ಕೋಗಿಲುಗಿಂತ ಮುನ್ನ ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡಿ-ಆರಗ ಆಗ್ರಹ-Aarag demands that Sharavati victims be given rights certificates before Kogilu victims

SUDDILIVE || SHIVAMOGGA

ಕೋಗಿಲುಗಿಂತ ಮುನ್ನ ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡಿ-ಆರಗ ಆಗ್ರಹ-Aarag demands that Sharavati victims be given rights certificates before Kogilu victims

Araga, demands



ಮೊನ್ನೆ ಬೆಂಗಳೂರಿನಲ್ಲಿ ಕೋಗಿಲು ಗ್ರಾಮದಲ್ಲಿ ಅನಾದಿಕೃತವಾಗಿ ನಿರ್ಮಿಸಿದ ಶೇಡ್ ರಾಜ್ಯಸರ್ಕಾರ ಕಿತ್ತು ಹಾಕಿದೆ. ಅದಾದ ನಂತರ ದೊಡ್ಡ ಗಲಾಟೆ ನಡೆದು ಕೇರಳದ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದರು. ಆದರಿಂದ ರಾಜ್ಯ ಸರ್ಕಾರ ಬಹಳ ಗಡಿಬಿಡಿಯಾಗಿ ಕೂಡಲೇ ಹಕ್ಕುಪತ್ರ ನೀಡಲು ಮುಂದಾಗಿರುವುದಕ್ಕೆ ಶಾಸಕ ಆರಗ ಜ್ಞಾನೇಂದ್ರ ಆಕ್ಷೇಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೊದಲು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡಲು ವಿಫಲವಾಗಿರುವ ಸರ್ಕಾರ‌ ಕೋಗಿಲು ಬಡಾವಣೆಯ ಅನಧಿಕೃತ ಸಂತ್ರಸ್ತರಿಗೆ ಪರಿಹಾರ ನೀಡಲು ಮುಂದಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.  

ಕೋಗಿಲು ಸಂತ್ರಸ್ತರು ಯಾರು ಏನು ಎಲ್ಲಿಂದ ಬಂದವರು ಎಂಬ   ದಾಖಲೆ ಸಹ ಅವರ ಬಳಿ ಇಲ್ಲ.ರಾಜ್ಯ ಸರ್ಕಾರದಲ್ಲಿ ಅನಾದಿಕೃತವಾಗಿ ಬರುವವರಿಗೆ  ಬಹಳ ಆಧ್ಯತೆ ನೀಡಲಾಗಿದೆ.ಅವರಿಗೆ ಎಲ್ಲರಿಗೂ ಸಹ ರೇಷನ್ ಕಾರ್ಡ್ಗಳನ್ನು ಸಹ ನೀಡಲಾಗಿದೆ. ಅವರನ್ನು ಕರೆಸಿ ಅಲ್ಲಿ ಕೂರಿಸಿ 50 ಲಕ್ಷ ಹಣವನ್ನು ಕೆಲ ಸಚಿವರು  ಸಹ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. 

ಜಮ್ಮು ಕಾಶ್ಮೀರ ಆಂಧ್ರ  ಕೇರಳ ಸೇರಿದಂತೆ ಅನೇಕ ಕಡೆಯವರು ಅಲ್ಲಿ ಬಂದು ನೆಲೆಸಿದ್ದಾರೆ. ಎಲ್ಲೆಲ್ಲಿಂದಲೂ ಬಂದವರಿಗೆ ಸರ್ಕಾರ ಫ್ಲಾಟ್ ನೀಡುತ್ತಾರೆ ಎಂದರೆ ಆಶ್ಚರ್ಯ ಆಗುತ್ತದೆ. ಆದರೆ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಇಲ್ಲಿ ಎಲ್ಲ ಕಡೆ ತಂದು ಹಾಕಿ ಕಾಡಿನಲ್ಲಿ ಕೂರಿಸಿದ್ದಾರೆ. ರಾಜ್ಯಕ್ಕೆ ಬೆಳಕು ಕೊಟ್ಟಂತಹ ಕುಟುಂಬಗಳಿಗೆ  ಇಂದು ಪರದಾಡುವ ಪರಿಸ್ತಿತಿ ನಿರ್ಮಾಣ ವಾಗಿದೆ ಎಂದು ದೂರಿದರು. 

