SUDDILIVE || SHIVAMOGGA
ಚೆಕ್ ಬೌನ್ಸ್ ಕೇಸ್ ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ-Absconding accused in cheque bounce case arrested
ಚೆಕ್ ಬೌನ್ಸ್ ಕೇಸ್ ನಲ್ಲಿ ಕಳೆದ ಮೂರು ವರ್ಷಗಳಿಂದ ನ್ಯಾಯಾಲಯಕ್ಜೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನ ದೊಡ್ಡಪೇಟೆ ಪೊಲೀಸರು ಪತ್ತೆಹಚ್ಚಿ ಆತನನ್ನ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ದೊಡ್ಡಪೇಟೆ ಪೋಲೀಸ್ ಠಾಣೆ NI act ಕಲಂ 138 ರ ಪ್ರಕರಣದ ಆರೋಪಿ ನದೀಂ ಬಿನ್ ಅನ್ವರ್ ವಾಸ ಅಶೋಕ ನಗರ ಶಿವಮೊಗ್ಗ ಈವನು ಕಳೆದ ಸುಮಾರು 3 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದು, ಮಾನ್ಯ PCJ &JMFC ನ್ಯಾಯಾಲಯ ಶಿವಮೊಗ್ಗದ CC ನಂ 1464/2018 ರಲ್ಲಿ ಮಾನ್ಯ ನ್ಯಾಯಾಲಯವು ಆರೋಪಿತರ ವಿರುದ್ಧ ಕನ್ವಿಕ್ಷನ್ ವಾರೆಂಟ್ ಅನ್ನು ಹೊರಡಿಸಿದ್ದರು.
ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ರವಿ ಸಂಗನಗೌಡ ಪಾಟೀಲ್, ಮಂಜುನಾಥ, CHC ಮತ್ತು ಶ್ರೀ ರವೀಂದ್ರ CPCರವರು ಆರೋಪಿಯ ದಸ್ತಗಿರಿ ಕರ್ತವ್ಯಕ್ಕೆ ನೇಮಕ ಮಾಡಲಾಗಿದ್ದು, ಸದರಿಯವರು ಪ್ರಕರಣದ ಆರೋಪಿತಯನ್ನು ದಿನಾಂಕಃ 05-01-2026 ರಂದು ಆಯನೂರು ಗ್ರಾಮದಲ್ಲಿ ಪತ್ತೆಮಾಡಿ ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಸದರಿಯವರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿರುತ್ತದೆ.
ಸಿಬ್ಬಂಧಿಯವರ ಉತ್ತಮ ಕಾರ್ಯವನ್ನು ಪ್ರಶಂಸಿಸಿ ಅಭಿನಂದಿಸಲಾಗಿರುತ್ತದೆ.
Absconding accused in cheque bounce case arrested

