ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನಿ ಬಣದ ಹೋರಾಟಕ್ಕೆ ಸಂಧ ಜಯ-A resounding victory for the struggle of the Karnataka Rakshana Vedike Swabhimani faction

SUDDILIVE || SHIVAMOGGA

ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನಿ ಬಣದ ಹೋರಾಟಕ್ಕೆ ಸಂಧ ಜಯ-A resounding victory for the struggle of the Karnataka Rakshana Vedike Swabhimani faction   

Karave, swabhimani

ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ  ಅನ್ಯ ಭಾಷೆ ಗೀತೆಗಳಿಗೆ ನೃತ್ಯ ಮಾಡುವುದನ್ನು ನಿಷೇಧ ಮಾಡುವಂತೆ ಹಾಗೂ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹೀಗಾಗಿ ಇಂದು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಸಂಸ್ಕೃತಿ ಕಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಶಾಲೆ ಹಾಗೂ ಕಾಲೇಜುಗಳು ಅದರ ಕೇಂದ್ರಗಳಾಗಿವೆ. 

ಆದರೆ ಕೆಲವು ಖಾಸಗಿ ಶಾಲಾ-ಕಾಲೇಜುಗಳು ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಒಳ್ಳೆಯ ದೇಶಭಕ್ತಿ ಗೀತೆ ಭಾವಗೀತೆ ಕನ್ನಡ ನಾಡು ನುಡಿಗಳ ಗೀತೆಗಳಿಗೆ ಯಕ್ಷಗಾನಗಳಿಗೆ ಆದ್ಯತೆ ನೀಡದೆ ಅನ್ಯ ಭಾಷೆಯ ಗೀತೆಗಳಿಗೆ ನೃತ್ಯ ಮಾಡುತ್ತಿರುವುದು ಪ್ರತಿ ವರ್ಷ ಕಂಡುಬರುತ್ತದೆ. ಈ ವರ್ಷದಿಂದ ಯಾವುದೇ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಕಳಿಗೆ ಅನ್ಯ ಭಾಷ ಗೀತೆಗಳಿಗೆ ನೃತ್ಯ ಮಾಡಿಸಬಾರದು. ಒಂದು ವೇಳೆ ಮಾಡಿಸಿದ್ದೆ ಆದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹೋರಾಟಕ್ಕಿಳಿಯುವುದು ಅನಿವಾರ್ಯ ಎಂದು ಸಂಘಟನೆ ತಿಳಿಸಿತ್ತು, ಶಿವಮೊಗ್ಗ ಜಿಲ್ಲೆಯಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳಿಗೆ ಆದೇಶ ನೀಡಬೇಕೆಂದು ತಮ್ಮಲ್ಲಿ ವೇದಿಕೆಯು ಮನವಿ ಮಾಡಿಕೊಂಡಿತ್ತು. ಹಾಗೂ ಶಿಕ್ಷಣ ಸಚಿವರು ಈ ವಿಚಾರವಾಗಿ ಸೂಕ್ತ ಆದೇಶವನ್ನು ತಕ್ಷಣವೇ ಹೊರಡಿಸಬೇಕೆಂದು ಸಂಘಟನೆಯು ಆಗ್ರಹಿಸಿತ್ತು. ಸಂಘಟನೆಯು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಡಿಡಿಪಿಐ  ಅವರಿಗೂ ಸಹ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯನ್ನು ಸಹ ಸಲ್ಲಿಸಲಾಯಿತು. ಈ ಕೂಡಲೇ ಖಾಸಗಿ ಶಾಲಾ ವಾಹನಗಳ ಮೇಲೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಶಾಲಾ ವಾರ್ಷಿಕೋತ್ಸವದಲ್ಲಿ ಹಿಂಬದಿಯ ನಾಮ ಫಲಕಗಳು ಸಹ ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕೆಂದು ಸಂಘಟನೆ ಆಗ್ರಹಿಸಿದೆ ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಸಂಘಟನೆ ತಿಳಿಸುತ್ತದೆ. ಇದನ್ನು ಮನಗಂಡ ಉಪ ನಿರ್ದೇಶಕರ ಕಚೇರಿ (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಇವರು ಸುತ್ತೋಲೆಯನ್ನು ಹೊರಡಿಸಿ ಶೀಘ್ರವಾಗಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಕಾರ್ಯಕ್ರಮಗಳ  ಆಯೋಜನೆಯಲ್ಲಿ ಶಾಲಾ ಮುಖ್ಯ ಶಿಕ್ಷಕರುಗಳು ಹಾಗೂ ಶಾಲಾ ಆಡಳಿತ ಮಂಡಳಿಯವರಿಗೆ ಈ ಬಗ್ಗೆ ಮಾಹಿತಿ ನೀಡಲು ಸೂಚಿಸಿದೆ. ಹಾಗೂ ಈ ಸಂಬಂಧ ಶಾಲಾ ಹಂತದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಸಂದರ್ಭದಲ್ಲಿ ಈ ರೀತಿಯ ದೂರು ಬಾರದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ತುರ್ತಾಗಿ ಈ ಬಗ್ಗೆ ಕ್ರಮ ವಹಿಸುವಂತೆ ಆದೇಶ ಮಾಡಿರುತ್ತಾರೆ. ಇದು ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನಿ ಬಣಕ್ಕೆ ಸಂದ ಜಯವಾಗಿದೆ. 

 ಈ ಸಂರ‍್ಭದಲ್ಲಿ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್‌ಎಸ್ ರವರು, ಜಿಲ್ಲಾ ಉಪಾಧ್ಯಕ್ಷರಾದ ಮುಜಿಬುಲ್ಲ, ಜಿಲ್ಲಾ ಪ್ರಧಾನ ಕರ‍್ಯರ‍್ಶಿ ಮಹಮ್ಮದ್‌ಶಫಿ, ವಿಜಯಕುಮಾರ್, ಮಹಿಳಾ ಅಧ್ಯಕ್ಷರಾದ ಕವಿತಾ ಸಿ, ಜ್ಯೋತಿ ಎನ್, ಎಲ್ಲ ಉಪಾಧ್ಯಕ್ಷರಾದ ಪದ್ಮ ಎನ್, ಜಿಲ್ಲಾ ಸಹ ಸಂಘಟನಾ ಕರ‍್ಯರ‍್ಶಿಯಾದ ನೂರುಲ್ಲಖಾನ್, ಯುವ ಅಧ್ಯಕ್ಷ ಸಂತೋಷ, ಯುವ ಘಟಕದ ಪ್ರಧಾನ ಕರ‍್ಯರ‍್ಶಿ ಪ್ರವೀಣ್ ಕುಮಾರ್, ಜಿಲ್ಲಾ ಪ್ರಧಾನ ಕರ‍್ಯರ‍್ಶಿ ಆರತಿ ತಿವಾರಿ, ಸತೀಶಣ್ಣ , ಆರತಿ ತಿವಾರಿ, ಅಶ್ವಥ್, ಅನ್ಸರ್ ಪಾಷಾ, ಸಾದಿಕ್ ಇತರರು ಹಾಜರಿದ್ದರು.

A resounding victory for the struggle of the Karnataka Rakshana Vedike Swabhimani faction

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close