ನಿಶ್ಚಿತಾರ್ಥವಾಗಿದ್ದ ಯುವತಿಗೆ ನಿರಂತರ ಮೆಸೇಜ್ ಮಾಡುತ್ತಿದ್ದ ಯುವಕನ ಬರ್ಬರ ಹತ್ಯೆ-A young man who was constantly texting girl was brutally murdered

SUDDILIVE || CHIKKAMAGALORE

ನಿಶ್ಚಿತಾರ್ಥವಾಗಿದ್ದ ಯುವತಿಗೆ ನಿರಂತರ ಮೆಸೇಜ್ ಮಾಡುತ್ತಿದ್ದ ಯುವಕನ ಬರ್ಬರ ಹತ್ಯೆ-A young man who was constantly texting girl was brutally murdered.

Texting, girl

ನಿಶ್ಚಿತಾರ್ಥ ಆದ ಯುವತಿಗೆ ನಿರಂತರ ಮೆಜೇಜ್ ಮಾಡಿ ಟಾರ್ಚರ್ ನೀಡಿದ ಕಾರಣ ತರೀಕೆರೆಯಲ್ಲಿ ಯುವಕನೋರ್ವನ ಬರ್ಬರ ಕೊಲೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ಘಟನೆ ನಡೆದಿದೆ.

ಹುಡುಗಿಗೆ ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್ ಮಾಡಿ ಟಾರ್ಚರ್ ಮಾಡುತ್ತಿದ್ದ ಎಂಬ ಆರೋಪದ ಮೇರೆಗೆ ಬರ್ಬರವಾಗಿ ಹತ್ಯೆಯಾದ ಯುವಕನನ್ನ ಮಂಜುನಾಥ್ (21) ಎಂದು ಗುರುತಿಸಲಾಗಿದೆ. ಆತನ ಮೃತ ದೇಹವನ್ನ ಮೆಗ್ಗಾನ್ ಮರಣೋತ್ತರ ಪರೀಕ್ಷೆ ಕೇಂದ್ರಕ್ಕೆ ತಂದಿರಿಸಲಾಗಿದೆ.

ಯುವತಿಯನ್ನ ಮದುವೆಯಾಗ್ಬೇಕಿದ್ದ ಯುವಕನಿಂದಲೇ ಮರ್ಡರ್ ಆಗಿದೆ. ಮೃತ ಮಂಜುನಾಥನಿಗೆ ಪರಿಚಯವಿದ್ದ ಹುಡುಗಿಗೆ ಪದೇ ಪದೇ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಮೃತ ಮಂಜುನಾಥ್ ತರೀಕೆರೆ ತಾಲೂಕಿನ ಉಡೇವಾ ಗ್ರಾಮದವನಾಗಿದ್ದಾನೆ. ವೇಣು ಜೊತೆ ಎಂಗೇಜ್ಮೆಂಟ್ ಆಗಿದ್ದ ಯುವತಿಗೆ ನಿರಂತರ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ.

ಎಂಗೇಜ್ಮೆಂಟ್ ಆಗಿದೆ ಮೆಸೇಜ್ ಮಾಡ್ಬೇಡ ಎಂದು ಯುವತಿ ತಿಳಿಸಿದ್ದರೂ  ಮೆಸೇಜ್ ಮಾಡುತ್ತಿರುವ ಬಗ್ಗೆ  ವೇಣುಗೆ  ಯುವತಿ ಮಾಹಿತಿ ತಿಳಿಸಿದ್ದಳು. ಮಾತನಾಡ್ಬೇಕು ಬಾ ಎಂದು ಕರೆದು ವೇಣು ಮತ್ತು ಸ್ನೇಹಿತರೆ ಸೇರಿ ಮರ್ಡರ್ ಮಾಡಿರುವುದಾಗಿ ತಿಳಿದು ಬಂದಿದೆ.

ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಗಾಯಗೊಂಡಿದ್ದಾನೆ ಎಂದು ಮಂಜುನಾಥ್ ನನ್ನ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವುಕಂಡಿದ್ದಾನೆ. 

ಯುವತಿಯ ಜೊತೆ ಮದುವೆಯ ನಿಶ್ಚಿತಾರ್ಥವಾಗಿದ್ದ ವೇಣು  ತನ್ನ ಸ್ನೇಹಿತ,ಕಿರಣ್, ಅಪ್ಪು,ಮಂಜು ಜೊತೆ ಸೇರಿ ಮಂಜುನಾಥನ ಜೊತೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಮಂಜುನಾಥ್ ಗೆ ಚಾಕು ಇರಿದು ನಾಲ್ವರು ಎಸ್ಕೇಪ್ ಆಗಿದ್ದಾರೆ.

A young man who was constantly texting girl was brutally murdered   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close