ್ಯೆ ನಡೆದಿದೆ. ನಿನ್ನೆ ಭದ್ರಾವತಿ ಬೂತನ ಗುಡಿಯಲ್ಲಿ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಮಲ್ಲೇಶರನ್ನ ವಶಕ್ಕೆ ಪಡೆಯಲಾಗಿದೆ ಇವರು ಮೃತ ಚಂದ್ರಪ್ಪನವರ ತಮ್ಮನ ಮಗನಾಗಿದ್ದಾಗಿದ್ದಾನೆ. ಆಯುರ್ವೇದಿಕ್ ವೈದ್ಯನಾಗಿದ್ದಾನೆ ಎಂದು ತಿಳಿಸಿದರು. 


ಸಾಲ ಮಾಡಿಕೊಂಡ ಮಲ್ಲೇಶ್ ದೊಡ್ಡಪ್ಪ ಚಂದ್ರಪ್ಪನವರ ಬಳಿ 15 ಲಕ್ಷ ರೂ. ಕೇಳಿದ್ದನು ನಿರಾಕರಿಸಿದ ಚಂದ್ರ್ಪನವರ ಮೇಲೆ ಸೇಡಿಗೆ ಬಿದ್ದಿದ್ದ. ನಿನ್ನೆ ಚಂದ್ರಪ್ಪನವರ ಆರೋಗ್ಯ ವಿಚಾರದಲ್ಲಿ ವೆರಿಕೋಸ್ ಗೆ ಚಿಕಿತ್ಸೆಕೊಡುವುದಾಗಿ ಅನಸ್ತೇಷಿಯಾ ಕೊಡುವುದಾಗಿ ಹೆಚ್ಚಿನ ಡೌಸೇಜ್ ಕೊಟ್ಟಿದ್ದಾನೆ. 

ಸಡನ್ ಆಗಿ ಬಿಪಿ ಡ್ರಾಪ್ ಆಗಿದೆ. ಇಬ್ವರನ್ನ ಬೇರೆ ಬೇರೆ ಮಲಗಿಸಿ ಚಿನ್ನಾಭರಣವನ್ನ ಅಡವಿಟ್ಟಿದ್ದಾನೆ. 80 ಗ್ರಾಮ್ ಗೋಲ್ಡ್ ಸಧ್ಯಕ್ಕೆ ವಶವಾಗಿದೆ. ಸಾಲ ತೀರಿಸಿ ಅವನ ಅಕೌಂಟ್ ನಲ್ಪಿ 50 ಸಾವಿರ ಉಳಿಸಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಕ್ಲೂ ಇರಲಿಲ್ಲ. ಅಡುಗೆ ಮಾಡಿದ್ದರು ಊಟ ಮಾಡಿರಲಿಲ್ಲ. 24 ಗಂಟೆಯಲ್ಲಿ ಆರೋಪಿಗಳನ್ನ ಬಂಧಿಸಲಾಗಿದೆ ಎಂದರು. 

ಯುಡಿಆರ್ ಆದ ಕೇಸನ್ನ ಮರ್ಡರ್ ಆಗಿಮಾಡಿಕೊಳ್ಳಲಾಗಿದೆ. ವಯಸ್ಸಾದವರನ್ನ ಟಾರಘೆಟ್ ಮಾಡಿ ಕೊಲೆ ಮಾಡಲಾಗಿದೆ. ಆರೋಪಿ 50 ಎಂಜಿ ಅನಸ್ತೇಷಿಯಾ ಕೊಟ್ಟು ಸಾಯಿಸಿದ್ದು ಆತನಿಗೆ ಅನಸ್ತೇಷಿಯಾ ಕೊಟ್ಟಿದ್ದು ಎಲ್ಲಿ ಎಂಬುದು ತನಿಖೆಯಾಗಬೇಕಿದೆ. ಮೃತಪಟ್ಟರಿಗೆ ಮೂವರು ಮಕ್ಕಳಿದ್ದರು ಲಾಸ್ಟ್ ಆಗಿ ಮಲ್ಲೇಶ್ ಮನೆಗೆ ಬಂದಿದ್ದರು. ಮರಣೋತ್ತರ ಪರೀಕ್ಷೆಗೂ ಮುನ್ನ ಪ್ರಕರಣ ದಾಖಲಿಸಲಾಗಿದೆ. ಡಾ.ಮಲ್ಲೇಶ್ ಮೊದಲು ಶಿವಮೊಗ್ಗದ ಎರಡು ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. ವೈದ್ಯರು ಬೇರೆಡೆ ಇದ್ದರು ಅವರನ್ನ ಬಂಧಿಸಲಾಗಿದೆ. ಇವರು ಹೊಳೆಹೊನ್ನೂರು ಬಿಬೀರನಹಳ್ಳಿ ಊರಿನವರು ಎಂದರು. 

ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ್ರಕಾಶ್ ರಾತೋಡ್, ಪಿಐ ನಾಗಮ್ಮ, ಸುನೀಲ್, ಹಾಲಪ್ಪ, ಬಸವರಾಜ್ ಮೊದಲಾದವರು ಭಾಗಿಯಾಗಿದ್ದರು. 

ಅರೆಬಿಳಚಿಯಲ್ಲಿ ಭದೃ ನಾಲೆಯಲ್ಲಿ ನಾಲ್ಲು ಜನ ನೀರು ಪಾಲಾದ  ಪ್ರಕರಣದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ ಎಂದರು. ಪಾರ್ಲರ್ ಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಡೆಯುವ ಬಗ್ಗೆ ಗಮನಕ್ಕೆ ಬಂದಿದೆ. ನಾವು ಮಕ್ಕಳ ಆಯೋಗ ಮತ್ತು ಮಹಿಳಾ ಆಯೋಗದ ಅಧ್ಯಕ್ಷಯರ ಜೊತೆ ಜನರಲ್ ಚೆಕ್ ಅಪ್ ನಡೆಸುತ್ತಿದ್ದೇವೆ ಎಂದರು. 

Bhadravati couple's death case, doctor Dr. Mallesh arrested

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close