ಬೀದಿ ನಾಯಿ ದತ್ತು ಪಡೆಯಲು ಅರ್ಜಿ ಆಹ್ವಾನ- Application invitation for stray dog ​​adoption

SUDDILIVE || SHIVAMOGGA

ಬೀದಿ ನಾಯಿ ದತ್ತು ಪಡೆಯಲು ಅರ್ಜಿ ಆಹ್ವಾನ- Application invitation for stray dog ​​adoption   

Stray, dog


ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಬೀದಿನಾಯಿಗಳನ್ನು  ದತ್ತು ಪಡೆದು ಪೋಷಿಸಲು, ಅರ್ಜಿ ಆಹ್ವಾನಿಸಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪು ಹಾಗೂ ಸರ್ಕಾರದ ಆದೇಶಗಳ ಅನುಸಾರ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಣ ಮಾಡಲು ಹಾಗೂ ವಿವಿಧ ಸಾರ್ವಜನಿಕ / ಖಾಸಗಿ ವಿದ್ಯಾಸಂಸ್ಥೆ, ಆಸ್ಪತ್ರೆಗಳು, ಬಸ್ಟ್ಯಾಂಡ್, ರೈಲ್ವೆ ಸ್ಟೇಷನ್, ಸ್ಟೇಡಿಯಂ, ಆವರಣದಲ್ಲಿರುವಂತಹ ಬೀದಿನಾಯಿಗಳನ್ನು, ಸ್ಥಳಾಂತರಿಸಿ ಪುನರ್ ಆಶ್ರಯ ನೀಡಬೇಕು ಎಂದು ಆದೇಶಿಸಲಾಗಿದೆ.

ಅದರಂತೆ ಬೀದಿನಾಯಿಗಳನ್ನು ದತ್ತು ಪಡೆದು ಪೋಷಿಸಲು ಇಚ್ಚಿಸುವವರು, ಪ್ರಾಣಿಗಳನ್ನು ಸಂರಕ್ಷಿಸಲು ಆಸಕ್ತ ಎನ್.ಜಿ.ಓ ಸಂಘ ಸಂಸ್ಥೆಗಳು, ಪ್ರಾಣಿದಯಾ ಸಂಘಗಳು ಹಾಗೂ ಇತರ ಪ್ರಾಣಿ ಪ್ರಿಯರು ಬೀದಿನಾಯಿಗಳನ್ನು ದತ್ತು ಪಡೆಯಲು ಅಥವಾ ಆಶ್ರಯ ತಾಣದಲ್ಲಿರುವ ಬೀದಿನಾಯಿಗಳಿಗೆ ಆಹಾರವನ್ನು ಪೂರೈಸಲು ಇಚ್ಛಿಸುವವರಿದ್ದಲ್ಲಿ, ಕೂಡಲೇ ಶಿವಮೊಗ್ಗ ಮಹಾನಗರ ಪಾಲಿಕೆ ಆರೋಗ್ಯ ವಿಭಾಗ / ನಲ್ಕ್ ವಿಭಾಗವನ್ನು ಸಂಪರ್ಕಿಸಬಹುದಾಗಿದೆ.

Application invitation for stray dog ​​adoption  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close