ರಾಷ್ಟ್ರಭಕ್ತರ ಎಚ್ಚರಿಕೆಗೆ ಹೆದರಿತಾ ಜಿಲ್ಲಾಡಳಿತ? ಅಲ್ಲಗೆಳೆದ ಶಾಸಕರು-Is the district administration afraid of the warnings of patriots? The MLAs who denied it

 SUDDILIVE || SHIVAMOGGA

ರಾಷ್ಟ್ರಭಕ್ತರ ಎಚ್ಚರಿಕೆಗೆ ಹೆದರಿತಾ ಜಿಲ್ಲಾಡಳಿತ? ಅಲ್ಲಗೆಳೆದ ಶಾಸಕರು-Is the district administration afraid of the warnings of patriots? The MLAs who denied it 

District, administration


ಶಿವಪ್ಪನಾಯಕನ ಮಾರುಕಟ್ಟೆ ಸಮಸ್ಯೆಯಾಗಿಯೇ ಉಳಿದಿದ್ದನ್ನ ಬಗೆಹರಿಸಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಲ್ಲಿ ಮಳಿಗೆ ಹಂಚಿಕೆಯಾಗಿದೆ ಎಂದು ಶಾಸಕ ಚೆನ್ನಬಸಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  

2008 ರಲ್ಲಿ ಶಿವಪ್ಪನಾಯಕ ಮಾರುಕಟ್ಟೆ ನವೀಕರಣ ಯೋಚನೆ ಆರಂಭವಾಗಿತ್ತು. ಹೂವಿನ ಮಾರುಕಟ್ಟೆ ಮತ್ತು ಕಚೇರಿಗಳನ್ನ ಮಾತುಕತೆ ಮೂಲಕ ಬದಲೀ ವ್ಯವಸ್ಥೆ ನಿರ್ಣಯದ ಪರಿಣಾಮ ಮಾರುಕಟ್ಟೆಯ ನೂತನ ಕಟ್ಟಡ ಆರಂಭಗೊಂಡಿತ್ತು.

ಅನೇಕ ವರ್ಷಗಳ ಕಾಲ ಕಾರ್ಯ ನಡೆದಿದೆ. 117 ಹೂವಿನ ಮತ್ತು ಗ್ರಂಥಿಕೆ ಅಂಗಡಿಗಳು ನೀಡಲು ನಿನ್ನೆ ಸಂಪೂರ್ಣಗೊಂಡಿದೆ. ಹೂವಿನ ಅಂಗಡಿಗಳನ್ನ ಮಲ್ಟಿ ಲೆವೆಲ್ ಕಾರುಪಾರ್ಕಿಂಗ್ ನಲ್ಲಿ  ನೀಡಲಾಯಿತು. 17 ವರ್ಷದ ನಂತರ ನಿನ್ನೆ 2025 ಡಿ.31 ರಂದು 117 ಅಂಗಡಿ ಹಂಚಲಾಗಿದೆ ಎಂದರು. 

ಸಮಸ್ಯೆ ಜಟಿಲವಾಗುವ ಸಾಧ್ಯತೆ ಇತ್ತು. ಹಿಂದಿನ ಡಿಸಿ ಪಂಕಜ್ ಕುಮಾರ್ ಪಾಂಡೆ ಅವರ ಯೋಚನೆಯಿಟ್ಟುಕೊಂಡು ಹಂಚಲಾಯಿತು. 12 ವರ್ಷಕ್ಕೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿದೆ. ಇದನ್ನ ಪಾಲಿಕೆ ಆಯುಕ್ತರು ಮತ್ತು ರೆವೆನ್ಯೂ ವಿಭಾಗದ ಅಧಿಕಾರಿಗಳ ಶ್ರಮವಿದೆ. ಹಳೇ ಕಟ್ಟಡದಲ್ಲಿ ಯಾರು ಯಾರು ಇದ್ದಾರೊ ಉದಾಹರಣೆಗೆ ಸಿಟಿ ಕೋಪರೇಟಿವ್ ಬ್ಯಾಂಕ್, ಬಿಜೆಪಿ ಕಾಂಗ್ರೆಸ್ ಕಚೇರಿಗೆ ನೀಡಲಾಗಿತ್ತು. ಇವರಿಗೂ ಮತ್ತು ಉಳಿದ ಕಟ್ಟಡದ ಮಳಿಗೆಯನ್ನೂ ಹಂಚಲಾಗುವುದು. ಬಾಕಿ ಉಳಿದರೆ ಅದನ್ನ ಟೆಂಡರ್  ಮೂಲಕ ಹಂಚಲಾಗುವುದು ಎಂದರು. 

ವೀರಶೈವ ಕಲ್ಯಾಣ ಮಂದಿರದ ರಸ್ತೆಯಲ್ಲಿರುವ ಹೂವಿನ ಮಳಿಗೆಗಳು ಮತ್ತು ಖಾಸಗಿ ಬಸ್ ನಿಲ್ದಾಣದ ಹೂವಿನ‌ಮಳಿಗೆ ಕಟ್ಟಡಕ್ಕೆ ಹೋಗಲಿದೆ. ಹೊಸಬರು ಬಾರದಂತೆ ಎಚ್ಚರಿಕೆ ವಹಿಸಲಾಗಿದೆ. ಅಂಡರ್ ಪಾಸ್ ಸಮಸ್ಯೆಯಾಗಿದೆ. ಅಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಹಂಚುವ ಬಗ್ಗೆ ಚಿಂತಿಸಲಾಗುವುದು ಎಂದರು. 

