ಈ ವರ್ಷ 9 ದಿನಗಳನ್ನ ಮಾಂಸ ರಹಿತ ದಿನಗಳೆಂದು ಘೋಷಣೆ- 9 days declared as meat-free days this year

 SUDDILIVE || SHIVAMOGGA

ಈ ವರ್ಷ 9 ದಿನಗಳನ್ನ ಮಾಂಸ ರಹಿತ ದಿನಗಳೆಂದು ಘೋಷಣೆ-  9 days declared as meat-free days this year   

Meet, free

9 ಹಿಂದೂ ಧಾರ್ಮಿಕ ಹಬ್ಬಗಳ ದಿನದಂದು ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶಿಸಿರುವ ಬೆನ್ನಲ್ಲೇ ಮಹಾನಗರ ಪಾಲಿಕೆಯ ಆಯುಕ್ತರು ಮಾಂಸ ರಹಿತ ದಿನ ಗಳೆಂದು ಘೋಷಿಸಿದೆ.

2026 ನೇ ಸಾಲಿನಲ್ಲಿ ನಗರ ವ್ಯಾಪ್ತಿಯಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ ಮಾಡಿ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಆದೇಶಿಸಿದ್ದಾರೆ.‌ ಅದರಂತೆ ಜನವರಿ 30 ರಂದು ನಡೆಯುವ ಸರ್ವೋದಯ ದಿನ ಆಚರಣೆ,  ಫೆಬ್ರವರಿ 15ರಂದು ಮಹಾಶಿವರಾತ್ರಿ 

ಮಾರ್ಚ್ 27ರಂದು ಶ್ರೀ ರಾಮನವಮಿ ದಿನಾಚರಣೆ ಮಾರ್ಚ್ 31ರಂದು ಮಹಾವೀರ ಜಯಂತಿ ಮೇ ಒಂದನೊಂದು ಬುದ್ಧ ಪೂರ್ಣಿಮಾ ಜಯಂತಿ ಸೆಪ್ಟೆಂಬರ್ 4ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಅಕ್ಟೋಬರ್ ಎರಡರಂದು ಗಾಂಧಿ ಜಯಂತಿ ನವಂಬರ್ 25ರಂದು ಸೈಂಟ್ ಟಿಎಲ್ ವಾಸ್ ವಾಣಿ ಜನ್ಮದಿನ ಈ ಒಂಬತ್ತು ಮಾಂಸ ಮಾರಾಟವನ್ನು ನಿಷೇಧಿಸಿ  ಆದೇಶಿಸಿದ್ದಾರೆ. 

ಮಾಂಸ ಮಾರಾಟಗಾರರು 9 ದಿನಗಳನ್ನ ಮಾಂಸ ರಹಿತ ದಿನವೆಂದು ಘೋಷಿಸಿ ಅಂಗಡಿಗಳನ್ನ‌ಮುಚ್ಚಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದರ ಕುರಿತು ಆಯಯಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

9 days declared as meat-free days this year

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close