ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ನಡೆದ 77ನೇ ಗಣರಾಜ್ಯೋತ್ಸವ-77th Republic Day celebrations at Nehru Stadium

 SUDDILIVE || SHIVAMOGGA

ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ನಡೆದ 77ನೇ ಗಣರಾಜ್ಯೋತ್ಸವ-77th Republic Day celebrations at Nehru Stadium  

Republic, day


77 ನೇ ಗಣರಾಜ್ಯೋತ್ಸವದ ಅಂಗವಾಗಿನಗರದ ನೆಹರೂ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನಡೆದಿದೆ. ಧ್ವಜಾರೋಹಣವನ್ನ ಸರಿಯಾದ ಸಮಯಕ್ಕೆ ಸಚಿವ ಮಧು ಬಂಗಾರಪ್ಪ ನೆರವೇರಿಸಿದ್ದು ವಿಶೇಷವಾಗಿದೆ. 

ನಂತರ ಸಚಿವರು ತೆರದ ಜೀಪಿನಲ್ಲಿ ಗೌರವ ತುಕಡಿಗಳಿಂದ ಧ್ವಜಾರೋಹಣ ಸ್ವೀಕರಿಸಿದರು.  ಪೌರಕಾರ್ಮಿಕರು, ಪೊಲೀಸ್ ಇಲಾಖೆ, ಶಾಲಾ ಮಕ್ಕಳು, ಗೃಹರಕ್ಷಕ ದಳ, ಪೊಲೀಸ್ ಬ್ಯಾಂಡ್ ಗಳ ಪಥಸಂಚನ ನಡೆಸಿ ಗೌರವ ವಂದನೆ ಸ್ವೀಕರಿಸಿದರು. 


ಸಂವಿಧಾನ 1950 ರ ಜ.26 ಕ್ಕೆ ಜಾರಿಯಾಗಿ ಬದುಕುವ ಹಕ್ಕನ್ನ ನೀಡಿತು. ಸಂವಿಧಾನ ಹಕ್ಕನ್ನ‌ಅರಿತು ಒಙದು ಕೋಟಿ ಶಾಲಾಮಕ್ಕಳು ಸಂವಿಧಾನ ಪೀಠಿಕೆಓದುತ್ತಿದ್ದಾರೆ. ಭಾರತದಲ್ಲಿ ಶಿವಮೊಗ್ಗಕ್ಕೆ ತನ್ನದೇ ಆದ ಸಾಂಸ್ಕೃತಿ ಇದೆ. ಕುವೆಂಪು, ಸಮಾಜವಾದಿ ಸಿದ್ದಾಂತದ ಮೂಲಕ ಜನಪರಕಾಳಜಿಯನ್ನ ಹೊಂದಿದ ಗೋಪಾಲಗೌಡರು ಜನಿಸಿದ ನಾಡು ಇದು ಎಂದರು‌ 

ಐದು ಗ್ಯಾರೆಂಟಿ ಯೋಜಬೆಯ ಮೂಲಕ ಮದ್ಯವರ್ತಿಗಳ ಮೂಲಕ ಜನರಿಗೆ 1 ಲಕ್ಷ 13 ಕೋಟಿ ಹಣ ವ್ಯಯವಾಗುತ್ತಿದೆ. ಜಿಲ್ಗೆ 26_  ಸಾವಿರ ಕೋಟಿ ಹಣಮಾಡಲಾಗುತ್ತಿದೆ. ಶಿವಮೊಗ್ಗದ ಅಭಿವೃಧಧಿಗೆ ಬದ್ದನಾಗಿದ್ದೇನೆ. ಮೆಗ್ಗಾನ್ ಮೇಲ್ದರ್ಜೆ, ಡಿಜಿಟಲ್ ಶವಗಾರಿಕೆ, ಟ್ರೋಮಾಸೆಂಟರ್ ್ಎ ಶೀಘ್ರದಲ್ಲಿಯೇ ಅನುಮೋದನೆ ಪಡೆಯಲಾಗುವುದು. 357 ಕೋಟಿ ಮೊತ್ತದ ನೀರಾವರಿ ಯೋಜನೆಗೆ ಅನುಮೋದನೆ ಪಡೆಯಲಾಗುತ್ತಿದೆ. 