ವಿಪರ್ಯಾಸ ಎಂದರೆ  ಆ  ರೈತರಿಗೆ ಇನ್ನೂ ಸಹ ಜಾಗವನ್ನು ಮಂಜೂರು ಮಾಡಿ ಹಕ್ಕುಪತ್ರ ನೀಡಲಿಲ್ಲ. 60 ವರ್ಷದಿಂದ ಬದುಕು ಕಟ್ಟಿಕೊಂಡ ನಮ್ಮ ರೈತರಿಗೆ ಜಾಗ ನೀಡಲಿಲ್ಲ. ಕೋಗಿಲು ಸಮುದಾಯ ಓಟ್ ಬ್ಯಾಂಕ್ ಸಮುದಾಯವಾಗಿದೆ. ಆದ್ದರಿಂದ ಅವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಆರೋಪಿಸಿದರು. 

ಶರಾವತಿ ಸಂತ್ರಸ್ತರಿಗೆ ಹಕ್ಕು ಪತ್ರ ನೀಡುವ ವಿಚಾರವಾಗಿ  ಒಂದು ವರೆ ವರ್ಷದಿಂದ ನಾವೆಲ್ಲರೂ ಹೋರಾಟ ಮಾಡಿದ್ದೇವೆ. ಆ ವಿಚಾರವಾಗಿ ಸರ್ವೇ ಕಾರ್ಯವೂ ಸಹ ನಡೆದಿದೆ ಎಂದು ಹೇಳಲಾಗಿದೆ. ಆದರೆ ಇದುವರೆಗೂ ಯಾವುದೇ ಉಪಯೋಗ ಆಗಲಿಲ್ಲ. ಕೋಗಿಲು ನಲ್ಲಿ ಒಂದು ಸಮುದಾಯಕ್ಕೆ ಕೊಟ್ಟ ಬೆಂಬಲ ಶರಾವತಿ ಸಂತ್ರಸ್ತರಿಗೆ ರಾಜ್ಯಸರ್ಕಾರ  ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. 

ಆದ್ದರಿಂದ ಈ ಕೃತ್ಯವನ್ನು ನಾವು ಖಂಡಿಸುತ್ತೇವೆ. ಅವರಿಗೆ ಹಕ್ಕು ಪತ್ರ ನೀಡುವ ಮೊದಲು ಶರಾವತಿ ಸಂತ್ರಸ್ತರಿಗೆ ಕೊಡಬೇಕು. ನಮ್ಮ ಸರ್ಕಾರ ಬಂದರೆ  ಸಂತ್ರಸ್ತರಿಗೆ ಹಕ್ಕು ಪತ್ರ ನೀಡುತ್ತೇವೆ ಎಂದು ಡಿಕೆ ಶಿವಕುಮಾರ್ ಪಾದಯಾತ್ರೆ ಸಹ ಮಾಡಿದ್ದರು. ಆದರೆ ಸರ್ಕಾರ ಬಂದು 3 ವರ್ಷವಾದರೂ ಯಾವುದೇ ಉಪಯೋಗ ಆಗಲಿಲ್ಲ. 

ಈಗ  ಜಿಲ್ಲಾಧಿಕಾರಿಯನ್ನು  ವರ್ಗಾವಣೆ ಮಾಡಲಾಗಿದೆ. ಅವರಿಗೆ ಶರಾವತಿ ಸಂತ್ರಸ್ತರ ಬಗ್ಗೆ ಸ್ವಲ್ಪ ಮಾಹಿತಿ ಇತ್ತು. ಆದರೆ ಈಗ ಬಂದ ಹೊಸ  ಜಿಲ್ಲಾಧಿಕಾರಿ ಇಲ್ಲಿನ ರೈತರ ಸಮಸ್ಯೆ ಬಗ್ಗೆ ಅಭ್ಯಾಸ ಮಾಡಬೇಕು. ಅದು ಎಷ್ಟು ಸಮಯ ಆಗುತ್ತದೆಯೋ ಗೊತ್ತಿಲ್ಲ. ರಾಜ್ಯ ಸರ್ಕಾರ ಶರಾವತಿ ಸಂತ್ರಸ್ತರಿಗೆ  ಮೋಸ.ಮಾಡಿದೆ ಎಂದು ದೂರಿದರು. 

