ಚೌಚೌ ಬಾತ್ ಸವಿದ ಸಚಿವರು-Ministers who tasted chow chow bath

 SUDDILIVE || SHIVAMOGGA

ಚೌಚೌ ಬಾತ್ ಸವಿದ ಸಚಿವರು-Ministers who tasted chow chow bath    

Chow, chowbath

ಜಿಲ್ಲಾ ಉಸ್ತುವರಿ ಸಚಿವರಾದ ಮಧು ಬಂಗಾರಪ್ಪ ನಗರದಲ್ಲಿ ಹಲವು ಕಾರ್ಯಕ್ರಮಗಳಿಗೆ  ಚಾಲನೆ ನೀಡಿದ್ದಾರೆ. 

ಮೊದಲಿಗೆ ನಗರದ ಬಿಹೆಚ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಬಾಲಕಿಯರ ಕಾಲೇಜಿಗೆ ಭೇಟಿ ನೀಡಿದ ಸಚಿವರು ಸರ್ಕಾರ ಮತ್ತೊಂದು ಬಾಲಕಿಯರ ಪ್ರಥಮ ದರ್ಜೆ ಕಾಲೇಜನ್ನ‌ ಮಂಜೂರು ಮಾಡಿರುವ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ನೀಡಿದರು. 

ನಂತರ ಶಿವಮೊಗ್ಗದ ವಿದ್ಯಾನಗರ ಮತ್ತು ಗೋಪಾಳದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್ ನ್ನ ಉದ್ಘಾಟಿಸಿದರು. ಈ ಎರಡೂ ಇಂದಿರಾ ಕ್ಯಾಂಟೀನ್ ಆರಂಭಗೊಂಡ ಹಿನ್ನಲೆಯಲ್ಲಿ ನಗರದಲ್ಲಿ ಒಟ್ಟು 6 ಕ್ಯಾಂಟೀನ್ ಶುರುವಾಗಿದೆ. 

ವಿದ್ಯಾಮಗರದಲ್ಲಿ ಕ್ಯಾಂಟೀನ್ ನ್ನ ಉದ್ಘಾಟಿಸಿದಸಚಿವರು ಖಾರಾಬಾತ್, ಕೇಸರಿ ಬಾತ್, ವಾಂಗೀವಾತ್ ನ್ನ ಸವಿದಿದ್ದಾರೆ. ಇವರಿಗೆ ಎಂಎಲ್ ಸಿ ಬಲ್ಕಿಸ್ ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್, ಮಾಜಿ ಕಾರ್ಪರೇಟರ್ ಗಳಾದ ಯಮುನಾ ರಂಗೇಗೌಡರು, ಹಾಪ್ ಕಾಮ್ಸ್ ನ ವಿಜಯಕುಮಾರ್ ಜವಳಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಮಧು, ಮಂಜುನಾಥ್ ಪುರಲೆ ಮೊದಾದವರು ಸಾಥ್ ನೀಡಿದ್ದಾರೆ. 

Ministers who tasted chow chow bath 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close