ಶಿವಮೊಗ್ಗ ಸಂಸದರು ಜನರ ಹಕ್ಕನ್ನೇ ಕಸಿದುಕೊಳ್ತಿದ್ದಾರೆ ಎಂದ್ರು ಸಚಿವ ಮಧು ಬಂಗಾರಪ್ಪ-Minister Madhu Bangarappa says Shivamogga MP is misleading the people

 SUDDILIVE || SHIVAMOGGA

ಶಿವಮೊಗ್ಗ ಸಂಸದರು ಜನರ ದಿಕ್ಕನ್ನೇ ತಪ್ಪಿಸುತ್ತಿದ್ದಾರೆ ಎಂದ್ರು ಸಚಿವ ಮಧು ಬಂಗಾರಪ್ಪ-Minister Madhu Bangarappa says Shivamogga MP is misleading the people    

Madhu, Bangarappa


ನಾಳೆ ನಡೆಯುವ ವಿಶೇಷ ಅಧಿವೇಶನವು ಸಿಎಂ ಅವರ ಕೊನೆಯ ಅಧಿವೇಶನ ಎಂಬುದನ್ನ ಬಿಜೆಪಿ ಎರಡು ವರೆ ವರ್ಷಗಳಿಂದ ಬಿಂಬಿಸುತ್ತಾ ಬಂದಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಆರೋಪಿಸಿದರು.

ಅವರು ಮಾಧ್ಯಮಗಳ ಜೊತೆ ಮಾತನಾಡಿ, ನಾಳೆಯಿಂದ ವಿಶೇಷ ಅಧಿವೇಶನ ನಡೆಯಲಿದೆ. ಸಿದ್ದರಾಮಯ್ಯನವರು ಸಿಎಂ ಸ್ಥಾನ ಬಿಡಲಿದ್ದಾರೆ ಎಂಬ ಚರ್ಚೆಯನ್ನ ವಿಪಕ್ಷಗಳು ಎರಡುವರೆ ವರ್ಷಗಳಿಂದ ಹೇಳ್ತನೇ ಇವೆ. ನಾಳೆ ನಡೆಯುವ ಅಧಿವೇಶನದಲ್ಲಿ ಮನರೇಗಾವನ್ನ ಉಳಿಸಿಕೊಂಡು  ವಿಬಿಜಿ ರಾಮ್ ಜಿ ವಿರುದ್ಧ ಹೋರಾಟ ನಡೆಸುವ ಬಗ್ಗೆ  ಚರ್ಚಿಸಲಾಗುವುದು ಎಂದರು. 

ಗ್ಯಾರೆಂಟಿಯನ್ನ ಕೊಟ್ಟಾಗ ಇದೇ ವಿಪಕ್ಷಗಳು ಬೊಬ್ಬೆ ಹೊಡೆದವು. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಮನರೇಗಾ ಕೊಟ್ಟರು. ಇಡೀ ದೇಶದಲ್ಲಿ ಸ್ವಾಗತಿಸಲಾಯಿತು. ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವಾಗ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಅದನ್ನ‌ಪೂರೈಸಲಾಗದ ಬಿಜೆಪಿ ಈಗ ಮನಮೋಹನ್ ಸಿಂಗ್ ಅವರು ಕೊಟ್ಟ ಉದ್ಯೋಗವನ್ನೂ ಕಸಿದುಕೊಳ್ಳಲು ಹೊರಟಿದ್ದಾರೆ ಎಂದು ದೂರಿದರು. 