ಕೋಗಿಲು ಸಮುದಾಯಕ್ಕೆ ಹಕ್ಕು ಪತ್ರ ನೀಡುವ ಮೊದಲು ಶರಾವತಿ ಸಂತ್ರಸ್ತರಿಗೆ ಹಕ್ಕು ಪತ್ರ ನೀಡಬೇಕು ಎಂದರು. 

ಶಾಸಕ ಭರತ್ ರೆಡ್ಡಿಯನ್ನ‌ಬಂಧಿಸಿ

ಬಳ್ಳಾರಿ ಘಟನೆ ವಿಚಾರಶೋಚನೀಯವಾದ ಸಂಧರ್ಭ ಎದುರಾಗಿದೆ. ಅನಾವಶ್ಯಕವಾಗಿ  ಒಬ್ಬನ  ಜೀವ ಹೋಗಿದೆ. 5 ನಿಮಿಷ ಸಾಕು ಮನೆ ಸುಟ್ಟು ಹಾಕುತ್ತೇನೆ ಎಂದು ಶಾಸಕ ಭಾರತ ರೆಡ್ಡಿ ಹೇಳಿದ್ದಾರೆ. ಅಂಥ ಹೇಳಿಕೆ ನೀಡಿರುವ ಭರತ ರೆಡ್ಡಿಯನ್ನು ಮೊದಲು ಬಂಧಿಸಬೇಕು ಎಂದು ಆಗ್ರಹಿಸಿದರು. 

ಜನಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ. ಅವರನ್ನು ಮೊದಲು ಧ್ವೇಷ ಭಾಷಣ ವಿರೋಧಿ ಕಾಯ್ದೆಯಲ್ಲಿ ಬಂಧಿಸಬೇಕು. ಒಬ್ಬ ಶಾಸಕರಾದವರು ಈ ರೀತಿ ಮಾತನಾಡುವುದು ತಪ್ಪು ಎಂದು ಒತ್ತಿಹೇಳಿದರು. 

ತೀರ್ಥಹಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ

ತೀರ್ಥಹಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದುಹೋಗಿದೆ. 6 ಎಕರೆ ಬಂಡೆ ಅಕ್ರಮವಾಗಿ ತೀರ್ಥಹಳ್ಳಿಯಲ್ಲಿ ನಡೆಸಲಾಗುತ್ತಿದೆ. ಅದನ್ನ‌ ಕಾಂಗ್ರೆಸ್ ನವರೆ ನಡೆಸುತ್ತಿದ್ದಾರೆ. ಇದನ್ನ ನಿಲ್ಲಿಸಲು ಹೋದರೆ ಕಾಂಗ್ರೆಸ್ ಮಾಜಿ ಸಚಿವರೆ ಕಾರ್ಮಿಕರ ಪ್ರತಿಭಟನೆ ನಡೆಸುತ್ತಾರೆ. ಡಿಸಿ ಮತ್ತು ತಹಶೀಲ್ದಾರ್ ಅವರ ಭೇಟಿ ವೇಳೆಯಲ್ಲೇ ಬ್ಲಾಸ್ಟ್ ಆಗಿದೆ ಎಫ್ಐಆರ್ ಆದರೂ ಅವರನ್ನ ಬಂಧಿಸಿಲ್ಲ. 

ನನ್ನ ಸಮಯದಲ್ಲಿ ಕಲ್ಲುಕೋರೆ ನಿಂತಿತ್ತು. ಕಾನೂನು ಬಾಹಿರವಾಗಿ ಕಲ್ಲುಕೋರೆ ನಡೆಸಬಾರದು ಎಂಬುದು ನಮ್ಮ ಒತ್ತಾಯವಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕು ಪತ್ರ ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದರು. 

Aarag demands that Sharavati victims be given rights certificates before Kogilu victims    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close