ದೂರು ಪ್ರತಿದೂರು ದಾಖಲಾದ ಸಾಗರದ ಪ್ರಕರಣ-Sagar's case, Complaint counter complaint lodged

 SUDDILIVE || SAGARA

ದೂರು ಪ್ರತಿದೂರು ದಾಖಲಾದ ಸಾಗರದ ಪ್ರಕರಣ-Sagar case, Complaint counter complaint lodged

Complaint, counter

ಸಾಗರದ ಆಜಾದ್ ನಗರದ ಮಸೀದಿ ರಸ್ತೆಯಲ್ಲಿ ಪರಸ್ಪರ ಬಡಿದಾಡಿಕೊಂಡ ಪ್ರಕರಣದಲ್ಲಿ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆ ದೂರು ದಾಖಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರ ನಡುವೆ ಗಲಾಟೆಯಾಗಿದೆ. 

ಮಸೀದಿ ರಸ್ತೆಯಲ್ಲಿ ಶಹಜಾನ್ ಎಂಬ ಯುವಕ ಬೈಕ್ ನಲ್ಲಿ ಹೋಗುವಾಗ ನಾಲ್ಕೈದು ಯುವಕರು ಇನ್ನೋವಾ ಕಾರಿನಲ್ಲಿ ಬಂದು ಅಡ್ಡ ಹಾಕಿ ನೀನೇನು ರೌಡಿನ? ನಾವು ವಿನೋದ್ ರಾಜ್ ಕಡೆ ಹುಡುಗರು ಆತನ ಬಳಿ ಸಾಕಷ್ಟು ಹಣವಿದೆ ಎಂದು ಜೈಲಿಗೆ ಹೋದರೆ ಬಿಡಿಸಿಕೊಂಡು ಬರ್ತಾನೆ ನಿನ್ನನ್ನ ಕೊಲೆ ಮಾಡದೆ ಬಿಡುವುದಿಲ್ಲ ಎಂದು ಹಲ್ಲೆ ನಡೆದಿರುವುದಾಗಿ ಶಹಜಾನ್ ದೂರು ದಾಖಲಿಸಿದ್ದಾರೆ. 

ಅದೇ ರೀತಿ ಗಣೇಶ್ ಎಂಬುವರು ಕಾರಿನಲ್ಲಿ ಹೋಗುವಾಗ ಶಹಜಾನ್ ಬೈಕ್ ನಲ್ಲಿ ಬಂದು ಅಡ್ಡಹಾಕಿ ಎಸ್ ಎನ್ ನಗರ ರಾಮೇಶ್ವರ ಮಾರ್ಕೆಟ್ ಬಳಿ ನೀವೇಕೆ ಬಂದಿದ್ದೀರಿ ಎಂದು ಹಲ್ಲೆ ಮಾಡಿರುವುದಾಗಿ ದೂರು ದಾಖಲಿಸಿದ್ದಾರೆ. ಇಬ್ವರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.  

ವಿನೋದ್ ರಾಜ್, ಗಣೇಶ ಎಂಬುವರನ್ನ ಸೇರಿಸಿ ಐದು ಜನರ ವಿರುದ್ಧ ಶಹಜಾನ್ ದೂರು ನೀಡಿದ್ದರೆ.  ಶಹಜಾನ್ ಸೇರಿದಂತೆ ಮೂವರ ವಿರುದ್ಧ ಗಣೇಶ ದೂರು ನೀಡಿದ್ದಾರೆ. ಈ ಹಿಂದೆ ಅಂದರೆ 2019 ನೇ ಇಸವಿಯಲ್ಲಿ ಸಾಗರದ ಕಾಲೇಜು ಗಲಾಟೆಯಲ್ಲಿ ದಾಖಲಾದ ದೂರು ಪ್ರತಿದೂರಿನಲ್ಲಿ  ಇವರೆಲ್ಲಾ ಆರೋಪಿತರಾಗಿದ್ದರು. ಈಗ ಇವರ ನಡುವೆ ಗಲಾಟೆಯಾಗಿದೆ. ದೂರು ಪ್ರತಿದೂರು ದಾಖಲಾಗಿದೆ. 

Sagar's case, Complaint counter complaint lodged

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close