ರಾಷ್ಟ್ರಭಕ್ತರ ಬಳಗದ ಒತ್ತಡಕ್ಕೆ ಮಣಿದು ಮಳಿಗೆ ಹಂಚಿಕೆ ಯಾಗುತ್ತಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಾಸಕರು ಹೆದರುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳ ಸತತ ಪ್ರಯತ್ನದಿಂದ ನಡೆದಿದೆ. ಕಾಗೆ ಕೂರಕ್ಕೂ ಕೊಂಬೆ ಮುರಿಯುವುದಕ್ಕೂ ಈ ಹಂಚಿಕೆಯಾದರೂ ಆಗಿರಬಹುದು ಎಂಬ ಹೇಳಿಕೆ ಕುತೂಹಲ ಮೂಡಿಸಿದೆ. 

ರಾಷ್ಟ್ರಭಕ್ತರ ಬಳಗದ ಕಾಂತೇಶ್ ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಪಾಲಿಕೆಗೆ ಜ.3 ರಂದು ಸಮಯ ನಿಗದಿ ಪಡಿಸಿ ಮಳಿಗೆ ಹಂಚಬೇಕೆಂದುಎಚ್ಚರಿಸಿದರು. ಅವರ ಎಚ್ಚರಿಕೆಗೆ ಪಾಲಿಕೆ ಹೆದರುವ ಮಾತೇಇಲ್ಲ ಎಂದು ಶಾಸಕರು ಅಲ್ಲಗೆಳೆದಿದ್ದಾರೆ. 


ಬಡವರ ಶಾಪಕ್ಕೆ ಗುರಿಯಾಗಲಿದೆ ಕಾಂಗ್ರೆಸ್


25-40 ವರ್ಷಗಳಿಂದ ವಾಸವಾಗಿರುವವರಿಗೆ  ಹಕ್ಕುಪತ್ರ ನೀಡಲಾಗುತ್ತಿಲ್ಲ.  ಒಂದು ಜಾಗದಲ್ಲಿ ಅಕ್ರಮ ಮನೆಗಳನ್ನ ಕಟ್ಟಲು ಬಿಡಲಾಗಿದೆ. ಉದಾಹರಣೆಗೆ ಕೋಗಿಲು ಬಡಾವಣೆಯಲ್ಲಿನ ಅಕ್ರಮ ಮನೆಗಳಿಗೆ 22 ಕೋಟಿ ವೆಚ್ಚದಲ್ಲಿ ಕಟ್ಟಿರುವ ಮನೆ ಹಂಚಿಕೆಗೆ ಸರ್ಕಾರ ಆದೇಶಿಸಲಾಗಿದೆ. ಶಿವಮೊಗ್ಗದಲ್ಲಿ 814 ಜನರಿಗೆ ಪರಿಹಾರ ನೀಡಲಾಗುತ್ತಿಲ್ಲ. ಸರ್ಕಾರದ ದ್ವಂಧ್ವ ನೀತಿಯಿಂದಾಗಿ ಈ ಎಲ್ಲ ಸಮಸ್ಯೆಯಾಗಿದೆ. ಒಬ್ಬೊಬ್ವರಿಗೆ ಒಂದೊಂದು ಕಾನೂನು ಜಾರಿಯಾಗಿದೆ ತೆರಿಗೆ ಹಣ ಕಟ್ಟಿದವರಿಗೆ ನ್ಯಾಯಕೊಡಿ ಎಂದರೆ ಕಥೆ ಹೇಳಲಾಗುತ್ತಿದೆ. ಬಡವರ ಶಾಪಕ್ಕೆ ಕಾಂಗ್ರೆಸ್ ಗುರಿಯಾಗುತ್ತಿದೆ. 

147 ಯಾರು ಇವರು ನಿಮ್ಮ‌ಮೊಮ್ಮಕ್ಕಳ, ಆಶ್ರಯ ಮನೆಗಾಗಿ ಹಣಕಟ್ಟಿದವರು ಯಾರು?  ವಲಸೆ ಬಂದು ಅಕ್ರಮ ಮನೆಕಟ್ಟಿಕೊಂಡವರಿಗೆ ಬದಲೀ ವ್ಯವಸ್ಥೆ ಮಾಡುತ್ತೀರಿ. ಆಶ್ರಯ ಮನೆಗೆ ಅರ್ಜಿ ಹಾಕಿ ಹಣಕಟ್ಟಿದರೂ ಶಿವಮೊಗ್ಗದಲ್ಲಿ ಹಂಚಲಾಗಿಲ್ಲ ಎಂದು ದೂರಿದರು‌. ಇದನ್ನ ಕೇಳಿದರೆ ದ್ವೇಷ ಭಾಷಣ ಆಗಲಿದೆ ಎಂದರು. 

Is the district administration afraid of the warnings of patriots? The MLAs who denied it 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close