ಅಕ್ರಮ ಮರಳು ಸಾಗಿಸಲು ಯತ್ನಿಸುತ್ತಿದ್ದ ಲಾರಿಗಳ ಮೇಲೆ ಡಿವೈಎಸ್ಪಿ ದಾಳಿ, ಚಾಲಕ ಪರಾರಿ-DySP raids trucks trying to transport illegal sand, driver flees

 SUDDILIVE || SHIVAMOGGA

ಅಕ್ರಮ ಮರಳು ಸಾಗಿಸಲು ಯತ್ನಿಸುತ್ತಿದ್ದ ಲಾರಿಗಳ ಮೇಲೆ ಡಿವೈಎಸ್ಪಿ ದಾಳಿ, ಚಾಲಕ ಪರಾರಿ-DySP raids trucks trying to transport illegal sand, driver flees     

DySP, raid


ಎರಡು ದೈತ್ಯಾಕಾರದ ಲಾರಿಗಳನ್ನ  ಡಿವೈಎಸ್ಪಿ ಸಂಜೀವ್ ಕುಮಾರ್ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ತಂದಿರಿಸಿದ್ದಾರೆ. ಒಂದರಲ್ಲಿ ಮರಳು ತುಂಬಿದ್ದರೆ ಮತ್ತೊಂದು ಖಾಲಿ ಲಾರಿಯಾಗಿವೆ. 12 ಚಕ್ರದ ಲಾರಿಗಳಲ್ಲಿ ಮರಳನ್ನ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಡಿವೈಎಸ್ಪಿಗೆ ಪತ್ತೆಯಾಗಿವೆ. 

ಹೊಳಲೂರಿನ ತುಂಗಭದ್ರ ನದಿಯ ತಟದಿಂದ ಅಕ್ರಮವಾಗಿ ಮರಳನ್ನ ಎತ್ತಿ ಸಾಗಿಸಲು ಯತ್ನಿಸುತ್ತಿದ್ದಾಗ ಗಸ್ತಿನಲ್ಲಿದ್ದ ಡಿವೈಎಸ್ಪಿ ಮರಳು ತುಂಬಿದ ಒಂದು ಲಾರಿ ಮತ್ತು ಮರಳು ತುಂಬಿಸಬೇಕಿದ್ದ ಮತ್ತೊಂದು ಲಾರಿಯನ್ನ ತಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ತಂದಿರಿಸಿದ್ದಾರೆ. 

DySP, raid

ಎಂದಿನಂತೆ ಲಾರಿ ಚಾಲಕರಿಬ್ಬರು ಸಿನಿಮಿಯಾ ರೀತಿ ಖಡಕ್ ಡಿವೈಎಸ್ಪಿ ಬಾಹುವಿನಿಂದ ತಪ್ಪಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.‌

ಡಿವೈಎಸ್ಪಿ ಸುದರ್ಶನ್ ವಿರುದ್ಧವೇ ಅಕ್ರಮ ಮರಳುಗಾರಿಕೆಯ ದೂರು


ಇದೇ 2017-18 ರ ಸಾಲಿನಲ್ಲಿ ಇದೇ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ವಿಷಯದಲ್ಲಿ ಡಿವೈಎಸ್ಪಿ ಅವರ ವಿರುದ್ಧವೇ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ನ್ಯಾಯಾಲಯದಲ್ಲಿ ಮುಂದುವರೆದಿತ್ತು. ಅದು ಏನಾಗಿದೆ ಎಂಬುದು ಅಪ್ ಡೇಟ್ ಇಲ್ಲ ಆದರೂ ಅಕ್ರಮ ಮರಳಿನ ನಂಟು ಡಿವೈಎಸ್ಪಿ ಅಂತಹ ಪೊಲೀಸರನ್ನೂ ಬಿಟ್ಟಿಲ್ಲ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ. 