ದಶಕಗಳಿಂದ ಬಾಕಿ ಇರುವ ಶರಾವತಿ ಮತ್ತು ಬಗುರ್ ಹುಕುಂ ಸಂತ್ರಸ್ತರಿಗೆ ಸರ್ವೆ ಕಾರ್ಯ ಮುಗಿಸಿದ್ದು ಅವರಿಗೆ ಶಾಶ್ವತ ಪರಿಹಾರವನ್ನ ನ್ಯಾಯಾಲಯದ ಮೂಲಕವೇ ಕೊಡಿಸಲಾಗುತ್ತಿದೆ. ಪಾಲಿಜೆ ವ್ಯಾಪ್ತಿಯಲ್ಲಿ ವಾರ್ಡ್ ಅಭಿವೃಧಧಿಗೆ 200 ಕೋಟಿ ನೀಡಲಾಗುತ್ತಿದೆ. ಜಿಲ್ಲೆಯ 64 ಪ್ರವಾಸಿತಾಣಗಳ ಸಮಗ್ರ ಅಭಿವೃದ್ಧಿಗೆ ಗುರುತಿಸಲಾಗಿದೆ. ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರ ನೀಡಕಾಗುತ್ತಿದೆ. 

ಮಾದಕವಸ್ತುಗಳ ವಿರುದ್ಧ ಪೊಲೀಸ್ ಇಲಾಖೆ ಪಣತೊಟ್ಟಿದೆ. ಶಿಜ್ಷಣ ಕ್ಷೇತ್ರದಲ್ಲಿ ತಂದಿರುವ ಬದಲಾವಣೆ ಐತಿಹಾಸಿಕವಾಗಿದೆ. ಗುಣಮಟ್ಟದ ಶಿಕ್ಷಣ ನೀಡುವ ಕೆಪಿಎಸ್ ಶಾಲೆ ತೆರೆಯಲಾಗಿದ್ದು 900 ಕೆಪಿಎಸ್ ಶಾಲೆಯಲ್ಲಿ 19 ಶಾಲೆಗಳು ಶಿವಮೊಗ್ಗಕ್ಕೆ ಬೀಡಲಾಗುತ್ತಿದೆ. ಕಂಪ್ಯೂಟರ್ ಕ್ಲಾಸ್ ಗೆ ಒತ್ತು. ಐದು ಸಾವಿರ ಶಾಲೆಗೆ ಗುಣಮಟ್ಟ ಶಾಲೆಗೆ 5000 ಕೋಟಿ ಹಣ ವ್ಯಯಮಾಡಲಾಗುತ್ತಿದೆ ಎಂದರು. 

14499 ಶಿಕ್ಷಕರ ನೇಮಕಚಾಗಿದೆ 51 ಅತಿಥಿ ಶಿಕ್ಷಕರನ್ನ ನೇಮಿಸಲಾಗುವುದು  ಮುಂದಿನ ಶೈಕ್ಷಣಿಕ ವರ್ಷದಲ್ಲಿ 10 ಸಾವಿರ ಶಿಕ್ಚಕರ ನೇಮಕಾತಿ ಮಾಡಲಾಗುವುದು. ಮೊದಲಬಾರಿಗೆ 51 ಸಾವಿರ ಶಿಕ್ಷಕರ ಕೊರತೆಯನ್ನ ನೀಗಿಸಲಾಗಿದೆ ಎಂದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಇದೇವೇಳೆ ಪಥಸಂಚನ ನಡೆಸಿದ ಮೂರು ಶಾಲಾ ಮಕ್ಕಳಿಗೆ ಬಹುಮಾನ ನೀಡಲಾಗಿದೆ.

77th Republic Day celebrations at Nehru Stadium

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close