ಉದ್ಯೋಗ ಖಾತ್ರಿ ತೆಗೆದರೆ ಜನರಲ್ಲಿ ವಿಶ್ವಾಸ ಹೋಗಲಿದೆ. ಶಿವಮೊಗ್ಗ ಸಂಸದರು ಸಹ ಮನರೇಗಾ ವಿರುದ್ಧ ಮಾತನಾಡಿದ್ದಾರೆ. ಕೇವಲ ಮಾತನಾಡೋದಲ್ಲ ಜನರ ದಿಕ್ಕನ್ನೇ ತಪ್ಪಿಸುತ್ತಿದ್ದಾರೆ. ಇವರದನ್ನ  ಕೇಳಿಸಿಕೊಂಡು ದಾರಿತಪ್ಪಿಸಲು ಸರ್ಕಾರ ಇರಲ್ಲ. ಇದರ ವಿರುದ್ಧನೂ ಹೋರಾಟ ಮಾಡಲಾಗುವುದು ಎಂದು ಗುಡುಗಿದರು. 

ಅವತ್ತು ಕಾನೂನು ಮಾಡಿರುವುದು ತಲೆಕೆಟ್ಟಿ ಮಾಡಿರೊಲ್ಲ. ಬಿಜೆಪಿಯವರಿಗೆ ಏನೆಂದರೆ ಬಡವರು ಚೆನ್ನಾಗಿರಬಾರದು ಎಂಬ ಆಸೆ ಇದೆ. ಬಡವರು ದುಡಿಯುತ್ತಾರೆ ಎಂದರೆ ಮಹಾತ್ಮ ಗಾಂಧಿ ಹೆಸರು ಹೇಳಿದರೆ ಬಿಜೆಪಿ ಅಸೂಯೆ ಪಡುತ್ತದೆ. ದಿನಾಲು ಗಾಂಧಿಯನ್ನ‌ಹತ್ಯೆ ಮಾಡುತ್ತಿರುವುದು ಬಿಜೆಪಿ ಅವರು ಎಂದು ದೂರಿದರು. 

ಇದನ್ನ ಅಧಿವೇಶನದಲ್ಲಿ ಚರ್ಚೆ ಮಾಡುವ ಬದಲು ಸಿಎಂ ಕೊನೆ ಭಾಷಣ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಬಿಜೆಪಿಯ ಮನೆಯಲ್ಲಿ ಹೊಸಲು ನಾರಯತ್ತಿದೆ. ವಿಜೇಂದ್ರ ಅವರಿಗೆ ಬಿಜೆಪಿಯಲ್ಲಿ ಎಷ್ಟು ಮನೆಗಳಿವೆ ಎಷ್ಟು ಬಾಗಿಲು ಇದೆ ಎಂಬುದು ಗೊತ್ತಿಲ್ಲ. ಚರ್ಚೆ ಮಾಡಲಿ ಈ ಬಗ್ಗೆ ಎಂದು ಸವಾಲು ಹಾಕಿದರು. 

ಅಬಕಾರಿ ಇಲಾಖೆಯಲ್ಲಿ ಭ್ರಷ್ಠಾಚಾರವಿದೆ ಎಂದರೆ ತನಿಖೆಯಾಗಬೇಕು‌. ತನಿಖೆಗೂ ಮೊದಲು ಭ್ರಷ್ಠಾಚಾರ ಎನ್ನುವುದು ಸರಿಯಲ್ಲ. ಪೊಲೋಸ್ ಇಲಾಖೆಯಲ್ಲಿ ರಾಮಚಂದ್ರ ರಾವ್ ವಿರುದ್ಧ ಬಂದ ಆರೋಪವೂ ಸಹ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಇಂದು ಶಿವಮೊಗ್ಗದಲ್ಲಿ ಗ್ಯಾರೆಂಟಿ ಕಾರ್ಯಗಾರ ನಡೆಯುತ್ತಿದೆ. ಗ್ಯಾರೆಂಟಿ ರಾಜ್ಯಧ್ಯಕ್ಷರಾದ ರೇವಣ್ಣನವರು ಶಿವಮೊಗ್ಗಕ್ಕೆ ಬಂದಿದ್ದಾರೆ. ಕಾರಗಯಕ್ರಮದ ಬಗ್ಗೆ ಸರ್ಕಾರಕ್ಕೆ ವರದಿ ನೀಡುತ್ತಾರೆ ಎಂದರು. 

Minister Madhu Bangarappa says Shivamogga MP is misleading the people

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close