ಮತ್ತೋರ್ವ ಡಿವೈಎಸ್ಪಿ ದಾಖಲಿಸಿದ್ದ ಪ್ರಕರಣಗಳು ಏನಾದವು?


ಇದೇ ಪ್ರಶಾಂತ್ ಮುನರೋಳಿ ಎಂಬುವರು ಡಿವೈಎಸ್ಪಿ ಆಗಿದ್ದಾಗ ದಾಳಿ ನಡೆಸಿ ಕಾನೂನು ಬಾಹಿರ ಚಟುವಟಿಕೆಯ ವಿರುದ್ಧ ಒಂದಿಷ್ಟು ದೂರು ದಾಖಲಿಸಿದ್ದರು. ತದನಂತರ ಆ ಪ್ರಕರಣಗಳು ಏನಾದವು, ಚಾರ್ಜ್ ಶೀಟ್ ಆದ್ವಾ? ಅಥವಾ ಬಿರಿಪೋರ್ಟ್ ಬಿದ್ವಾ ಎಂಬುದು? ಗೊತ್ತಾಗಿಲ್ಲ. ಪ್ರಕರಣಗಳು ತಾರ್ಕಿಕ ಅಂತ್ಯ ಕಾಣೋದರಲ್ಲಿ  ನಿಗೂಢ ತಿರುವು ಪಡೆದುಕೊಳ್ಳುತ್ತದೆ. 


ಎಲ್ಲವೂ ಹಿಡನ್ ಅಹೆಂಡಾ...


ದಾಳಿ ಮಾತ್ರ ನಡೆಯೋದು ಗೊತ್ತಾಗುತ್ತೆ? ಆದರೆ ಮಾಧ್ಯಮಗಳ ಕ್ಯಾಮೆರಾ, ಗಮನ ಬೇರೆಡೆ ತಿರುಗುವಷ್ಟರಲ್ಲಿ  ಮುಂದಿನ ಬೆಳವಣಿಗೆಗಳು ನಿಗೂಢವಾಗಿರುತ್ತದೆ. ಇಬ್ಬರು ಡಿವೈಎಸ್ಪಿಗಳ ಕಾನೂನು ಬಾಹಿರ ಚಟುವಟಿಕೆಗಳ ಉದಾಹರಣೆಗಳು ಇವೆಲ್ಲದಕ್ಕೂ ಬ್ರೇಕ್ ಆಗಬೇಕಿತ್ತು. ಆದರೆ ಅಕ್ರಮ ಚಟುವಟಿಕೆ ಹೆಚ್ಚಾಗಿವೆ. 

ಲಾರಿಗಳ ವೀಲ್ ಗಳೆ ಬದಲಾಗಿವೆ. 6 ವೀಲ್ ಲಾರಿಗಳು ಮರೆಯಾಗಿ ಈ ಚಿತ್ರದಲ್ಲಿ ಕಾಣುವ ದೈತ್ಯ ಲಾರಿಗಳು ಬಂದಿಳಿದಿವೆ. ಹೆಚ್ಚಿನ ಸಾರ್ಥ್ಯವನ್ನ ಹೊತ್ತು ಸಾಗುವ ಲಾರಿಗಳು ರಸ್ತೆಗಿಳಿದಿವೆ. ಕಾನೂನು ಬಾಹಿರ ಚಟುವಟಿಕೆ ಮುಂದುವರೆದಿದೆ. ದಾಳಿಗಳು ಮುಂದುವರೆದಿದೆ. ದಾಳಿ ನಡೆಯುವುದು, ಅವುಗಳ ಪ್ರಚಾರತೆ ಪಡೆದುಕೊಳ್ಳುವುದು ಸಹ ಒಂದು ಹಿಡನ್ ಅಜೆಂಡಾ ಎಂದರೂ ತಪ್ಪಾಗಲಾರದು.

DySP raids trucks trying to transport illegal sand, driver flees

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close