ಹಿರೇಬಿಲಗುಂಜಿಯಲ್ಲಿ ಚಿರತೆ ಪ್ರತ್ಯಕ್ಷ, ಭಯದಲ್ಲಿ ಗ್ರಾಮಸ್ಥರು-Leopard sighted in Hirebilagunji, villagers in fear

SUDDILIVE || SHIVAMOGGA

ಹಿರೇಬಿಲಗುಂಜಿಯಲ್ಲಿ ಚಿರತೆ ಪ್ರತ್ಯಕ್ಷ, ಭಯದಲ್ಲಿ ಗ್ರಾಮಸ್ಥರು-Leopard sighted in Hirebilagunji, villagers in fear     

Leopard, villergers


ಸಾಗರ ವ್ಯಾಪ್ತಿಯಲ್ಲಿ  ಚಿರತೆಯೊಂದು ಕಾಣಿಸಿಕೊಂಡಿದ್ದು,    ಜನತೆ ಓಡಾಡಲು ಭಯಭೀತಿಗೊಂಡಿದ್ದಾರೆ. ಗಿಡಗಳ ಪೊದೆಯಲ್ಲಿ ಬೇಟೆಗಾಗಿ ಹೊಂಚು ಹಾಕಿ ಕುಳಿತ ಚಿರತೆಯೊಂದನ್ನ ಗ್ರಾಮಸ್ಥರು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. 


ಸಾಗರ ತಾಲೂಕಿನ ತ್ಯಾಗರ್ತಿ ಸಮೀಪದ ಹಿರೇಬಿಲಗುಂಜಿ ಗ್ರಾ ಪಂ ವ್ಯಾಪ್ತಿಯ ಕೆಳಗಿನಮನೆ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ. ಚಿರತೆ ಕಂಡು ಕೆಲ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆಯವರಿಗೆ ವಿಡಿಯೋ ಮಾಡಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ಗ್ರಾಮಗಳಲ್ಲಿ ಓಡಾಡುವ ದೃಶ್ಯ ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದೆ. ಚಿರತೆ ಓಡಾಟದಿಂದ ಗ್ರಾಮಸ್ಥರು ಭಯದಿಂದ ಬದುಕುವಂತಾಗಿದೆ. 

Leopard sighted in Hirebilagunji, villagers in fear 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close